Headlines

ದಾಂಡಿಯಾದಲ್ಲೂ ಅನಂತ ನೆನಪು..!

ಬೆಳಗಾವಿ.

ರಾಜಕಾರಣದಲ್ಲಿ ಕೆಲವೊಂದು ಸಲ ಗುರು ಶಿಷ್ಯರ ಸಂಬಂಧ ಅಧಿಕಾರ ಸಿಗೋತನಕ ಅಥವಾ ಅವರು ಇರೋತನಕ.!

ಬಹುತೇಕವಾಗಿ ಹಿಂದಿನ ಉದಾಹರಣೆಗಳನ್ನು ಗಮನಿಸಿದರೆ ಅಧಿಕಾರ ಸಿಗೋತನಕ ಗುರು ಗುರು ಅಂದವರು ಅಧಿಕಾರದ ಆಸನ ಏರಿದ ಮೇಲೆ ಗುರುವಿನ ‘ಗುರು’ ಆಗಿ ಬಿಡ್ತಾರೆ.

ಅದು ಬಿಡಿ . ಆದರೆ ಎಲ್ಲಾ ರಾಜಕಾರಣಿಗಳು ಹಾಗೇ ಇರ್ತಾರೆ ಅಂತ ಹೇಳಲು ಆಗಲ್ಲ.

ಅಧಿಕಾರ ಸಿಗಲಿ , ಬಿಡಲಿ, ಅವರು ಇರಲಿ, ಅಥವಾ ಇಲ್ಲದಿರಲಿ ಅವರು ಅವರನ್ನು ಯಾವಾಗಲೂ ಗುರುವಿನ ಸ್ಥಾನದಲ್ಲಿಯೇ ನೋಡುವವರೂ ಇರ್ತಾರೆ. ಅಂತಹವರು ರಾಜಕಾರಣದಲ್ಲಿ ಅಪರೂಪ ಎಂದರೂ ಅಚ್ಚರಿಪಡಬೇಕಿಲ್ಲ

ಇಷ್ಟೆಲ್ಲ ಹೇಳಿದ ಮೇಲೆ ರಾಜಕೀಯದಲ್ಲಿ ಅಂತಹ ಗುರುವನ್ನು ಹೊಂದಿದ ಶಿಷ್ಯ ಯಾರು ಎಂಬ ಚಿಂತೆ ಸಹಜವಾಗಿ ಬರಬಹುದು.

ಅವರೇ ಅಭಯ ಪಾಟೀಲ !. ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕರು.!

ಅನಂತಕುಮಾರ ಅವರು ಲೋಕಸಭೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ನರೇಂದ್ರ ಮೋದಿ ಸರಕಾರದಲ್ಲಿ ಸಂಸದೀಯ ವ್ಯವಹಾರಗಳ ಕೇಂದ್ರ ಸಚಿವರಾಗಿ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿ ಸೇವೆ ಸಲ್ಲಿಸಿದ್ದರು., ಆಗಲೂ ಕೂಡ ಅಭಯ ಪಾಟೀಲ ಅವರನ್ನು ‘ಗುರು‘ ಎಂದೇ ಸಂಭೋಧಿಸುತ್ತಿದ್ದರು.

2018 ನೆವೆಂಬರ 12 ರಂದು ಮರಣ ಹೊಂದಿದ ನಂತರ ಕೂಡ ತಮ್ಮ ಗುರು ಅನಂತ ಕುಮಾರ ಅವವನ್ನು ಸ್ಮರಣೆ ಮಾಡುವುದನ್ನು ಅಭಯ ಪಾಟೀಲ ಮರೆತಿಲ್ಲ.

ಬೆಳಗಾವಿ ದಕ್ಷಿಣ ಕ್ಷೇತ್ರ ಅಷ್ಟೇ ಅಲ್ಲ ಎಲ್ಲೇ ಅಭಯ ಪಾಟೀಲರು ಕಾರ್ಯಕ್ರಮವನ್ನು ಆಯೋಜನೆ ಮಾಡಿದರೆ ಅಲ್ಲಿ ಗುರು ದಿ. ಅನಂತಕುಮಾರ ಅವರ ದೊಡ್ಡದಾದ ಪೋಟೊ ಇರಲೇಬೇಕು.

ದಾಂಡಿಯಾದಲ್ಲೂ ಗುರು ಸ್ಮರಣೆ

ನವರಾತ್ರಿ ಹಬ್ಬದ ಸಂದರ್ಭದಲ್ಲಿ ಅಭಯ ಪಾಟೀಲರು ಇಲ್ಲಿನ ರಾಣಿ ಚನ್ನಮ್ಮ ಮೈದಾನದಲ್ಲಿ ದಾಂಡಿಯಾವನ್ನು ಆಯೋಜನೆ ಮಾಡಿದ್ದಾರೆ. ಕಳೆದ ಹನ್ನೊಂದು ವರ್ಷದಿಂದ ದಾಂಡಿಯಾ ಉತ್ಸವ ಅಚ್ವಕಟ್ಟಾಗಿ ನಡೆದುಕೊಂಡು ಬಂದಿದೆ.

