ಸಮಾಜ ಸೇವೆಯಿಂದ ನೊಂದ ಜೀವಗಳಿಗೆ ಭರವಸೆ ನೀಡುತ್ತಿರುವ ರಾಹುಲ್!
ಸಿಂಪಲ್ ಯುವನಾಯಕನ ಕಲರ್‌ಫುಲ್ ಅಭಿವೃದ್ಧಿ ಕನಸು
ಬೆಳಗಾವಿ:
ಗೋಕಾಕ ಎಂದರೆ ತಟ್ಟನೇ ನೆನಪಿಗೆ ಬರುವುದು ಒಂದು ಗೋಕಾಕ ಫಾಲ್ಸ್. ಇನ್ನೊಂದು ಪ್ರತಿಷ್ಠಿತ ಜಾರಕಿಹೊಳಿ ಕುಟುಂಬ.
ಪ್ರಭಲ ಹಿಡಿತ
ಸಮಾಜ ಸೇವೆಯನ್ನೇ ಉಸಿರಾಗಿಸಿಕೊಂಡಿರುವ ಜಾರಕಿಹೊಳಿ ಕುಟುಂಬ ರಾಜ್ಯ ರಾಜ್ಯಕಾರಣದ ಮೇಲೆ ಪ್ರಬಲ ಹಿಡಿತ ಹೊಂದಿದೆ. ಈ ಕುಟುಂಬ ರಾಜಕೀಯ ಪಕ್ಷಕ್ಕಿಂತ ವೈಯಕ್ತಿಕವಾಗಿ ವರ್ಚಸ್ಸು ಸಹ ಹೊಂದಿದೆ. ಈ ಕುಟುಂಬದ ಕೊಂಡಿ ಯುವ ನಾಯಕ ರಾಹುಲ್ ಜಾರಕಿಹೊಳಿ.

ಹೌದು, ತಂದೆಯಂತೆ ಸದಾ ಸಿಂಪಲ್ ಆಗಿಯೇ ಓಡಾಡುವ ಈ ಯುವ ನಾಯಕ ತನ್ನೊಳಗೆ ಅಭಿವೃದ್ಧಿಯ ಸಾಕಷ್ಟು ಕನಸುಗಳನ್ನು ಹೆಣೆದುಕೊಂಡಿದ್ದಾರೆ. ಸತೀಶ ಜಾರಕಿಹೊಳಿ ಫೌಂಡೇಷನ್ ಮೂಲಕ ನೊಂದ ಜೀವಗಳಿಗೆ ಭರವಸೆ ಹೊಂಬೆಳಕು ತೋರುತ್ತಾ ಬರುತ್ತಿದ್ದಾರೆ. ತಮ್ಮ ತಂದೆ ಹಾಕಿಕೊಟ್ಟ ಹಾದಿಯಲ್ಲಿ ನಡೆಯುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲೇಯೇ ಸಮಾಜದಲ್ಲಿ ಬೇರೂರಿರುವ ಅನಿಷ್ಟ ಪಿಡುಗುಗಳಿಗೆ ಇತಿಶ್ರೀ ಹಾಕಲು ಪಣತೊಟ್ಟು, ಸಮಾಜದಲ್ಲಿ ಅಂಧ ಶ್ರದ್ಧೆ, ಅಜ್ಞಾನಮುಕ್ತ ಸಮಾಜ ನಿರ್ಮಾಣ ಕಾಯಕದಲ್ಲಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ತಂದೆಗೆ ಹಾಜರಾಗಲು ಸಾಧ್ಯವಾಗದೆ ಇರುವ ಕಾರ್ಯಕ್ರಮಗಳಲ್ಲಿ ಅವರ ಪರವಾಗಿ ತಾವೇ ನಇಂತು ಯುವಜನರಿಗೆ ಮಾದರಿಯಾಗುವ ಮೂಲಕ ಬದುಕುಕಟ್ಟಿ ಕೊಳ್ಳುವುದಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾರೆ.

