ಬೆಳಗಾವಿ.
ನವರಾತ್ರಿ ಸಂದರ್ಭದಲ್ಲಿ ಬೆಳ್ಳಂ ಬೆಳಿಗ್ಗೆ ಬೆಳಗಾವಿಯಲ್ಲಿ ಹೂವಿನ ರಸ್ತೆಗಳು ಕಾಣಸಿಗುತ್ತವೆ. ಆ ರಸ್ತೆಯ ಮೇಲೆ ಜೈ ಕಾರದ ಘೋಷಣೆಗಳನ್ನು ಕೂಗುತ್ತ ಸಾವಿರಾರು ಜನ ಹೋಗುತ್ತಿರುವ ದೃಶ್ಯ ನೋಡಲು ಎರಡು ಕಣ್ಣು ಸಾಲದು.

ನವರಾತ್ರಿ ಹಬ್ಬದ ಪ್ರಯುಕ್ತ ಬೆಳಗಾವಿಯಲ್ಲಿ ನಡೆಯುವ ದೌಡ್ ನಲ್ಲಿ ಕಂಡು ಬಂದ ದೃಶ್ಯವಿದು.
.



ಭಾರತ ಮಾತಾ ಕಿ ಜೈ, ದುರ್ಗಾ ಮಾತಾಕಿ ಜೈ, ಭಜರಂಗ ಬಲೀಕಿ ಜೈ, ಶಿವಾಜಿ ಮಹಾರಾಜಕೀ ಜೈ ಎನ್ನುವ ಘೋಷಣೆಗಳನ್ನು ಕೂಗುತ್ತ ಶಿಸ್ತು ಬದ್ಧವಾಗಿ ದೌಡ್ ನಡೆಯುತ್ತದೆ

9 ದಿನಗಳ ಕಾಲ ದೌಡ ನಿತ್ಯ ಬೆಳಿಗ್ಗೆ ಸಂಚರಿಸುವ ಪ್ರದೇಶದಲ್ಲಿ ಅಲ್ಲಿನ ಜನ ರಸ್ತೆ ತುಂಬ ಹೂವು ಹಾಕಿ ಒಂದು ರೀತಿಯಲ್ಲಿ ಹೂವಿನ ರಸ್ತೆ ಯನ್ನಾಗಿ ಮಾಡಿರುತ್ತಾರೆ.
ಅಷ್ಟೆ ಅಲ್ಲ ದೌಡ್ ಮುಂದೆ ಭಗವಾ ಧ್ವಜಕ್ಕೆ ಆರತಿ ಮಾಡುವ ಕೆಲಸವನ್ನು ಮಹಿಳೆಯರು ಮಾಡುತ್ತಾರೆ. ಇಡೀ ಮೆರವಣಿಗೆ ಮೇಲೆ ಹೂವಿನ ಮಳೆ ಸುರಿಸಲಾಗುತ್ತದೆ.
ಟಿಳಕವಾಡಿ, ಚಿದಂಬರ ನಗರ, ಭಾಗ್ಯನಗರ, ವಿದ್ಯಾನಗರ ಮುಂತಾದ ಪ್ರದೇಶದಲ್ಲಿ ಇಂದು ದೌಡ್ ಸಂಚರಿಸಿತು.
ಗಮನಿಸಬೇಕಾದ ಸಂಗತಿ ಎಂದರೆ , ಈ ದೌಡನಲ್ಲಿ ಕಳೆದ ಹಲವು ವರ್ಷಗಳಿಂದ ಶ್ವಾನವೂ ಸಹ ಭಾಗಿಯಾಗಿರುತ್ತದೆ. ಅದಕ್ಕೂ ಕೇಸರಿ ಶಾಲು ಹಾಕಲಾಗಿರುತ್ತದೆ. ಸಾವಿರಾರು ಜನರ ಮಾದ್ಯೆ ಅದೂ ಓಡುತ್ತದೆ.