ಹಲ್ಲೆಕೋರ ಅರೆಸ್ಟ್ .ನಗರಸೇವಕರ ಪ್ರತಿಭಟನೆ ಅಂತ್ಯ
ಬೆಳಗಾವಿ. ನಗರಸೇವಕ ಅಭಿಜಿತ್ ಜವಳಕರ ಮೇಲೆ ಹಲ್ಲೆ ಮಾಡಿದ ರಮೇಶ ಪಾಟೀಲ ಸೇರಿದಂತೆ ಇಬ್ಬರನ್ಬು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡರು. ಈ ಹಿನ್ನೆಲೆಯಲ್ಲಿ ಠಾಣೆ ಮುಂದೆ ಪ್ರತಿಭಟನೆ ಯನ್ನು ನಗರಸೇವಕರು ಕೈಬಿಟ್ಟರು. ಆರೋಪಿಯನ್ನು ಬಂಧಿಸುವವರೆಗೆ ಪ್ರತಿಭಟನೆಯಿಂದ ಹಿಂದೆ ಸರಿಯಲ್ಲ ಎಂದು ನಗರಸೇವಕರು ಪೊಲೀಸ್ ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದರು. ಟಿಳಕವಾಡಿ ಸಿಪಿಐ ಪೂಜಾರಿ ಸೇರಿದಂತೆ ಎಸಿಪಿ ಖಡೇಬಜಾರ ಅವರು ಭರವಸೆ ನೀಡಿದ್ದರು. ಟಾವರ್ ವಿವಾದಕ್ಕೆ ಸಂಬಂಧಿಸಿದಂತೆ ನಗರಸೇವಕ ಜವಳಕರ ಮೇಲೆ ಸುಮಾರು ಹತ್ತಕ್ಕೂ ಹೆಚ್ಚು ಜನ ಹಲ್ಲೆ ಮಾಡಿದ್ದರು.