ಕನ್ನಡ ಹಬ್ಬಕ್ಕೆ ಸಜ್ಜಾದ ಬೆಳಗಾವಿಗರು.
ಬೆಳಗಾವಿ ತಂಟೆಗೆ ಬಂದ್ರೆ ಹುಷಾರ್ ಅಂದ ಕನ್ನಡ ಸೇನಾನಿಗಳು.
ಎಂಇಎಸ್ ಪುಂಡರಿಗೆ ಕರಾಳ ದಿನಕ್ಕೆ no chance ಅಂದ ಡಿಸಿ, ಪೊಲೀಸ್ ಕಮೀಶ್ನರ್.
ಟಿಳಕವಾಡಿಯಿಂದಲೇ ಕರವೇ ಮೆರವಣಿಗೆ ಆರಂಭ ಎಂದ ಕರವೇ
ಬೆಳಗಾವಿ.
`ಲೇ ಬರಬ್ಯಾಡ್ರಲೇ..
ಬೆಳಗಾವಿ ಕೇಳಾಕ್…
ಇಲ್ಲಿ ಕನ್ನಡಿಗರು ಬಾಳ್ ಖಡಕ್…!’
ಈ ಟೈಟಲ್ ಓದಿದರೆ ಸಾಕು ಕನ್ನಡಿಗರು ಎಂತಹವರು ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತೆ.
ಉಳಿದ ವಿಷಯ ಏನೇ ಇರಲಿ, ಕನ್ನಡ, ನಾಡು ನುಡಿ ವಿಷಯದಲ್ಲಿ ಯಾರೇ ಕಿತಾಪತಿ ಮಾಡಿದರೆ ಸಹಿಸಲ್ಲ ಎನ್ನುವ ಸಂದೇಶ ಮೇಲಿನ ಬರಹದ ಮೂಲಕ ತೋರಿಸಿಕೊಟ್ಡಿದ್ದಾರೆ. ಕಳೆದ ಬಾರಿ ಯಾರಪ್ಪಂದ್ ಏನೈತಿ, ಬೆಳಗಾವಿ ನಮ್ಮದೈತಿ ಎಂದಿದ್ದರು..
ಸಧ್ಯ ಹೇಗಾಗಿದೆ ಅಂದರೆ, ಯಾರದೊ ಒತ್ತಡಕ್ಕೆ ಒಳಗಾಗಿ ನಾಡದ್ರೋಹಿ ಎಂಇಎಸ್ ಪುಂಡರಿಗೆ ಕರಾಳ ದಿನಕ್ಕೆ ಅನುಮತಿ ನೀಡಿದರೆ ಅಲ್ಲಿಯೇ ನುಗ್ಗಲು ಸ್ಕೆಚ್ ಕೂಡ ಹಾಕಿದ್ದಾರೆ. ಅದಕ್ಕೊಂದು ಹೊರಜಿಲ್ಲೆಗಳ ಸೇನಾನಿಗಳ ತಂಡವೇ ರಚನೆಯಾಗಿದೆ.
ಈ ಹಿಂದೆ ಹೇಳಿದಂತೆ ಕನ್ನಡ ಹುಡುಗರು ಮಾಡಿಯೂ ತೋರಿಸಿದ್ದರು.. ಆದ್ದರಿಂದ ಸರ್ಕಾರ ಮತ್ತು ಬೆಳಗಾವಿ ಪೊಲೀಸರು ಆ ನಿಟ್ಟಿನಲ್ಲಿ ಎಂಇಎಸ್ ಪುಂಡರು ಬಾಲಬಿಚ್ಚದಂತೆ ನೋಡಿಕೊಳ್ಳಬೇಕಾಗಿದೆ.

