Headlines

ಪಾಲಿಕೆ ಆರೋಗ್ಯ ಚಿಕಿತ್ಸೆಗೆ ಕಮೀಟಿನೇ ನೇಮಕ..

ಪಾಲಿಕೆ 138 ಪೌರ ಕಾರ್ಮಿಕರ ನೇಮಕ‌ ವಿವಾದ

ಕಾನೂನು ಬಾಹಿರವಾಗಿ ನೇಮಕ ಮಾಡಿದ ಬಗ್ಗೆ ವಿಚಾರಣೆಗೆ ತನಿಖಾ ಸಮಿತಿ ರಚನೆ

ಎರಡು ದಿನಗಳಲ್ಲಿ ಹೊಸ ಟೆಂಡರ್ ಪ್ರಕ್ರಿಯೆಗೆ ಚಾಲನೆ. ನಗರಾಭಿವೃದ್ಧಿ ಸಚಿವರ ನಿರ್ದೇಶನ ಎಂದ ಆಯುಕ್ತರು.

ಸಭೆಯಲ್ಲೂ ದಿಕ್ಕು ತಪ್ಪಿಸಲು ಯತ್ನಿಸಿದ ಅಧಿಕಾರಿ.

ಒಟ್ಟಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೇರಾನೇರ ಉತ್ತರ ನೀಡಿದ ಆಯುಕ್ತರು.

ಅಕ್ರಮ ನೇಮಕಕ್ಕೆ ಸ್ವಪಕ್ಷೀಯರದ್ದೇ ವಿರೋಧ. ಸರ್ಕಾರಕ್ಕೆ ಪತ್ರ ಬರೆದು ತೀರ್ಮಾನಿಸಿ ಎಂದ ಆಡಳಿತ ಪಕ್ದದವರು.

ಮೇಯರ ಪತ್ರದ ದುರುಪಯೋಗ ಮಾಡಿಕೊಂಡ ಆರೋಗ್ಯ ಶಾಖೆಯವರು- ದೂರು.

138 ಪಿಕೆ ಚರ್ಚೆ ನಡೆದಾಗಲೇ ಎದ್ದು ಹೊರನಡೆದವರು ಯಾರು? ಮಾಡಿದ್ದುಣ್ಣೋ ಮರಾಯಾ

ಬೆಳಗಾವಿ‌

ನಿರೀಕ್ಷಿಸಿದಂತೆ 138 ಪೌರ ಕಾರ್ಮಿಕರ ಅಕ್ರಮ ನೇಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ‌ ಗಂಭೀರ ಚರ್ಚೆ ನಡೆಯಿತು.

ಪ್ರಕರಣದ ಬಗ್ಗೆ ವಿಚಾರಣೆ ಸಮಿತಿ‌ ನಡೆಸಿ ತಪ್ಪಿತಸ್ಥರ ವಿತುದ್ಧ ಕ್ರಮ ತೆಗೆದುಕೊಳ್ಳುವುದರ ಜೊತೆಗೆ ಅವರ ಸಂಬಳ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುವ ತೀರ್ಮಾನವನ್ನು ಸಭೆಯಲ್ಲಿ ಮಾಡಲಾಯಿತು.

ಒಂದು‌ ಹಂತದಲ್ಲಿ ಆರೋಗ್ಯ ಸ್ಥಾಯಿ ಸಮಿತಿ ಯಡವಟ್ಟುಗಳಿಗೆ ಸ್ವಪಕ್ಷೀಯರೂ ಸಹ ನಿರೀಕ್ಷಿತ ಬೆಂ ಬಲ ನೀಡಲಿಲ್ಲ.

