ಗಡಿನಾಡ ಬೆಳಗಾವಿಯಲ್ಲಿ ಈ ವಾರಿ ದಾಙಡಿಯಾ ಉತ್ಸವದಲ್ಲಿ ಕುಣಿದು ಕುಪ್ಪಳಿಸಬೇಕಿದ್ದರೆ ಬೇರೆ ಎಲ್ಲೂ ಹೋಗಲೇಬೇಡಿ.
ನೇರವಾಗಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರು ಆಯೋಜನೆ ಮಾಡಿದ ರಾಣಿ ಚನ್ನಮ್ಮ ನಗರದ 1st stage ಬಳಿ ಮೈದಾನಕ್ಕೆ ಬನ್ನಿ.!
ನವರಾತ್ರಿ ಮುಗಿಯುವವರೆಗೆ ಪ್ರತಿ ದಿನ ಸಂಜೆ 7 ರಿಂದ ದಾಂಡಿಯಾ ಕುಣಿತ ಆರಂಭವಾಗುತ್ತದೆ. ಅಂದ ಹಾಗೆ ಇಲ್ಲಿ ಯಾವುದೇ ಪ್ರವೇಶ ಶುಲ್ಕವಿಲ್ಲ.
FREE FREE FREE.. ಉಚಿತ ಉಚಿತ ಉಚಿತ.
ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರು ಹೋಳಿ ಹಬ್ಬದ ಸಂದರ್ಭದಲ್ಲಿ ಆಚರಣೆ ಮಾಡುವ ಹೋಳಿ ಮಿಲನ್ ಹೇಗೆ ಪ್ರಸಿದ್ಧಿ ಪಡೆದಿದೆಯೋ ಅದೇ ರೀತಿ ನವರಾತ್ರಿಯಲ್ಲಿ ಆಯೋಜನೆ ಮಾಡುವ ದಾಂಡಿಯಾ ಉತ್ಸವ ಕೂಡ ಹೆಸರು ಮಾಡಿದೆ.
ಅಭಯ ಪಾಟೀಲರು ಕಳೆದ 11 ವರ್ಷದಿಂದ ರಾಣಿ ಚನ್ನಮ್ಮ ನಗರದ ಮೈದಾನದಲ್ಲಿ ದಾಂಡಿಯಾವನ್ನು ಆಯೋಜನೆ ಮಾಡುತ್ತ ಬಂದಿದ್ದಾರೆ. ಅತ್ಯಂತ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿರುತ್ತದೆ. ಹೀಗಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ಇಲ್ಲಿ ಮುಖ್ಯವೇದಿಕೆ ಜೊತೆಗೆ ಮಧ್ಯದಲ್ಲೊಂದು ವೇದಿಕೆ ಹಾಕಲಾಗಿದೆ.
ಗಮನಿಸಬೇಕಾದ ಸಂಗತಿ ಎಂದರೆ ಇಲ್ಲಿಗೆ ಬರುವ ಮಹಿಳೆಯರು ಮತ್ತು ಪುರುಷರು ಯಾವುದೇ ಮುಜುಗುರಕ್ಕೆ ಒಳಗಾಗದೇ ನಿರ್ಭೀತಿಯಿಂದ ದಾಂಡಿಯಾ ಆಟದಲ್ಲಿ ಮಗ್ನರಾಗುತ್ತಾರೆ.
ಎಲ್ಲಕ್ಕಿಂತ ಮುಖ್ಯವಾಗಿ ದಾಂಡಿಯಾದಲ್ಲಿ ಶಾಸಕ ಅಭಯ ಪಾಟೀಲರು ಅಷ್ಟೇ ಅಲ್ಲ ಅವರ ಇಡೀ ಪರಿವಾರ ಭಾಗಿಯಾಗುತ್ತದೆ..
ಸ್ವತಃ ಶಾಸಕರ ಸಹೋದರರು ಒಟ್ಟಾರೆ ಉಸ್ತುವಾರಿ ವಹಿಸುತ್ತಾರೆ.
ಇವತ್ತಿನಿಂದ ಅಭಯ ಪಾಟೀಲ ಆಯೋಜನೆ ಮಾಡಿದ್ದ ದಾಂಡಿಯಾ ಉತ್ಸವ ಆರಂಭವಾಗಿದೆ. ಇಂದು ನಡೆದ ಸುಂದರ ಕಾರ್ಯಕ್ರಮದಲ್ಲಿ ಛಾಯಾ ವಿಶಾಲ ಚವ್ವಾಣ, ದಿಶಾ ಸಚಿನ್ ಕುಲಕರ್ಣಿ, ಸಂಜಿವಿನಿ ಆಶಿಶ್ ಸುಣಗಾರ, ನಿವೇದಿತಾ ಕಣಬರ್ಗಿ, ಮಾಧವಿ ರಾಘೊಚೆ ಮತ್ತು ಪೂಜಾ ಬೆಲ್ಲದ ನಗರ ಸೇವಕರಾದ ರಮೇಶ ಮೈಕ್ಯಾಗೋಳ, ಆನಂದ ಚವ್ವಾಣ, ನಿತಿನ್ ಜಾಧವ, ನಂದು ಮಿರಜಕರ, ಗುರೀಶ ಧೋಂಗಡಿ, ಮತ್ತು ರಾಜು ಭಾತಖಾಂಡೆ, ದೀಪಕ ಸೋಮನ್ನಾಚೆ ಹಾಜರಿದ್ದರು.