ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಜೆಪಿ ನಗರಸೇವಕವನನ್ನೇ ಜೈಲಿಗಟ್ಟಿದ ಪೊಲೀಸ್. ಹೋರಾಟಕ್ಕೆ ಸಜ್ಜಾದ ಬಿಜೆಪಿ. ಇಂತಹುದಕ್ಕೆ ಮಣಿಯಲ್ಲ. ಬಿಜೆಪಿ ನಗರಸೇವಕರನ್ನು ಭಯದಲ್ಲಿಡುವ ಯತ್ನ. ಕಾಂಗ್ರೆಸ್ ,ಎಂಇಎಸ್ ಒಂದಾಗಿ ಷಡ್ಯಂತ್ರ, ರಾಜ್ಯಾಧ್ಯಕ್ಷರೇ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಬೆಳಗಾವಿ.
ಹಲ್ಲೆಗೋಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಜೆಪಿ ನಗರಸೇವಕ ಅಭಿಜಿತ ಜವಳಕರ ಅವರನ್ನು ಪೊಲೀಸರು ಬಂದಿಸಿ ಜೈಲಿಗೆ ಕಳಿಸಿದ್ದಾರೆ.
ಕಳೆದ ಎರಡು ದಿನದ ಹಿಂದೆ ರಮೇಶ ಪಾಟೀಲರು ಅಕ್ರಮ ಮೊಬೈಲ್ ಟಾವರ್ ಕೂಡಿಸುವುದಕ್ಕೆ ಸಾರ್ಅವಜನಿಕರ ದೂರಿನ ಮೇರೆಗೆ ಅಭಿಜಿತ್ ಜವಳಕರ ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ಅವರ ಮೇಲೆ ಅಲ್ಲಿನ ನಿವಾಸಿ ರಮೇಶ ಪಾಟೀಲ ಸೇರಿದಂತೆ ಹತ್ತು ಜನರ ಗುಂಪು ತೀವೃ ಸ್ವರೂಪದ ಹಲ್ಲೆ ಮಾಡಿತ್ತು.
ಈ ಹಿನ್ನೆಲೆಯಲ್ಲಿ ಅವರು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು.
ಇಂದು ಮಧ್ಯಾಹ್ಮ ಎಂಇಎಸ್ ನವರು ಪ್ರತಿಭಟನೆ ನಡೆಸಿದ ನಂತರ ಟಿಳಕಬಾಡಿ ಪೊಲೀಸರು ಆಸ್ಪತ್ರೆಗೆ ತೆರಳಿ ಜವಳಕರ ಅವರನ್ನು ಬಂಧಿಸಿದರು.
ಗಮನಿಸಬೇಕಾದ ಸಂಗತಿ ಎಂದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ವೈದ್ಯರಿಂದ ಡಿಸ್ಚಾರ್ಜ ಮಾಡಿಸದೇ ಅವರನ್ನು ಕರೆದುಕೊಂಡುಹೋದರು ಎನ್ನಲಾಗಿದೆ. ಇದು ಹೊಸ ವಿವಾದಕ್ಕೆ ಕಾರಣವಾಗುತ್ತಿದೆ.
ಬಿಜೆಪಿ ಇದನ್ನು ಗಂಭೀರವಾಗಿ ಪರಿಗಣಿಸಿದ್ದು ನಾಳೆ ದಿ.27 ರಂದು ಪೊಲೀಸ್ ಆಯುಕ್ತರನ್ನು ಭೆಟ್ಟಿ ಮಾಡಲು ಬಿಜೆಪಿ ನಿಯೋಗ ನಿರ್ಧರಿಸಿದೆ ಎಂದು ಮಾಜಿ ಶಾಸಕ ಅನಿಲ ಬೆನಕೆ ಹೇಳಿದರು. ಬಿಜೆಪಿ ಇದನ್ನು ರಾಜ್ಯಮಟ್ಟದಲ್ಲಿ ಹೋರಾಟ ಮಾಡುವ ನಿರ್ಧಾರ ಮಾಡಿದೆ ಎಂದು ಅವರು ತಿಳಿಸಿದ್ದಾರೆ.