ಶಾಸಕ‌ ಆಸೀಫ್ ಶೇಠ್, ರವಿ ಸಾಳುಂಕೆ ಅವರು ಪ್ರಸ್ತಾಪಿಸಿದ ಈ ವಿಷಯದ ಬಗ್ಗೆ ಗಂಭೀರ ಚರ್ಚೆ ನಡೆದಾಗಲೇ ಸಂಬಂಧಿಸಿದವರು ಸಭೆ ಬಿಟ್ಟು ಎದ್ದು ಹೊರ ನಡೆದಿದ್ದು ಹಲವು ಹುಬ್ಬೇರಿಸುವಂತಾಯಿತು…

ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ಕಾನೂನು ಪ್ರಕಾರ 138 ಪೌರ ಕಾರ್ಮಿಕರ ನೇಮಕ ಆಗಿಲ್ಲ. ಅವರಿಗೆ ಆದೇಶ ಕೂಡ ಇಲ್ಲ. ಅವರನ್ನು ಯಾವ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊಡಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದರು. ಅಷ್ಟೇ ಅಲ್ಲ. ಹಿಂದೆ ಮಾಡಿದ ಆದೇಶ ಕೂಡ ತಪ್ಪು. ಈಗ ಅವರ ಸಂಬಳ ಕೊಟ್ಟರೆ ನಾನು ಇಕ್ಕಟ್ಟಿನಲ್ಲಿ ಸಿಲುಕುತ್ತೇನೆ. ಆದ್ದರಿಂದ ಸರ್ಕಾರಕ್ಕೆ ಪತ್ರ ಬರೆದು‌ ಅಲ್ಲಿಂದ ಉತ್ತರ ಬಂದ ನಂತರ ಮುಂದಿನ ಕ್ರಮ ತೆಗೆದು ಕೊಳ್ಳುವುದಾಗಿ ಸಭೆಗೆ ಸ್ಪಷ್ಟಪಡಿಸಿದರು.

ಮತ್ತೊಂದೆಡೆ ಆರೋಗ್ಯ ಶಾಖೆಯ ಅಧಿಕಾರಿ ಕಲಾದಗಿ ಅವರು 138 ಪಿಕೆಗಳ ಬಗ್ಗೆ ತಪ್ಪು ಮಾಹಿತಿ ನೀಡಲು ಯತ್ನಿಸಿದಾಗ ಶಾಸಕ‌ ಅಸೀಫ್ ಶೇಠ, ಮುಜಮಿಲ್ ಡೋಣಿ, ಮುಂತಾದವರು ಆಕ್ಷೇಪಿಸಿದರು. ಕೊನೆಗೆ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ಅಷ್ಟೇ ಅಲ್ಲ ಅಢಳಿತ ಪಕ್ಷದ ಹನುಮಂತ ಕೊಂಗಾಲಿ ಅವರು ಈ ಪ್ರಕರಣದಲ್ಲಿ ಮೇಯರ್ ಪತ್ರವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ದೂರಿದರು. ಮೇಯರ್ ಅವರು ಎಲ್ಲಿಯೂ 138 ಪಿಕೆಗಳ ಬಗ್ಗೆ ಉಲ್ಲೇಖ ಮಾಡಿಲ್ಲ. ದ್ವಚ್ವತೆ ಬಗ್ಗೆ ಗಮನಹರಿಸಿ ಎಂದಿದ್ದಾರೆ. ಹೀಗಾಗಿ‌ ಅವರನ್ನು ಈ ವಿಷಯದಲ್ಲಿ ಎಳೆದು ತರುವುದು ಸರಿಯಲ್ಲ.‌ಅಧಿಕಾರಿಗಳೇ ಅವರ ಪತ್ರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆಂದು ಹನುಮಂತ ಕೊಂಗಾಲಿ ಹೇಳಿದರು‌

ಮಹಿಳಾ ಮೀಸಲಾತಿ ಅಂಗೀಕಾರಗೊಂಡ ಬಗ್ಗೆ ಸಂಸದೆ ಮಂಗಲಾ ಅಂಗಡಿ ಅವರು ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿ ಮಾತನಾಡಿದರು. ಸ್ಮಾರ್ಟ್ ಸಿಟಿಗೆ ಪ್ರಶಸ್ತಿ ಸಿಕ್ಕಿದ್ದರ ಬಗ್ಗೆ ಆಡಳಿತ ಪಕ್ಷದ ನಾಯಕ ರಾಜಶೇಖರ ಡೋಣಿ ಮಾತನಾಡಿದರು.

ಪಾಲಿಕೆಗೆ ಚಿಕಿತ್ಸೆ ಕೊಡೋರು ಯಾರು?

https://ebelagavi.com/index.php/2023/10/06/gh/

Leave a Reply

Your email address will not be published. Required fields are marked *

error: Content is protected !!