ಸಹಜವಾಗಿ ದಾಂಡಿಯಾ ಆಯೋಜನೆ ಮಾಡಿದ ಮೈದಾನದೊಳಗೆ ಕಾಲಿಟ್ಟರೆ ಅಲ್ಲಿ ಎರಡು ದೊಡ್ಡ ದೊಡ್ಡ ಭಾವಚಿತ್ರಗಳು ಕಣ್ಣಿಗೆ ಕಾಣಸಿಗುತ್ತವೆ.

ನಮ್ಮ ಗುರು ಹೀಗಿದ್ದರು..!

ದಾಂಡಿಯಾ ಉತ್ಸವದಲ್ಲಿ ಶಾಸಕ ಅಭಯ ಪಾಟೀಲರು ಗುರು ಅನಂತಕುಮಾರ ಬಗ್ಗೆ ‌‌‌‌‌‌‌‌ e belagavi.com ನೊಂದಿಗೆ ಮಾತಿಗಿಳಿದಾಗ ಕೆಲ ಕ್ಷಣ ಭಾವುಕರಾದರು

ನನ್ನ‌ ಗುರುವಿನ‌ ಸರಿಸಾಟಿ ಯಾರೂ ಇಲ್ಲವೇ ಇಲ್ಲ. ಅವರು ಯುವಕರನ್ನು ಬೆಳೆಸುವ ರೀತಿ. ಸಂಘಟನಾ ಶಕ್ತಿ ವಾವ್.. ಅದ್ಭುತ. ಈಗಲೂ ನಾನು ಅವರ ದಾರಿಯಲ್ಲೇ ಸಾಗುತ್ತಿದ್ದೇನೆ.

ನನ್ನ‌ಗುರು ರಾಜಕೀಯದಲ್ಲಿ ಮೇಲೇರುವ ಮಹಾತ್ವಾಕಾಂಕ್ಷೆ ಹೊಂದಿದ್ದರು. 1987ರಲ್ಲಿ ಬಿಜೆಪಿ ಸೇರಿದರು. ಬಿಜೆಪಿ ರಾಜ್ಯ ಕಾರ್ಯದರ್ಶಿ, ರಾಜ್ಯ ಯುವ ಮೋರ್ಚಾ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಕಾರ್ಯದರ್ಶಿಯಾಗಿ ಜವಾಬ್ದಾರಿ ಹೊತ್ತಿದ್ದರು. ಕರ್ನಾಟಕದಲ್ಲಿ, ಬಾಲ್ಯದಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ, ತತ್ವಗಳಿಂದ ಪ್ರೇರಿತರಾಗಿದ್ದರು. ‘ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್’ ನ ವಿದ್ಯಾರ್ಥಿ ವಿಭಾಗದಲ್ಲಿ ಸೇರಿಕೊಂಡರು.

ತುರ್ತು-ಪರಿಸ್ಥಿತಿಯ ಸಂದರ್ಭದಲ್ಲಿ ಅವರನ್ನು ೪೦ ದಿನ ಸೆರೆಮನೆಯಲ್ಲಿಟ್ಟಿದರು. ತಮ್ಮ ಚಿಕ್ಕವಯಸ್ಸಿನಲ್ಲೇ, ಕರ್ನಾಟಕ ವಲಯದ ಬಿ. ಜೆ.ಪಿ ಯ ಜನರಲ್ ಸೆಕ್ರೆಟರಿಯಾಗಿ, ಚುನಾಯಿತರಾಗಿದ್ದರು. ನಂತರ, ೧೯೮೫ ರಲ್ಲಿ ಅದರ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆಯಾದರು.’ಆಖಿಲ ಭಾರತೀಯ ವಿದ್ಯಾರ್ಥಿ ಫರಿಷತ್’, ನಿಂದ ಮುಂದೆ ‘ಜನತಾಪಾರ್ಟಿ.ಯ ದೊಡ್ಡ ಹುದ್ದೆಗಳಿಗೆ ಅವರನ್ನು ಆರಿಸಲಾಯಿತು. ಬಿ. ಜೆ. ಪಿ ಯ ರಾಜ್ಯಮಟ್ಟದ ಅಧ್ಯಕ್ಷರಾಗಿ ನಾಮಿನೇಟ್,’ ಆದರು. ‘ಯುವ-ಮೋರ್ಚಾ’ದಲ್ಲಿ ಅವರು ನಡೆಸಿದ ಕಾರ್ಯವೈಖರಿಯನ್ನು ಗಮನಿಸಿ ಅವರನ್ನು, ೧೯೯೬ ರಲ್ಲಿ, ರಾಷ್ಟ್ರಮಟ್ಟದ ರಾಜಕೀಯವಲಯದಲ್ಲಿ ಕಾರ್ಯದರ್ಶಿಯಾಗಿ ಆಯ್ಕೆಆದರು.. ‘

