ಸರ್ಕಾರಿ ಕೆಲಸ ದೇವರ ಕೆಲಸ..!

ಬೆಳಗಾವಿ ಬಗ್ಗೆ ಗಡಿನಾಡ ಬೆಳಗಾವಿಯಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಹೇಗಿದ್ದೀರಾ ಸರ್? ಎಂದು ಕೇಳಲೇ ಬಾರದು. ಏಕೆಂದರೆ ಅವರಿಗೆ ಈಗ ಕೆರೆಸಿಕೊಳ್ಳಲು ಸಹ ಪುರುಸೊತ್ತಿಲ್ಲ. ಅಷ್ಡು ಗಡಿಬಿಡಿ. ಅಕ್ಷರಶಃ ಅವರು ಈ ಸರ್ಕಾರಿ ಕೆಲಸವನ್ನು ದೇವರ ಕೆಲಸ ಎಂದೇ ಭಾವಿಸಿ ಮುನ್ನಡೆಯುತ್ತಿದ್ದಾರೆ. ಮತ್ತೊಂದು ಸಂಗತಿ ಅಂದರೆ, ದೇವರ ಕೆಲಸ ಇದ್ದರೆ ಒಂದರ್ಧ ತಾಸು ರೆಸ್ಟ್ ಮಾಡಿದರೆ ದೇವರು ಸಿಟ್ಡಿಗೇಳಲ್ಲ ಅಂದುಕೊಳ್ಳಬಹುದು. ಆದರೆ ಸರ್ಕಾರಿ ದೇವರು ಮಾತ್ರ ಈಗ ಕೆಲಸಕ್ಕೆ ವಿಶ್ರಾಂತಿಯನ್ನೇ ನೀಡುತ್ತಿಲ್ಲ ಬೆಳಗಾವಿಯಲ್ಲಿ ಇದೇ ಡಿಸೆಂಬರ 4 ರಿಂದ…

Read More

ಸಿಪಿಐ ಬಗ್ಗೆ ‘ಆ ಪತ್ರ’ ಬರೆಯೋರು ಯಾರು?

ಬೆಳಗಾವಿ. ಕಳೆದ ದಿನ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಟಿಳಕವಾಡಿ ಸಿಪಿಐ ಬಗ್ಗೆ ತೆಗೆದುಕೊಂಡ ತೀರ್ಮಾನದ ಬಗ್ಗೆ ಮುಂದಿನ ಪತ್ರ ವ್ಯವಹಾರ ಮಾಡುವರು ಯಾರು? ತೀರ್ಮಾನ ಪ್ರಕಟಿಸಿದ ಮೇಯರ್ ಅವರೇ ವ್ಯಕ್ತಿಗತ ಪತ್ರ ಬರೆಯಬೇಕೊ ಅಥವಾ ಪಾಲಿಕೆಯ ವತಿಯಿಂದ ಕೌನ್ಸಿಲ್ ಠರಾವ್ ಹಚ್ವಿ ಬರೆಯಬೇಕೋ ಎನ್ನುವ ಗೊಂದಲ ಬಹುತೇಕರನ್ನು ಕಾಡುತ್ತಿದೆ ಈ ಪ್ರಶ್ನೆ ಬೆಳಗಾವಿಗರನ್ನು ಅಷ್ಟೇ ಅಲ್ಲ ಖುದ್ದು ಸಭೆಯಲ್ಲಿ ವಿಷಯ ಮಂಡಿಸುದವರಿಗೂ ಕಾಡತೊಡಗಿದೆ. ನಗರಸೇವಕ ಅಭಿಜಿತ್ ಜವಳಕರ ಬಂಧನ ಪ್ರಜರಣದಲ್ಲಿ ಟಿಳಕವಾಡಿ ಸಿಪಿಐ ಯವರ ಬಗ್ಗೆ ಮಾನವ…

