ಬೆಳಗಾವಿಯಲ್ಲಿ ಈಗ ಲೋಕಸಭೆ ಚುನಾವಣೆ ಕಾವು. ಟಿಕೆಟ್ ಅವರಿಗಾ, ಇವರಿಗಾ? ಕಾಂಗ್ರೆಸ್ ಗೆ ಶಾಕ್ ಕೊಡ್ತಾರಾ ಜನ? ಜಾತಿ ಲೆಕ್ಕಾಚಾರ ಶುರು.ಬಿಜೆಪಿಯಲ್ಲಿ ಟಿಕೆಟ್ ಗೆ ಪೈಪೋಟಿ, ಡಾಕ್ಟರ್, ನಿವೃತ್ತ ಐಎಎಸ್ ಅಧಿಕಾರಿ ಕೂಡ ರೇಸ್ ನಲ್ಲಿ.
ಬೆಳಗಾವಿ.
ಜಿಲ್ಲೆಯ ರಾಜಕಾರಣವೇ ವಿಚಿತ್ರ. ಇಲ್ಲಿನ ರಾಜಕಾಣಿಗಳ ಒಳ ಹೊಡೆತವೇ ಗೊತ್ತಾಗಲ್ಲ. ಮೇಲ್ನೋಟಕ್ಕೆ ಎಲ್ಲಾ ಒಂದೇ.!
ಆದರೆ ರಾಜಕಾರಣ ಅಸಲಿ ಆಟ ಶುರುವಾದಾಗ ಯಾರು ಯಾರ ಪರ ಎನ್ನುವುದು ಗೊತ್ತಾಗುತ್ತದೆ.
ರಾಜ್ಯ ರಾಜಕಾರಣದಲ್ಲಿ ಈಗ ಏನಿದ್ದರೂ ಲೋಕಸಭೆ ಚುನಾವಣೆದ್ದೇ ಮಾತು. ಅಲ್ಲಿ ಟಿಕೇಟ್ ಯಾರಿಗೆ, ಇಲ್ಲಿ ಯಾರಿಗೆ? ಅವರಿಗೆ ಕೊಟ್ಟರೆ ಇವರೇನ್ ಮಾಡ್ತಾರೆ …ಹೀಗೆ ಎಲ್ಲಾ ಪ್ರಶ್ನೆಗಳು ಚರ್ಚೆ ಗಳು ರಾಜಕೀಯದಲ್ಲಿ ನಡೆಯುತ್ತಿವೆ.
ಇಲ್ಲಿ ಉಳಿದ ಕ್ಷೇತ್ರದಲ್ಲಿ ಯಾವ ರೀತಿ ಚರ್ಚೆ ಆಗುತ್ತದೆಯೋ ಗೊತ್ತಿಲ್ಲ. ಆದರೆ ಬೆಳಗಾವಿ ಜಿಲ್ಲೆಯಲ್ಲಿ ಮಾತ್ರ ಟಿಕೇಟ್ ವಿಷಯ ಬಂದಾಗ ಕೆಲವರ ಮಾತು ಕೇಳಲೇಬೇಕಾಗುತ್ತದೆ.
ಕಾಂಗ್ರೆಸ್ ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಮಾತು ಬಹುತೇಕ ಅಂತಿ. ಆದರೆ ಬಿಜೆಪಿಯಲ್ಲಿ ಆಕಾಂಕ್ಷಿಗಳನ್ನು ಹೊರತುಪಡಿಸಿ ಪ್ರಭಾಕರ ಕೋರೆ, ಬಾಲಚಂದ್ರ ಜಾರಕಿಹೊಳಿ. ಅಭಯ ಪಾಟೀಲ, ರಮೇಶ ಜಾರಕಿಹೊಳಿ, ಈರಣ್ಣ ಕಡಾಡಿ ಅಭಿಪ್ರಾಯ ಕೇಳಲಾಗುತ್ತದೆ. ಇವರೆಲ್ಲ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಹೀಗಾಗಿ ಸಾಧಕ ,ಬಾಧಕ ಬಗ್ಗೆ ಕೇಳಲಾಗುತ್ತದೆ. ಕಳೆದ ಬಾರಿ ಕೂಡ ಬಿಜಿಪಿ ಗೆಲ್ಲಲು ಬೆಳಗಾವಿ ದಕ್ಷಿಣ ಮತ್ತು ಗೋಕಾಕ ಕ್ಷೇತ್ರ ಕಾರಣವಾಗಿತ್ತು.
ಬಿಜಿಪಿ ಟಿಕೇಟ್ ಆಕಾಂಕ್ಷಿಗಳು..!
ಮಹಾಂತೇಶ ಕವಟಗಿಮಠ. ಎಂ.ಜಿ.ಹಿರೇಮಠ, ಅನಿಲ ಬೆನಕೆ, ರಮೇಶ ಕತ್ತಿ (ಬೆಳಗಾವಿ ಕ್ಷೇತ್ರ)
ಗಮನಿಸಬೇಕಾದ ಸಂಗತಿ ಎಂದರೆ ಡಾ.ಗಿರೀಶ್ ಸೋನವಾಲ್ಕರ್ ಅವರ ಹೆಸರು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಎರಡೂ ಪಾರ್ಟಿಯಲ್ಲಿ ಮುನ್ನೆಲೆಗೆ ಬರ್ತಿದೆ. ಆದರೆ ಅವರ ಒಲವು ಯಾವ ಪಾರ್ಟಿಯತ್ತ ಇದೆ ಎನ್ನುವುದು ಗೊತ್ತಿಲ್ಲ.