ಸೇವೆಗಾಗಿ ಪ್ರತಿಷ್ಠಾನ:
ತಂದೆಯ ಮಾರ್ಗದರ್ಶನದಲ್ಲಿ ಅವರ ಜತೆ ಜತೆಯಲ್ಲೇ ನಿಸ್ವಾರ್ಥ ಸಮಾಜ ಸೇವೆಯನ್ನುನಡೆಸಲು ರಾಹುಲ್ ಜಾರಕಿಹೊಳಿ ಅವರು ಸತೀಶ ಜಾರಕಿಹೊಳಿ ಫೌಂಡೇಷನ್ ಆರಂಭಿಸಿ, ಪ್ರತಿಷ್ಠಾನದ ವತಿಯಿಂದ ಹಲವು ಸಾಮಾಜಿಕ ಚಟುಟಿಕೆ ನಡೆಸುತ್ತಿದ್ದಾರೆ. ಈ ಕಾರ್ಯಕ್ಕೆ ಯಾರಿಂದಲೂ ಒಂದು ರೂಪಾಯಿ ದೇಣಿಗೆ ಸ್ವೀಕರಿಸಿಲ್ಲ ಎನ್ನುವುದೇ ಇವರ ವೈಶಿಷ್ಟ್ಯ.
ಸತೀಶ ಜಾರಕಿಹೊಳಿ ಫೌಂಡೇಷನ್ ತನ್ನ ಕಾರ್ಯಕ್ಷೇತ್ರವನ್ನು ರಾಜ್ಯಾದ್ಯಂತ ಹೊಂದಿದೆ. ಕಳೆದ ಎರಡು ವರ್ಷಗಳಿಂದ ಶಿಕ್ಷಣ, ಆರೋಗ್ಯ, ಸಾಹಿತ್ಯ, ಕಲೆ,ಸಂಸ್ಕೃತಿ, ಕ್ರೀಡೆ ಸೇರಿದಂತೆ ಎಲ್ಲ ರಂಗಗಳಲ್ಲಿನ ಸಾಧಕರನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡುತ್ತ ಬಂದಿದೆ.
ಮಹಾಮಾರಿ ಕೊರೋನಾ ಸಂಕಷ್ಟ ಸಂದರ್ಭದಲ್ಲಿಯೂ ಸತೀಶಜಾರಕಿಹೊಳಿ ಫೌಂಡೇಶನ್ ಸಮಾಜ ಸೇವೆ ಮಾಡಿ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದವರಿಗೆ ಆಹಾರ ಧಾನ್ಯ ಕಿಟ್, ಆರ್ಥಿಕ ನೆರವನ್ನು ನೀಡಿ ಮಾನವೀಯ ಕಾರ್ಯವನ್ನು ಮಾಡುತ್ತ ಬಂದಿದೆ. ಕೋವಿಡ್-೧೯ನ ನಂತರವೂ ಸತೀಶ ಫೌಂಡೇಷನ್ ಇಷ್ಟು ಚುರುಕಾಗಿ ಕೆಲಸ ಮಾಡುತ್ತಿರುವ ಹಿಂದೆ ರಾಹುಲ್ ಜಾರಕಿಹೊಳಿ ಅವರ ಸಮಾಜಿಕ ಕಳಕಳಿ, ಪರಿಶ್ರಮವೇ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ.

ಬೆಳಗಾವಿ ಜಿಲ್ಲೆಯ ಸಮಾಜದ ಎಲ್ಲ ಸಮುದಾಯದ ಜನರ ಮಠ, ಮಂದಿರ,ಚರ್ಚ, ದರ್ಗಾ, ಸಮುದಾಯ ಭವನಗಳಿಗೆ ಉಚಿತವಾಗಿ ಕುರ್ಚಿ, ಸೌಂಡ್ ಸಿಸ್ಟಿಮ್ ವಿತರಿಸುತ್ತ ಬಂದಿದೆ. ಆಯಾ ಗ್ರಾಮಗಳಲ್ಲಿ, ನಗರಗಳಲ್ಲಿನ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಕಾರ್ಯಕ್ರಮಗಳಿಗೆ ನೀಡುತ್ತಾ ಬರಲಾಗುತ್ತಿದೆ.
