ಬೆಳಗಾವಿ. ಗಡಿನಾಡ ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ಜಾತಿ ಸಂಘರ್ಷಕ್ಕೆ ತಿರುಗುವ ಲಕ್ಷಣಗಳು ಕಾಣ ಸಿಗುತ್ತಿವೆ
ಸಚಿವ ಸತೀಶ್ ಜಾರಕಿಹೊಳಿ ಅವರು ಪಾಲಿಕೆ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕ ಅಭಯ ಪಾಟೀಲ ವಿರುದ್ಧ ‘ದಲಿತಾಸ್ತ್ರ’ಪ್ರಯೋಗಿಸಿದ್ದಾರೆ.
ಆದರೆ ಈಗ ಸತೀಶ್ ಜಾರಕಿಹೊಳಿ ವಿರುದ್ಧವೇ ಮರಾಠಾಸ್ತ್ರ ಪ್ರಯೋಗಿಸಲಾಗುತ್ತಿದೆ. ಬೆಳಗಾವಿ ಮಹಾನಗರ ಪಾಲಿಕೆ ಅಥವಾ ಬೂಡಾದಲ್ಲಿ ಅವ್ಯವಹಾರ ಆಗಿದ್ದರೆ ತನಿಖೆ ಮಾಡಿಸಿದರೆ ಅದನ್ನು ಸ್ವಾಗತಿಸುತ್ತೇವೆ ಎಂದು ಬೂಡಾ ಮಾಜಿ ಅಧ್ಯಕ್ಷ ಸಂಜಯ ಬೆಳಗಾಂವಕರ ಹೇಳಿದ್ದಾರೆ
ಆದರೆ ಮೇಯರ್ ಅವರು ಮರಾಠಾ ಸಮುದಾಯಕ್ಕೆ ಸೇರಿದ್ದಾರೆಂದು ತಿಳಿದು ಅದನ್ನು ಸೂಪರ್ ಸೀಡ್ ಮೂಲಕ ಅನಗತ್ಯವಾಗಿ ತೊಂದರೆ ಕೊಡುವುದನ್ನು ಮರಾಠಾ ಸಮುದಾಯ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಬೆಳಗಾವಿ ಪಾಲಿಕೆ ಸಂಬಂಧ ಎಸ್ ಸಿ ಅಧಿಕಾರಿಗಳನ್ನು ಶಾಸಕ ಅಭಯ ಪಾಟೀಲ ಟಾರ್ಗೆಟ್ ಮಾಡುತ್ತಿದ್ದಾರೆಂದು ಆರೋಪಿಸಿ ಅವರಿಗೆ ದಲಿತ ವಿರೋಧಿ ಪಟ್ಟ ಕಟ್ಟುವ ಪ್ರಯತ್ನ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.
.ಇಷ್ಟಕ್ಕೆ ಹೋರಾಟನಾ?
ಪ್ರಭಾವಿ ಸಚಿವವಾಗಿದ್ದುಕೊಂಡು ಮುಖ್ಯಮಂತ್ರಿ ಗಳ ಪರಮಾಪ್ತರಾಗಿರುವ ಸಚಿವ ಸತೀಶ್ ಜಾರಕಿಹೊಳಿ ಪಾಲಿಕೆ ವಿರುದ್ಧ ಹೋರಾಟದ ಹಾದಿ ಹಿಡಿಯುವುದಾಗಿ ಹೇಳಿದ್ದು ವಿಭಿನ್ನ ಚರ್ಚೆಗೆ ಎಡೆ ಮಾಡಿಕೊಡುತ್ತಿದೆ.
