Headlines

`ಆ ತಪ್ಪು ಈಗ ಮತ್ತೇ ಮಾಡಬೇಡಿ’

ವಿಜಯೇಂದ್ರಗೆ ಕಾರ್ಯಕರ್ತರ ಮನವಿ
`ಆ ತಪ್ಪು ಈಗ ಮತ್ತೇ ಮಾಡಬೇಡಿ’

ಬೆಳಗಾವಿ. ಗಡಿನಾಡ ಬೆಳಗಾವಿ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದರೆ, ಮತ್ತೊಂದು ಕಡೆಗೆ ಲೋಕ ಸಮರಕ್ಕೆ ಅಖಾಡಾವನ್ನು ಸಜ್ಜುಗೊಳಿಸುವ ಕೆಲಸವನ್ನು ನಡೆಸಿದ್ದಾರೆ,
ಅಧಿವೇಶನಕ್ಕೆ ಆಗಮಿಸಿದ ದಿನದಿಂದ ಪ್ರತಿಯೊಬ್ಬರನ್ನು ಭೆಟ್ಟಿ ಮಾಡುತ್ತಿರುವ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅಖಾಡಾದಲ್ಲಿ ಯಾರು ಕುಸ್ತಿ ಹಿಡಿಯಲು ಸಮರ್ಥರು ಎನ್ನುವುರ ಬಗ್ಗೆ ