ಸರ್ಕಾರಿ ಕೆಲಸ ದೇವರ ಕೆಲಸ..!
ಬೆಳಗಾವಿ ಬಗ್ಗೆ ಗಡಿನಾಡ ಬೆಳಗಾವಿಯಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಹೇಗಿದ್ದೀರಾ ಸರ್? ಎಂದು ಕೇಳಲೇ ಬಾರದು. ಏಕೆಂದರೆ ಅವರಿಗೆ ಈಗ ಕೆರೆಸಿಕೊಳ್ಳಲು ಸಹ ಪುರುಸೊತ್ತಿಲ್ಲ. ಅಷ್ಡು ಗಡಿಬಿಡಿ. ಅಕ್ಷರಶಃ ಅವರು ಈ ಸರ್ಕಾರಿ ಕೆಲಸವನ್ನು ದೇವರ ಕೆಲಸ ಎಂದೇ ಭಾವಿಸಿ ಮುನ್ನಡೆಯುತ್ತಿದ್ದಾರೆ. ಮತ್ತೊಂದು ಸಂಗತಿ ಅಂದರೆ, ದೇವರ ಕೆಲಸ ಇದ್ದರೆ ಒಂದರ್ಧ ತಾಸು ರೆಸ್ಟ್ ಮಾಡಿದರೆ ದೇವರು ಸಿಟ್ಡಿಗೇಳಲ್ಲ ಅಂದುಕೊಳ್ಳಬಹುದು. ಆದರೆ ಸರ್ಕಾರಿ ದೇವರು ಮಾತ್ರ ಈಗ ಕೆಲಸಕ್ಕೆ ವಿಶ್ರಾಂತಿಯನ್ನೇ ನೀಡುತ್ತಿಲ್ಲ ಬೆಳಗಾವಿಯಲ್ಲಿ ಇದೇ ಡಿಸೆಂಬರ 4 ರಿಂದ…