ಬಿಜೆಪಿ ಹಿಡಿತದಲ್ಲಿರುವ ಬೆಳಗಾವಿ ಮಹಾನಗರ ಪಾಲಿಕೆಯನ್ನು ಇಕ್ಕಟ್ಟಿಗೆ ಸಿಲುಕಿಸಬೇಕು ಎನ್ನುವ ಕಸರತ್ತು ತೆರೆಮರೆಯಲ್ಲಿ ಕಾಂಗ್ರೆಸ್ ನಡೆಸಿದೆ ಎನ್ನುವ ಸಂಗತಿ ಬೆಳಕಿಗೆ ಬಂದಿದೆ.
ಈ ಹಿಂದೆ ಅಂದರೆ 2005 ರಲ್ಲಿ ವಿಜಯ ಮೋರೆ ಮೇಯರ್ ಆಗಿದ್ದ ಸಂದರ್ಭದಲ್ಲಿ ಗಡಿ ವಿವಾದಕ್ಜೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪರ ಠರಾವ್ ನ್ನು ಪಾಲಿಕೆಯಲ್ಲಿ ತೆಗೆದುಕೊಳ್ಳಕಾಗಿತ್ತು.
ಆಗಿನ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಿತ್ತು. ಆ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾಗಿದ್ದ ಡಾ. ಶಾಲಿನಿ ರಜನೀಶ್ ಆಡಳಿತಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡಿದ್ದರು.
ನಂತರ ವಂದನಾ ಬೆಳಗುಂದಕರ ಇದ್ದಾಗಲೂ ಕೂಡ ಇದೇ ಪರಿಸ್ಥಿತಿ ಬಂದಿತ್ತು.
ಈಗ ಕನ್ನಡ ಮರಾಠಿ ವಿವಾದ ಇಲ್ಲವೇ ಇಲ್ಲ. ಮಹಾನಗರ ಪಾಲಿಕೆಯಲ್ಲಿ ಪಕ್ಷ ಆಧಾರಿತ ಚುನಾವಣೆ ನಡೆದ ಸಂದರ್ಭದಲ್ಲಿ ನಾಡದ್ರೋಹಿಗಳು ಮನೆದಾರಿ ಹಿಡಿದರು. ಶಾಸಕ ಅಭಯ ಪಾಟೀಲ ಮೇಲುಸ್ತುವಾರಿಯಲ್ಲಿ ಬಿಜೆಪಿಗರೇ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ..
ಒಂದು ಹಂತದಲ್ಲಿ ಎಲ್ಲವೂ ಸರಿಯಾಯಿತು ಎನ್ನುವಾಗಲೇ ಆರೋಗ್ಯ ಸ್ಥಾಯಿ ಸಮಿತಿಯಲ್ಲಾಗುತ್ತಿರುವ ಕೆಲವೊಂದು ಯಡವಟ್ಟುಗಳು 2005 ರಲ್ಲಿ ನಡೆದ ಘಟನೆಗೆ ಮತ್ತೊಮ್ಮೆ ದಾರಿ ಮಾಡಿಕೊಡಬಹುದು ಎನ್ನುವ ಚರ್ಚೆ ಪಾಲಿಕೆ ವಲಯದಲ್ಲಿ ಕೇಳಿ ಬರುತ್ತಿವೆ.
138 ಪಿಕೆಗಳ ವಿಚಾದ ಮುಂದಿಟ್ಟುಕೊಂಡು ಬಿಜೆಪಿ ಹಿಡಿತದಲ್ಲಿರುವ ಪಾಲಿಕೆ ಹಣಿಯಲು ದೊಡ್ದ ಮಟ್ಟದ ತಂತ್ರಗಾರಿಕೆ ನಡೆಸಲಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಈ ಮೂಲಕ ಮುಂಬರುವ ಲೋಜಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ವರ್ಚಸ್ಸು ಹಾಳು ಮಾಎಉವ ಕೆಲಸವನ್ನೂ ಕೆಲವರು ನಡೆಸಿದ್ದು ಗೊತ್ತಾಗಿದೆ
ಇದೆಲ್ಲದರ ನಧ್ಯೆ ಕಸವಿಲೇವಾರಿ ಗುತ್ತಿಗೆದಾರ ವೈ.ಬಿ. ಗೊಲ್ಲರ ಎಂಬುವರು ಈ ಆರೋಗ್ಯ ಸ್ಥಾಯಿ ಸಮಿತಿಯವರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ..
ಹೀಗಾಗಿ ಇದನ್ನು ಇನ್ನುಳಿದ ಬಿಜೆಪಿ ನಗರಸೇವಕರು ಗಂಭೀರವಾಗಿ ಪರಿಗಣಿಸಿ ‘ಆರೋಗ್ಯ’ಕ್ಕೆ ಪೂರ್ಣ ಪ್ರಮಾಣದಲ್ಲಿ “ಶಸ್ತ್ರ ಚಿಕಿತ್ಸೆ” ಮಾಡಲು ಮುಂದಾಗಿದ್ದಾರೆ.
ಮತ್ತೊಂದು ಸಂಗತಿ ಎಂದರೆ, ಈ ಪಿಕೆಗಳ ವಿವಾದದ ಬಗ್ಗೆ ಇನ್ನೂ ಒಂದು ವಾರಗಳ ಕಾಲ ಕಾದು ನೋಡುವ ತಂತ್ರವನ್ನು ಪಾಲಿಕೆಯ ವಿರೋಧ ಪಕ್ಷದವರು ಮಾಡಲಿದ್ದಾರೆ. ಅಷ್ಟರೊಳಗೆ ಅದೆಲ್ಲರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಅದನ್ನು ಸರ್ಕಾರಮಟ್ಟದಲ್ಲಿಯೇ ಚಿಕಿತ್ದೆ ನೀಡಲು ಕಾಂಗ್ರೆಸ್ ರಣತಂತ್ರ ಹೆಣೆದಿದೆ ಎಂದು ಹೇಳಲಾಗಿದೆ.