ಬೆಳಗಾವಿ
ಗೋಕಾಕ ಶಾಸಕ ಮತ್ತು ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಇಂದು ಒಳ್ಳೆಯ ಮೂಡನಲ್ಲಿದ್ದರು.
ಪತ್ರಕರ್ತರೊಂದಿಗೆ ಕೆಲವೊಮ್ಮೆ ಸಿಡಿಮಿಡಿ ಮಾಡುತ್ತಿದ್ದ ರಮೇಶ್ ಜಾರಕಿಹೊಳಿ ಇಂದು ಲೋಕಾಭಿರಾಮವಾಗಿ ಕೆಲವೊಂದು ವಿಷಯಗಳ ಮೇಲೆ ಬೆಳಕು ಚೆಲ್ಲಿದರು,
ಗಮನಿಸಬೇಕಾದ ಸಂಗತಿ ಎಂದರೆ, ಬೆಳಗಾವಿಯಲ್ಲಿ ಸರಿಯಾಗಿ 12 ಕ್ಕೆ ಪತ್ರಿಕಾಗೋಷ್ಠಿ ನಡೆಸಿ ಹೊಸ ಬಾಂಬ್ ಹಾಕಲಿದ್ದಾರೆ ಎನ್ನುವ ಸುದ್ದಿಯನ್ನು ನಿಮ್ಮ ಇ ಬೆಳಗಾವಿ ಪ್ರಕಟಿಸಿತ್ತು,
ಈ ಹಿನ್ನೆಲೆಯಲ್ಲಿ ಜಾರಕಿಹೊ:ಳಿ ಅವರು ಕೊಟ್ಟ ಸಮಯಕ್ಕಿಂತಲೂ ಅರ್ಧ ತಾಸು ಮುಂಚಿತವಾಗಿ ಮಾಧ್ಯಮದವರು ಬೆಳಗಾವಿ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಯಾವುದೇ ಮುಚ್ಚುಮರೆಯಿಲ್ಲದೇ ಸಣ್ಣ ಮಕ್ಕಳಿಗೆ ಬೈದಂತೆ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮೇಲೆ ಕೆಂಡಕಾರಿದರು,
ಡಿಕೆಶಿ ಅವರ ಸೊಕ್ಕಿನಿಂದಲೇ ನಾನು ಈ ಹಿಂದೆ ಸರ್ಕಾರ ಪತನ ಮಾಡಿದ್ದೆ. ಈಗ ನಾವು ಯಾವುದೇ ರೀತಿಯ ಆಪರೇಷನ್ ಕಮಲ ಮಾಡುತ್ತಿಲ್ಲ. ಆದರೆ ಅವರು ಅನಗತ್ಯವಾಗಿ ನಮ್ಮ ನಾಯಕರನ್ನು ಟೀಕೆ ಮಾಡುತ್ತಿದ್ದುದರಿಂದ ನಾನು ಮಾಧ್ಯಮದವರ ಮುಂದೆ ಬರಬೇಕಾಗಿದೆ ಎಂದು ರಮೇಶ ಜಾರಕಿಹೊಳಿ ಸ್ಪಷ್ಟಪಡಿಸಿದರು,
ಸುಳ್ಳು ಗ್ಯಾರಂಟಿಗಳ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ., ಈ ಸರ್ಕಾರ ಪತನ ಮಾಡಲು ಯಾರೂ ಪ್ರಯತ್ನ ಮಾಡುತ್ತಿಲ್ಲ ಎನ್ನುತ್ತಲೇ ಇಲ್ಲಿ ಸಿದ್ಧರಾಮಯ್ಯ ಬದಲು ಡಿಕೆ. ಮುಖ್ಯಮಂತ್ರಿ ಆಗಿದ್ದರೆ ಅದರ ಕಥೆನೇ ಬೇರೆ ಆಗುತ್ತಿತ್ತು ಎಂದು ರಮೇಶ ಜಾರಕಿಹೊಳಿ ಹೇಳಿದರು,

ಈ ಸರ್ಕಾರವನ್ನು ಯಾರೂ ಬೀಳಿಸೋದು ಬೇಡ. ಡಿಕೆ ಶಿವಕುಮಾರ ಮತ್ತು ಬೆಳಗಾವಿ ರಾಜಕಾರಣವೇ ಪತನಕ್ಕೆ ಕಾರಣವಾಗಲಿದೆ ಎಂದರು.
ಇನ್ನುಳಿದಂತೆ ಸಿಡಿ ವಿಷಯ ಬಂದಾಗ ಸಹಜವಾಗಿ ಡಿಕೆ ಅದರ ಕಿಂಗ್ ಪಿನ್ ಎಂದರು, ಅಷ್ಟೇ ಅಲ್ಲ ಈ ವಿಷಯದಲ್ಲಿ ಏನೇನು ಮಾತನಾಡಿದ್ದಾರೆ ಎನ್ನುವುದರ ಬಗ್ಗೆ ದಾಖಲೆ ಇದೆ,. ಅದನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಗೃಹ ಸಚಿವರನ್ನು ಭೆಟ್ಟಿ ಆಗುತ್ತೇನೆ, ಜೊತೆಗೆ ಸಿಬಿಐಗೆ ವಹಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು,

ಡಿಕೆಶಿ ಅವರು ಮಾಜಿ ಮಂತ್ರಿ ಆಗ್ತಾರೆ ನೋಡ್ತಿರಿ ಎಂದ ರಮೇಶ ಜಾರಕಿಹೊಳಿ ಅವರು , ಯಾರದ್ದೂ ಹೆಸರನ್ನು ಪ್ರಸ್ತಾಪಿಸದೇ ಅವರೆಲ್ಲಾ ಲಾಟರಿ ಮಂತ್ರಿ ಎಂದು ಕಿಡಿಕಾರಿದರು,