ಸಿಂಪಲ್ ಆಗಿ ಹೇಳಬೇಕೆಂದರೆ ಕಾಂಗ್ರೆಸ್ ನಲ್ಲಿ ಟಿಕೇಟ್ ಯಾರಿಗೆ ಅನ್ನೊದನ್ನು ಹೈ ಕಮಾಂಡ ಸಚಿವ ಸತೀಶ ಜಾರಕಿಹೊಳಿ ಹೆಗಲಿಗೆ ಹೊರೆಸಿದೆ ಎಂದು ಹೇಳಲಾಗಿದೆ.
ಬೆಳಗಾವಿ ಕ್ಷೇತ್ರ.. ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಈಗ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರು ಮಹಾಂತೇಶ ಕವಟಗಿಮಠ ಅವರದ್ದು. !
ಕಳೆದ ಹಲವು ತಿಂಗಳುಗಳಿಂದ ಆಯಾ ಕ್ಷೇತ್ರದ ಬಿಜೆಪಿ ನಾಯಕರ ಜತೆಗೂಡಿ ಸಂಚಾರ ಕೂಡ ಮುಗಿಸಿದ್ದಾರೆ. ಹೈಕಮಾಂಡ ಕೂಡ ಬಹುತೇಕ ಅವರ ಹೆಸರನ್ನು ಅಂತಿಮ ಮಾಡುವ ಸಾಧ್ಯತೆಗಳಿವೆ.
ಇದರ ಜೊತೆಗೆ ಈಗ ನಿವೃತ್ತ ಐಎಎಸ್ ಅಧಿಕಾರಿ ಎಂ.ಜಿ.ಹಿರೇಮಠ ಅವರ ಹೆಸರೂ ಚಾಲ್ತಿಗೆ ಬರುತ್ತಿದೆ. ಈ ನಿಟ್ಟಿನಲ್ಲಿ ಕೆಲ ಮಠಾಧೀಶರ ಮೂಲಕ ಬಿಜೆಪಿ ನಾಯಕರನ್ನು ಸಂಪರ್ಕ ಮಾಡುವ ಕೆಲಸ ನಡೆಸಿದ್ದಾರೆಂದು ಹೇಳಲಾಗಿದೆ.
ಆದರೆ ಬಿಜೆಪಿ ಹೈ ಕಮಾಂಡ ಮತ್ತು ಸಂಘ ಪರಿವಾರದಲ್ಲಿ ಕವಟಗಿಮಠ ಅಥವಾ ಡಾ. ಸೋನವಾಲ್ಕರ ಹೆಸರು ಪ್ರಮುಖವಾಗಿದೆ. ರಮೇಶ ಕತ್ತಿ ಅವರು ಚಿಕ್ಕೋಡಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರು. ಆದರೆ ಅವರಿಗೆ ಚಿಕ್ಕೋಡಿ ಬದಲು ಬೆಳಗಾವಿಗೆ ನೋಡೊಣ ಎಂದಿದ್ದಾರೆಂದು ಹೇಳಲಾಗಿದೆ .
ಕಾಂಗ್ರೆಸ್ ನಿಂದ ಬೆಳಗಾವಿ ಕ್ಷೇತ್ರದಿಂದ ಯಾರು ಎನ್ನುವುದು ಅಂತಿಮವಾಗಿಲ್ಲ. ಸತೀಶ್ ಜಾರಕಿಹೊಳಿ ಸೂಚಿಸಿದ ಹೆಸರು ಅಂತಿಮ ಎನ್ನುವುದರಲ್ಲಿ ಎರಡು ಮಾತಿಲ್ಲ.
ಕುರುಬರ ಸಮಾವೇಶದ ಸಂದರ್ಭದಲ್ಲಿ ಸತೀಶ ಜಾರಕಿಹೊಳಿಯವರು ಒಂದು ಕ್ಷೇತ್ರಕ್ಕೆ ಕುರುಬರಿಗೆ ಕೊಡಲಾಗುವುದು ಎಂದು ಹೇಳಿದ್ದರು. ಹೀಗಾಗಿ ಮಾಜಿ ಸಂಸದ ಅಮರಸಿಂಹ ಪಾಟೀಲರು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ. ಅವರು ಈಗಾಗಲೇ ಏಐಸಿಸಿ ಅಧ್ಯಕ್ಷರನ್ನೂ ಸಹ ಭೆಟ್ಟಿ ಮಾಡಿದ್ದಾರೆಂದು ಗೊತ್ತಾಗಿದೆ.
ಅದೇನೇ ಆಗಲಿ, ಬೆಳಗಾವಿ ರಾಜಕೀಯದಲ್ಲಿ ಲೋಕ ಕಾವು ಈಗ ಕ್ರಮೇಣ ಹೆಚ್ಚಾಗುತ್ತಿದೆ