ಇದೆಲ್ಲದರ ನಡುವೆ ಜಿಲ್ಲಾಡಳಿತ, ಬೆಳಗಾವಿ ಮಹಾನಗರ ಪಾಲಿಕೆಯು ಬೆಳಗಾವಿಯನ್ನು ಕನ್ನಡಮಯ ವಾತಾವರಣ ಸೃಷ್ಟಿ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿವೆ. ಎಲ್ಲ ವೃತ್ತಗಳನ್ನು ಅಂದಗೊಳಿಸುವ ಅಗತ್ಯ ಕೆಲಸ ಕೂಡ ವ್ಯವಸ್ಥಿತವಾಗಿ ನಡೆದಿದೆ.
ಈ ಬಾರಿ 50 ನೇ ಸುವರ್ಣ ಸಂಭ್ರಮ ಆಗಿರುವುದರಿಂದ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಆಗಬೇಕು ಎನ್ನುವ ಪ್ರಯತ್ನ ನಡೆದಿದೆ.

ಸುದೈವವೆಂದರೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಪೊಲೀಸ್ ಆಯುಕ್ತ ಸಿದ್ರಾಮಪ್ಪ, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಉಪ ಆಯುಕ್ತ ಉದಯಕುಮಾರ ತಳವಾರ ಸೇರಿದಂತೆ ಎಲ್ಲರೂ ರಾತ್ರಿ ಹಗಲು ಎನ್ನದೇ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆ ಸಿದ್ಧತೆಯಲ್ಲಿ ಮಗ್ನರಾಗಿದ್ದಾರೆ.

ಟಿಳಕವಾಡಿಯಿಂದಲೇ ಮೆರವಣಿಗೆ..!
ಉಳಿದಿದ್ದು ಏನೇ ಇರಲಿ . ಕನ್ನಡ ರಾಜ್ಯೋತ್ಸವ ಬಂದಾಗ ಇಲ್ಲಿನ ಕನ್ನಡಿಗರ ಖದರ್ ನೋಡಬೇಕು, ಯಾವುದಕ್ಕೂ ಕಮ್ಮಿ ಇರಲ್ಲ.
ತಮ್ಮ ಎಲ್ಲ ದೈನಂದಿನ ಕೆಲವನ್ನು ಬಿಟ್ಟು ಕನ್ನಡ ನಾಡು ನುಡಿಗೆ ಟೊಂಕಕಟ್ಟಿ ನಿಲ್ಲುತ್ತಾರೆ, ಜೊತೆಗೆ ನಾಡದ್ರೋಹಿಗಳು ಬಾಲಚಿಚ್ಚದಂತೆ ಯಾವ ರೀತಿ ತಂತ್ರಗಾರಿಕೆ ಮಾಡಬೇಕು ಎನ್ನುವುದನ್ನೂ ಕೂಡ ತೆರೆಮರೆಯಲ್ಲಿ ಮಾಡುತ್ತಾರೆ,

ಒಂದು ವೇಳೆ ಯಾರದೋ ಒತ್ತಡಕ್ಕೆ ಒಳಗಾಗಿ ಕರಾಳ ದಿನಕ್ಕೆ ಅನುಮತಿ ನೀಡಿದರೆ ಏನು ಮಾಡಬೇಕು ಎನ್ನುವುದನ್ನೂ ಕೂಡ ಸ್ಕೆಚ್ ಹಾಕಿದ್ದಾರೆಂದು ಗೊತ್ತಾಗಿದೆ
ಈಗ ಮೊದಲ ಹಂತವಾಗಿ ಈ ಬಾರಿ ರಾಜ್ಯೋತ್ಸವದ ಕರವೇ ಮೆರವಣಿಗೆಯಲ್ಲಿ ಟಿಳಕವಾಡಿಯ ಲೇಲೇ ಮೈದಾನದಿಂದ ಆರಂಭಿಸಲು ಚಿಂತನೆ ನಡೆದಿದೆ ಎಂದು ಕರವೇ ಅಧ್ಯಕ್ಷ ದೀಪಕ ಗುಡಗನಟ್ಟಿ ಹೇಳಿದ್ದಾರೆ,
ಪ್ರತಿ ಬಾರಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಮಾತ್ರ ಇದು ನಡೆಯುತ್ತಿತ್ತು, ಈಗ ಟಿಳಕವಾಡಿಯಿಂದ ಎಲ್ಲೆಡೆ ಸುತ್ತಾಡಿ ಚನ್ನಮ್ಮ ವೃತ್ತಕ್ಕೆ ಬರಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದು ಅವರು ಹೇಳಿದರು,