ಗ್ರಾಮೀಣ ಪ್ರದೇಶದ ಕ್ರೀಡಾ ಪಟುಗಳನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅವರ ಪ್ರತಿಭೆಯನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸುತ್ತ ಬಂದಿದೆ. ಸತೀಶ ಫೌಂಡೇಶನ್ ಕ್ರೀಡೆಗೆ ಅದರಲ್ಲೂ ಗ್ರಾಮೀಣ ಕ್ರೀಡೆಗೆ ಹೆಚ್ಚಿನ ಒತ್ತು ನೀಡುತ್ತ ಬಂದಿದೆ.
ಕಬಡ್ಡಿ, ಕುಸ್ತಿ ಪಂದ್ಯಾವಳಿಗೆ ಉಚಿತವಾಗಿ ಮ್ಯಾಟ್ ಒದಗಿಸಲಾಗುತ್ತಿದೆ. ಘಟಪ್ರಭಾ ಡಾ.ನಾ.ಸು. ಹರ್ಡೇಕರ ಸೇವಾದಳದ ಅಡಿ ಸಾವಿರಾರು ಯುವಕರಿಗೆ ಉಚಿತವಾಗಿ ಸೈನಿಕ, ಪೊಲೀಸ್ ತರಬೇತಿ ನೀಡಲಾಗುತ್ತದೆ. ಕೆಎಎಸ್, ಐಎಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕುರಿತು ತರಬೇತಿ ಶಿಬಿರಗಳನ್ನು ಮಾಡಲಾಗುತ್ತಿದೆ. ಅಲ್ಲದೇ, ಅಡುಗೆ ತಯಾರಿಕಾ ತರಬೇತಿ, ಕಲೆ, ಸಂಗೀತ, ಬೇರೆ ಬೇರೆ ತರಬೇತಿಗಳನ್ನು ನೀಡಲಾಗುತ್ತಿದೆ. ಚಿಕ್ಕ ನಾಟಕಗಳು, ಸಂಗೀತ, ನೃತ್ಯ, ಹಾಡುಗಳಿಗೆ ಪ್ರೋತ್ಸಾಹಿಸಲಾಗುತ್ತಿದೆ. ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಆರ್ಥಿಕ ನೆರವು, ಪಠ್ಯಪುಸ್ತಕ ವಿತರಿಸಲಾಗುತ್ತಿದೆ. ಅಲ್ಲದೇ, ಸಾಮಾಜಿಕ ಜಾಲತಾಣಗಳ ಮೂಲಕವು ಕೂಡ ಯುವಕರಿಗೆ ತರಬೇತಿ ನೀಡಲಾಗುತ್ತಿದೆ.
ತಂದೆಗೆ ತಕ್ಕ ಮಗ

ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಮುಖ್ಯ ಎಂಬ ಪ್ರಜ್ಞೆ ಹೊಂದಿರುವ ರಾಹುಲ್ ಮಾತಿನಲ್ಲಿ ನಡತೆಯಲ್ಲಿ ಏಕ್ ದಂ ಸೌಮ್ಯ. ಆದರೆ ಥೇಟು ತಂದೆಯಂತೆಯೇ ಚತುರ, ಛಾಣಾಕ್ಷ. ಈ ಬಾರಿ ಯಮಕನಮರಡಿ ಕ್ಷೇತ್ರದಲ್ಲಿ ಸಂಪೂರ್ಣ ಓಡಾಡಿ ಅಲ್ಲಿ ಹಿಡಿತ ಸಾಧಿಸಿದ ರಾಹುಲ್ ತಂದೆ ಸತೀಶ ಜಾರಕಿಹೊಳಿ ಪಕ್ಷ ಸಂಘಟನೆಗೆಂದು ರಾಜ್ಯಾದ್ಯಂತ ಪ್ರವಾಸ ಮಾಡಿ ಬಂದರೂ ಯಮಕನಮರಡಿಯಲ್ಲಿ ಬಹುಮತದಿಂದ ಅಪ್ಪನ ಗೆಲುವಿಗೆ ಟೊಂಕ ಕಟ್ಟಿ ನಿಂತ ಜಾಣ ಮಗ. ಮಾತು ಮತ್ತು ನಡತೆ ಒಂದಾದರೆ ಯಾರಿಗೂ ಹೆದರುವ ಅವಶ್ಯಕತೆ ಇಲ್ಲ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ ಈ ರಾಹುಲ್.