ಆ ಶ್ರಮಕ್ಕೆ ಬೆಲೆ ಇಲ್ಲವೇ? ಆ ದುಡಿತದ ಸಂಬಳಕ್ಕೆ ಯಾರು ಹೊಣೆ? ಹನುನಂತ ಕಲಾದಗಿ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಮಟ್ಟದಲ್ಲಿ ಚಿಂತನೆ. ಹೊಸ ಪಿಕೆಗಳ ನೇಮಕ ಪ್ರಕ್ರಿಯೆಗೆ ಚಾಲನೆ.
ಬೆಳಗಾವಿ.
ಮಹಾನಗರ ಪಾಲಿಕೆಯಲ್ಲಿ ಭಾರೀ ಸದ್ದು ಮಾಡಿದ 138 ಪೌರ ಕಾರ್ಮಿಕರ ಅಕ್ರಮ ನೇಮಕ ವಿವಾದಕಗಕೆ ತಾರ್ಕಿಕ ಅಂತ್ಯ ಸಿಕ್ಕಿದೆ. ಅಂದರೆ ಹೊಸದಾಗಿ ಟೆಂಡರ್ ಕರೆದು ನಿಯಮಾನುಸಾರ ಭರ್ತಿ ಮಾಡಿಕೊಳ್ಳಲು ಅನುಮತಿ ಸಿಕ್ಕಿದೆ.
ಆದರೆ ಸಂಬಳ ಸಿಗುತ್ತದೆ ಎನ್ನುವ ಆಸೆಯಿಂದ ಕಳೆದ ಮೂರು ತಿಂಗಳುಗಳ ಕಾಲ ಕಷ್ಟಪಟ್ಡು ದುಡಿದ ಆ. 138 ಪೌರ ಕಾರ್ಮಿಕರ ಸಂಬಳಕ್ಕೆ ಯಾರು ಹೊಣೆ ಎನ್ನುವ ಬಹುದೊಡ್ಡ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.
ಇಲ್ಲಿ ಇವರನ್ನು ನೇಮಕ ಮಾಡಿಕೊಂಡ ಅದಿಕಾರಿಗಳು ಮತ್ತು ಇತರರು ಈಗ ಮೈಗೆ ಎಣ್ಣೆಹಚ್ವಿಕೊಂಡಂತೆ ವರ್ತಿಸುತ್ತಿರುವುದು ಚರ್ಚೆಗೆ ಎಡೆ ಮಾಡಿಕೊಟ್ಡಿದೆ. ಇದೆಲ್ಲದರ ಮಧ್ಯೆ ಗುತ್ತಿಗೆದಾರ ಗೊಲ್ಲರ ಅವರು ನೀಡಿದ ಪತ್ರದ ಬಗ್ಗೆ ವಿಚಾರಣೆ ನಡೆದಿದೆ. ಅದರಲ್ಲಿ ಅವರು ಇಬ್ಬರ ಹೆಸರು ಉಲ್ಲೇಖ ಮಾಡಿದ್ದರು. ಸಧ್ಯ ಬಂದಿರುವ ಮಾಹಿತಿ ಪ್ರಕಾರ ಇಡೀ ನೇಮಕ ಪ್ರಕ್ರಿಯೆಯನ್ನು ಹಳ್ಳಹಿಡಿಸಿ ಆಡಳಿತ ಪಕ್ಷಕ್ಕೆ ಮತ್ತು ಬೆಳಗಾವಿ ಮಹಾನಗರ ಪಾಲಿಕೆಗೆ ಕಪ್ಪುಚುಕ್ಕೆ ತಂದ ಹನುಮಂತ ಕಲಾದಗಿ ವಿರುದ್ಧ ಗಂಭೀರ ಕ್ರಮ ತೆಗೆದು ಕೊಳ್ಳುವ ಚಿಂತನೆ ಸರ್ಕಾರ ಮಟ್ಟದಲ್ಲಿ ನಡೆದಿದೆ ಎಂದು ಗೊತ್ತಾಗಿದೆ.