ಬೆಳಗಾವಿ.
ನಗರದ ವಿಟಿಯುದಲ್ಲಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ನೇತೃತ್ವದ ನಿಯೋಗ ರಾಜ್ಯಪಾಲರನ್ನು ಭೆಟ್ಟಿ ಮಾಡಲಿದೆ.

ಬೆಳಗಾವಿ ಪಾಲಿಕೆ ಮೇಯರ್ ಪತ್ರದ ಹಿನ್ನೆಲೆಯಲ್ಲಿ ನಿಯೋಗ ರಾಜ್ಯಪಾಲರನ್ನು ಭೆಟ್ಟಿ ಮಾಡಲಿದೆ. ಶುಕ್ರವಾರ ಮಧ್ಯಾಹ್ನ 3.45 ಕ್ಕೆ ರಾಜ್ಯಪಾಲರು ಭೆಟ್ಟಿಗೆ ಸಮಯ ನಿಗದಿ ಮಾಡಿದ್ದಾರೆ. ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಅನಿಲ ಬೆನಕೆ , ಮೇಯರ್ ಸೇರಿದಂತೆ ಬಿಜೆಪಿಯ ಎಲ್ಲ ನಗರಸೇವಕರು ಈ ಸಂದರ್ಭದಲ್ಲಿ ಹಾಜರಿರುವರು ಎಂದು ಗೊತ್ತಾಗಿದೆ.