ರಾಮಜನ್ಮಭೂಮಿಯ ಕಾರಣಕ್ಕೆ ಹೋರಾಡಿದ ವ್ಯಕ್ತಿ,’ ಹೋರಾಡಿ, ಕರ್ನಾಟಕದಿಂದ ಆಯ್ಕೆಯಾದ ಪ್ರತಿನಿಧಿಗಳಲ್ಲಿ ಅವರೊಬ್ಬ ಪ್ರಮುಖರಾಗಿದ್ದರು. ನನಗೂ ಅವರೇ ಸ್ಪೂರ್ತಿ. ತಳಮಟ್ಟದಿಂದ ಪಕ್ಷ ಕಟ್ಟಿದ ಅವರು ದಕ್ಷಿಣ ಭಾರತದಲ್ಲಿ ಮೊದಲ ಬಿಜೆಪಿ ಸರಕಾರ ರಚಿಸಲು ಕಾರಣರಾದರು. ದಕ್ಷಿಣ ಕ್ಷೇತ್ರದಲ್ಲಿ ನನಗೆ ಕಾರ್ಯಕರ್ತರೇ ಜೀವಾಳ. ಅವರು ಬೆನ್ನಿಗೆ ಇರೊವರೆಗೆ ಯಾರಿಗೂ ಭಯ ಪಡುವ ಅವಶ್ಯಕತೆನೇ ಇಲ್ಲ.

ಸಂಘಟನಾ ಶಕ್ತಿ. ಸಂಘ ನಿಷ್ಠೆ ಎಂದಿಗೂ ಬಿಡಲ್ಲ ಮರೆಯಲೂ ಶಗಲ್ಲ ಎಂದರು.

ಮರೆಯಲಾಗದ ಜೀವ..

ಇನ್ನುಳಿದಂತೆ ಮತ್ತೊಂದು ಪೊಟೊ ಪ್ರದೀಪ ಶೆಟ್ಟಿ. ಶಾಸಕ ಅಭಯ ಪಾಟೀಲ ಎಲ್ಲೇ ಹೋದರೂ ಈ ಪ್ರದೀಪ ಶೆಟ್ಟಿ ಇರಲೇಬೇಕು. ಸದಾ ಶಾಸಕರ ಫೋನ್ ಗೆ ಕರೆ ಮಾಡಿದಾಗ ಈತನೇ ರಿಸೀವ್ ಮಾಡೋದು. ಒಂದು ರೀತಿಯಲ್ಲಿ ಪ್ರದೀಪ ಶೆಟ್ಟಿ ಶಾಸಕ ಅಭಯ ಪಾಟೀಲರ ಕುಟುಂಬದ ಸದಸ್ಯನಂತಿದ್ದ.

ಇತ್ತೀಚೆಗೆ ಪ್ರದೀಪ ಶೆಟ್ಟಿ ಆರೋಗ್ಯದ ಬಗ್ಗೆ ಕಾಳಜಿ ವಹಿಸದ ಹಿನ್ನೆಲೆ ಯಲ್ಲಿ ತೀರಿಕೊಂಡರು. ಆದರೆ ಅವರನ್ಬು ಸಹ ನೆನಪಿಸಿಕೊಳ್ಳುವ ಕರಲಸವನ್ನು ಶಾಸಕ ಅಭಯ ಪಾಟೀಲ‌ ಮಾಡಿದರು. ಇದು ಅವರು ತಮ್ಮನ್ನು ನಂಬಿಕೊಂಡು ಬಂದವರಿಗೆ ಕೊಡುವ ಗೌರವ ಅನಬಹುದು.

ಹುಟ್ಟು ಹಬ್ಬ ಆಚರಣೆ..!

ಬೆಳಗಾವಿ ಪಾಲಿಕೆ ವಿಷಯದಲ್ಲಿ ಯಾರು ಏನೇ ಹೇಳಿದರೂ ಕೂಡ ಅಭಯ ಪಾಟೀಲ ಕಿಂಗ್ ಮೇಕರ್. ಅದರಲ್ಲಿ ಎರಡು ಮಾತಿಲ್ಲ.

ಗಮನಿಸಬೇಕಾದ ಸಂಗತಿ ಎಂದರೆ ಬಿಜೆಪಿ ನಗರಸೇವಕ ಆನಂದ ಚವ್ಹಾಣ ಅವರ ಹುಟ್ಟು ಹಬ್ಬ ಎಂಬುದನ್ನು ಅರಿತ ಶಾಸಕರು ದಾಂಡಿಯಾ ಉತ್ಸವದಲ್ಲಿಯೇ ಸಾವಿರಾರು ಜನರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಶುಭಾಶಯ ಹೇಳಿದರು.

Leave a Reply

Your email address will not be published. Required fields are marked *

error: Content is protected !!