Headlines

ಅಭಯ `ಉಸಾಬರಿ’ ಕಟ್ಟೆಗಳು.!

ದಕ್ಷಿಣ ಶಾಸಕ ಅಭಯ ಪಾಟೀಲರ ಹೊಸ ಪರಿಕಲ್ಪನೆ.

ಬೆಳಗಾವಿ ದಕ್ಷಿಣದ ವಾರ್ಡಗಳಲ್ಲಿನ್ನು ಉಸಾಬರಿ ಕಟ್ಟೆ ಸ್ಥಾಪನೆ.‌

ಮನಸೋ ಇಚ್ಚೆ ನಾತಾಡಿ, ಬಿಪಿ, ಶುಗರದಿಂದ ದೂರವಾಗಿರಿ.

ರಾಜ್ಯದಲ್ಕಿಯೇ ಮೊದಲ ಉಸಾವರಿ ಕಟ್ಟೆಗಳು.


ಬೆಳಗಾವಿ
ಸದಾ ವಿನೂತನ ಯೋಜನೆಗಳ ಬಗ್ಗೆ ಚಿಂತನೆ ಮಾಡುವ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರ ಉಸಾಬರಿ ಕಟ್ಟೆ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ,
ಅಂದಹಾಗೆ ಉಸಾಬರಿ ಕಟ್ಟೆ ಎಂದಾಕ್ಷಣ ಇದು ಕೆಟ್ಟದ್ದು ಎನ್ನುವ ಚಿಂತೆ ಮಾಡಬೇಡಿ.

ಎಲ್ಲರೂ ಒಂದೆಡೆ ಕುಳಿತು ಮುಕ್ತವಾಗಿ ಹರಟೆ ಹೊಡೆದು ಮನಸ್ಸಿನ ಭಾರವನ್ನು ಕಡಿಮೆ ಮಾಡಿಕೊಳ್ಳಲು ಈ ಕಟ್ಟೆ ಉಪಯೋಗವಾಗುತ್ತದೆ ಎನ್ನುವುದು ಶಾಸಕರ ಅಭಿಪ್ರಾಯ,

ಹಾಗೆ ನೋಡಿದರೆ ಇಂತಹ ಉಸಾಬರಿ ಕಟ್ಟೆ ಮೇಲೆ ಕುಳಿತು ಒಂದಿಷ್ಟು ಹರಟೆಗಳು ಆದರೆ ಬಿಪಿ, ಶುಗರ್ ಪ್ರಶ್ಮೆಯೇ ಬರಲ್ಲ.


ಮೊದಲು ಗ್ರಾಮೀಣ ಕ್ಷೇತ್ರದಲ್ಲಿ ಅಲ್ಲಲ್ಲಿ ಚಾವಡಿ ಕೂಟಗಳಿರುತ್ತಿದ್ದವು, ಮತ್ತು ಅಲ್ಲಿಯೇ ಚಕ್ಕಡಿ ನೊಗದ ಮೇಲೆ ಸಾಲಾಗಿ ಕುಳಿತು ಹರಟೆ ಹೊಡೆಯುತ್ತಿದ್ದರು. ಇನ್ನು ಅಲ್ಲಿ ತಮಗೆ ಸಂಬಂಧಪಡದ ಊರೊಳಗಿನ ಉಸಾಬರಿ ವಿಷಯಗಳ ಬಗ್ಗೆ ಮಾತನಾಡಿ ಮನೆಗೆ ಹೋಗಿ ಆರಾಮವಾಗಿ ಮಲಗುತ್ತಿದ್ದರು. ಅಂತಹವರಿಗೆ ಆಕಾಶ ಕಳಚಿ ಬಿದ್ದರೂ ಏನು ವ್ಯತ್ಯಾಸವೇ ಆಗುತ್ತಿರಲಿಲ್ಲ.


ಇನ್ನು ಬೆಳಗಾವಿಯಂತಹ ಸಿಟಿಗೆ ಬಂದರೆ ಅಕ್ಕಪಕ್ಕದಲ್ಲಿ ಏನೇ ನಡೆದರೂ ಕೂಡ ಏನಾಯಿತು ಎಂದು ಕೇಳಲು ಯಾರೂ ಬರಲ್ಲ. ಅಂದರೆ ಅಷ್ಟು ಬ್ಯುಜಿ

ಅಪಾರ್ಟಮೆಂಟ್ ಗಳಲ್ಲಿ ವಾಸಿಸುವ ಜನ ಒಬ್ಬರಿಗೊಬ್ಬರು ಕುಳಿತು ಒಟ್ಟಿಗೆ ಉಭಯ ಕುಶಲೋಪರಿ ಮಾಡಿಕೊಳ್ಳುವುದು ಈಗ ಕಾಣಸಿಗುವುದಿಲ್ಲ. ಅಲ್ಲಿ ಪಕ್ಕದ ಮನೆಯಲ್ಲಿ ಏನೇ ಘಟನೆ ನಡೆದರೂ ಕೂಡ ಮತ್ತೊಬ್ಬರು ಮನೆಗೆ ಬೀಗ ಹಾಕಿಕೊಂಡು ಹೋಗುವ ಪರಿಸ್ಥಿತಿ ಇಲ್ಲಿದೆ.

ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತ ಬಂದ ಶಾಸಕ ಅಭಯ ಪಾಟೀಲರು ಪ್ರತಿ ವಾರ್ಡನಲ್ಲಿ ಉಸಾಬರಿ ಕಟ್ಟೆ ಸ್ಥಾಪನೆ ಮಾಡುವ ಪರಿಕಲ್ಪನೆಯನ್ನು ಮಾಡಿದರು. ಬರೀ ಮಾತಾಡಿ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಬದಲಾಗಿ ಅದನ್ನು ಕಾರ್ಯರೂಪಕ್ಕೂ ತಂದರು,


ಉಸಾಬರಿ ಕಟ್ಟೆ ಏಕೆ ಬೇಕು? !
ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಬರುವ ಪ್ರತಿಯೊಂದು ವಾರ್ಡನಲ್ಲಿ ಇಂತಹ ಉಸಾಬರಿ ಕಟ್ಟೆಗಳನ್ನು ಮಾಡುವ ಹೊಸ ಯೋಜನೆಯನ್ನು ಶಾಸಕ ಅಭಯ ಪಾಟೀಲರು ಹಮ್ಮಿಕೊಂಡಿದ್ದಾರೆ.
ಇಂತಹ ಕಟ್ಟೆಯ ಮೇಲೆ ಕುಳಿತು ಮನಸ್ಸಿನಲ್ಲಿದ್ದುದನ್ನು ಆಪ್ತರೊಂದಿಗೆ ಹಂಚಿಕೊಂಡು ಹೋದರೆ ಆಯುಷ್ಯ ಇನ್ನಷ್ಟು ಹೆಚ್ಚಾಗುತ್ತದೆ ಎನ್ನುವುದು ಅವರ ಅಭಿಪ್ರಾಯ.
ಈ ಕಾರಣದಿಂದ ರಾಜ್ಯದಲ್ಲಿ ಮೊದಲ ಬಾರಿಗೆ ದಕ್ಷಿಣ ಕ್ಷೇತ್ರದಲ್ಲಿ ಉಸಾಬರಿ ಕಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಅವರು ಹೇಳುತ್ತಾರೆ.

Leave a Reply

Your email address will not be published. Required fields are marked *

error: Content is protected !!