Read More

5 ರಂದು ಪಂಚಮಸಾಲಿ ಸಭೆ

ಪಂಚಮಸಾಲಿ ಮೀಸಲಾತಿ ಹೋರಾಟ: ನಮ್ಮ ಹೋರಾಟಕ್ಕೆ ಗೆಲುವು ಸಿಕ್ಕೇ ಸಿಗುತ್ತದೆ – ಲಕ್ಷ್ಮೀ ಹೆಬ್ಬಾಳಕರ್ ವಿಶ್ವಾಸ ಬೆಳಗಾವಿ: ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕುರಿತು ಚರ್ಚಿಸಲು ಡಿಸೆಂಬರ್ 5ರಂದು ಶಾಸಕರ ಸಭೆ ನಡೆಸಬೇಕು ಹಾಗೂ ಈ ಸಭೆಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನೂ ಆಹ್ವಾನಿಸಬೇಕು ಎಂದು ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು ತಿಳಿಸಿದ್ದಾರೆ. ಸಭೆ ನಡೆಸುವ ವಿಷಯವನ್ನು ಶನಿವಾರ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ….

Read More

ಅಂಗನವಾಡಿ‌ ಆಹಾರ ಪೂರೈಕೆ- ದೂರು

ಬೆಳಗಾವಿ. ಬೆಳಗಾವಿ ತಾಲೂಕು ಸೇರಿದಂತೆ ಜಿಲ್ಲೆಯ ಬಹುತೇಕ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುವ ಆಹಾರ ಪದಾರ್ಥಗಳ ಬಗ್ಗೆ ದೂರುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಸಾಂದರ್ಭಿಕ ಚಿತ್ರ ಕಳೆದ ಹಲುವ ದಿನಗಳಿಂದ ಈ ಆಹಾರ ಪದಾರ್ಥಗ ಗುಣಮಟ್ಟದ ಬಗ್ಗೆ ದೂರುಗಳು ಇಲಾಖೆಯ ಗಮನಕ್ಜೆ ಹೋದರೂ ಯಾರೂ ಕ್ರಮ‌ಬಗ್ಗೆ ಗಮನಹರಿಸುತ್ತಿಲ್ಲ ಎಂದು ಹೇಳಲಾಗಿದೆ. ಇಲ್ಲಿ ಗುತ್ತಿಗೆಯಲ್ಲೂ ವಿಭಿನ್ನ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಕೆಲವರು ಅಧಿವೇಶನ ಸಂದರ್ಭದಲ್ಲಿ ಕಳಪೆ ಮಟ್ಟದ ಆಹಾರ ಪೂರೈಕೆ ಸದ್ದು ಮಾಡಿದರೂ ಅಚ್ಚರಿ ಪಡಬೇಕಿಲ್ಲ.

Read More

ಪೊಲೀಸರಿಗೂ ಮಸಿ ಬಿತ್ತು..!

ಫಲಕಗಳಿಗೆ ಬೀಳುವ ‌ಕಪ್ಪು‌ಮಸಿ ಪೊಲೀಸರಿಗೆ ಬಿತ್ತು. ನಾಲ್ಕೈದು ಪೊಲೀಸರ ಬಟ್ಟೆ ಮೇಲೆ ಕಪ್ಪು ಮಸಿ. ಆಂಗ್ಲಭಾಷೆ ಫಲಕಗಳು ಪೀಸ್ ಪೀಸ್.. ಬೆಳಗಾವಿ ಮಹಾಮೇಳಾವ್ ಗೆ ಅನುಮತಿ ಕೊಡಬಾರದು ಎನ್ನುವುದು ಸೇರಿದಂತೆ ಕನ್ನಡ ನಾಮಫಲಕ ವನ್ನೇ ಹಾ ಕಬೇಕು ಎಂದು ಒತ್ತಾಯಿಸಿ ಕರವೇ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿತು. ಕಿತ್ತೂರು ಚನ್ನಮ್ಮ ವೃತ್ತದಲ್ಲಿರುವ ಆಂಗ್ಲಭಾಷೆಯ ಫಲಕವನ್ನು ಕರವೇ ಕಾರ್ಯಕರ್ತರು ಹರಿದು ಹಾಕಿದರು. ಈ ಸಂದರ್ಭದಲ್ಲಿ ಆಂಗ್ಲಭಾಷೆಯ ಫಲಕಗಳಿಗೆ ಮಸಿ ಬಳೆಯಲು ಮುಂದಾದಾಗ ಅದು ಅಲ್ಲಿದ್ದ ಪೊಲೀಸರಿಗೆ ಸಿಡಿಯಿತು

Read More
error: Content is protected !!