ಕಳೆದೆ ದಿ. 21 ರಂದು ಮಹಾನಗರ ಪಾಲಿಕೆಯ ಸಭೆಯಲ್ಲಿ ನಡೆದ ರಾಜಕೀಯ ಹೈಡ್ರಾಮಾದ ಮುಂದುವರೆದ ಭಾಗವಾಗಿ ದಿ, 25 ರಂದು ಮಧ್ಯಾಹ್ನ 12 ಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿ ಸತೀಶ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಶಾಸಕ ಆಸೀಫ್ ಶೇಠರ ಕಚೇರಿಯಲ್ಲಿ ಈ ಸಭೆ ನಡೆಯಲಿದೆ, ಈ ಸಭೆಯಲ್ಲಿ ದಲಿತ ಅಧಿಕಾರಿಗಳನ್ನೇ ಶಾಸಕರು ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನುವುದು ಸೇರಿದಂತೆ ಮೇಯರ್ ಕಡತ ನಾಪತ್ತೆ ಮತ್ತು 138 ಪೌರ ಕಾರ್ಮಿಕರ ನೇಮಕದಲ್ಲಿ ಆದ ಭ್ರಷ್ಠಾಚಾರದ ಬಗ್ಗೆ ಚರ್ಚ ನಡೆಸಲಾಗುವುದು ಎಂದು ಸಚಿವರ ಕಚೇರಿಯಿಂದ ಹೊರಡಿಸಿದ ಪೋಸ್ಟನಲ್ಲಿ ತಿಳಿಸಲಾಗಿದೆ. ಇದರ ಜೊತೆಗೆ ಕಳೆದ 21 ರಂದು ನಡೆದ ಪಾಲಿಕೆಯ ನಡಾವಳಿಗಳನ್ನು ತಕ್ಷಣ ಪೂರೈಸಬೇಕೆಂದು ಒತ್ತಾಯಿಸಲಾಗುತ್ತದೆ ಎಂದು ಆ ಪೋಸ್ಟನಲ್ಲಿ ಉಲ್ಲೇಖಿಸಲಾಗಿದೆ. ಮೇಲಾಗಿ ಇಲ್ಲಿ ತನಿಖೆ ಬೇಡ ಎಂದು ಸಚಿವರ ಕೈ ಕಟ್ಟಿ ಹಾಕಿದವರು ಯಾರು ಎನ್ನುವ ಪ್ರಶ್ನೆ ಬಹುತೇಕರನ್ನು ಕಾಡುತ್ತಿದೆ.
ಸಧ್ಯ ನಡೆಯುತ್ತಿರುವ ಮರಾಠಾ ಮತ್ತು ದಲಿತಾಸ್ತ್ರ ಮುಂಬರುವ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರಿದರೂ ಅಚ್ಚರಿ ಪಡಬೇಕಿಲ್ಲ.
ಸೂಪರ್ ಸೀಡ್ ಆಗಲ್ಲ..! ಇದೆಲ್ಲದರ ನಡುವೆ ಪಾಲಿಕೆಯನ್ನು ಸೂಪರ್ ಸೀಡ್ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಮತ್ತೊಂದು ಹಂತದ ಕಸರತ್ತನ್ನು ಸಹ ನಡೆಸಿದ್ದರು ಎನ್ನುವ ಸಂಗತಿ ಕೂಡ ಹೊರಬಿದ್ದಿದೆ.
ಆದರೆ ಅಧಿಕಾರಿಗಳು ಕೊಟ್ಟ ಮಾಹಿತಿಯನ್ನು ಗಮನಿಸಿದ ನಗರಾಭಿವೃದ್ಧಿ ಸಚಿವರು, ಇದೊಂದೆ ವಿಷಯ ಮುಂದಿಟ್ಟುಕೊಂಡು ಪಾಲಿಕೆ ಸೂಪರ್ ಸೀಡ್ ಮಾಡಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಮತ್ತು ಯಾರಾದರೂ ಕೋರ್ಟ ಮೆಟ್ಟಿಲು ಹತ್ತಿದರೆ ಸರ್ಕಾರ ಛೀಮಾರಿಗೆ ಒಳಗಾಗಬೇಕಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವರು ಹೇಳಿದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಭಯ ಪಾಟೀಲರನ್ನು ರಾಜಕೀಯವಾಗಿ ಎದುರಿಸಲು ಹೋರಾಟದ ಹಾದಿ ಹಿಡಿಯಲಿದ್ದಾರೆ ಎನ್ನಲಾಗುತ್ತಿದೆ,
ತನಿಖೆಗೆ ಅಡ್ಡಿ ಮಾಡಿದ್ದು ಯಾರು? ಬೆಳಗಾವಿಯಲ್ಲಿ ಸ್ಮಾರ್ಟ ಸಿಟಿ, ತಿನಿಸು ಕಟ್ಟಾ ಮತ್ತು 138 ಪೌರ ಕಾರ್ಮಿಕರ ನೇಮಕದಲ್ಲಾದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಸಚಿವ ಜಾರಕಿಹೊಳಿ ಹೇಳಿದ್ದಾರೆ. ಆದರೆ ತನಿಖೆಗೆ ಅಡ್ಡಿ ಮಾಡಿದ್ದು ಯಾರು ಎನ್ನುವ ಪ್ರಶ್ನೆ ಎದುರಾಗಿದೆ. ತಾಕತ್ತಿ ದ್ದರೆ ಎಲ್ಲದರ ಬಗ್ಗೆ ಇಂದೇ ತನಿಖೆಗೆ ಆದೇಶ ಮಾಡಲಿ ಎಂದು ಕೆಲವರು ಸವಾಲು ಹಾಕಿದ್ದಾರೆ