ದಲಿತ ಮಹಿಳೆ ಮೇಲೆ ದೌರ್ಜನ್ಯ ಪ್ರಕರಣ
ಘಟಪ್ರಭಾ ಪೊಲೀಸರಿಗೆ ಎಸ್ಪಿ ಬುಲಾವ್
ಬೆಳಗಾವಿ.
ಅ ಘಟನೆ ಕಂಡು ನಾಗರಿಕ ಸಮಾಜ ಅಯ್ಯೋ ಅಂದ್ರು ಕೂಡ ಬೆಳಗಾವಿ ಜಿಲ್ಲಾ ಪೊಲೀಸ್ ಮಾತ್ರ ಕರುಣೆ ಇಲ್ಲದ ಕಲ್ಲು ಬಂಡೆಯಂತಿತ್ತು.
ಆದರೆ ಮಾಧ್ಯಮದಲ್ಲಿ ವಿಶೇಷವಾಗಿ ಇ ಬೆಳಗಾವಿ ಡಾಟ್ ಕಾಂ ಪ್ರಕಟಿಸಿದ ವರದಿ ಪೊಲೀಸ್ ಪಡೆಯನ್ನು ನಿದ್ರೆಯಿಂದ ಎಬ್ಬಿಸಿದಂತಾಗಿದೆ.
ಘಟಪ್ರಭಾ ಠಾಣೆಯ ಪೊಲೀಸರ ಸಮ್ಮುಖದಲ್ಲಿಯೇ ದಲಿತ ಮಹಿಳೆಯನ್ನು ಎಳೆದಾಡಿದರೂ ಕೂಡ ರಕ್ಷಣೆ ಕೊಡದವರ ಮೇಲೆ ಎಸ್ಪಿಯವರು ಮೊದಲು ಕ್ರಮಬತೆಗೆದು ಕೊಳ್ಳಬೇಕಾದ ಅನುವಾರ್ಯತೆ ಇದೆ.
ಕಳೆದ ಶುಕ್ರವಾರವೇ ಘಟನೆ ನಡೆದಿದ್ದರೂ ಇಲ್ಲಿಯವರೆಗೆ ಸಂತ್ರಸ್ತೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಭೆಟ್ಟಿ ಆಗಿರಲಿಲ್ಲ. ಈ ಬಗ್ಗೆ e belagavi com ಸಮಗ್ರ ವರದಿ ಮಾಡಿತ್ತು,

ಈ ಹಿನ್ನೆಲೆಯಲ್ಲಿ ಕಳೆದ ದಿನ ಮಧ್ಯಾಹ್ನ ವೇ ಬೀಮ್ಸನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆಯನ್ನು ಖುದ್ದು ಭೆಟ್ಟಿ ಮಾಡಿ ಎಸ್ವಿ ವಿಚಾರಣೆ ನಡೆಸಿದ್ದಾರೆ, ಈ ಸಂದರ್ಭದಲ್ಲಿ ಸಹ ಸಂತ್ರಸ್ತೆ ತನ್ನ ಮೇಲೆ ಯಾವ ರೀತಿ ಕಿಡಿಗೇಡಿಗಳು ದೌರ್ಜನ್ಯ ನಡೆಸಿದ್ದಾರೆ ಎನ್ನುವುದು ಸೇರಿದಂತೆ ಯಾವ ಪೊಲೀಸರು ಯಾವ ರೀತಿ ಮಾತನಾಡಿದರು ಎನ್ನುವುದನ್ನು ಎಳೆ ಎಳೆಯಾಗಿ ವಿವರಿಸಿದ್ದಾಳೆ ಎಂದು ಗೊತ್ತಾಗಿದೆ.
ಈ ಹಿನ್ನೆಲೆಯಲ್ಲಿ ಒಟ್ಟಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಉಲ್ಲೇಖಿಸಿದ ಪೊಲಿಸರಿಗೂ ಕೂಡ ಬೆಳಗಾವಿ ತಮ್ಮ ಕಚೇರಿಗೆ ಬರಲು ಸೂಚನೆ sp ನೀಡಿದ್ದಾರೆಂದು ಗೊತ್ತಾಗಿದೆ., ಘಟಪ್ರಭಾ ಸಿಪಿಐ, ಡಿಎಸ್ಪಿ ಸೇರಿದಂತೆ. ಹೆಡ್ ಕಾನ್ಸಟೇಬಲ್ ಮತ್ತು ಇನ್ನಿತರ ಪಿಸಿಗಳಿಗೂ ಎಸ್ಪಿ ಬುಲಾವ್ ಮಾಡಿದ್ದಾರೆ, ಅಷ್ಟೇ ಅಲ್ಲ ನಾಳೆ ಮತ್ತೇ ಭೆಟ್ಟಿಗೆ ಬರುವುದಾಗಿಯೂ ಎಸ್ಪಿ ತಿಳಿಸಿದ್ದಾರೆಂದು ಗೊತ್ತಾಗಿದೆ.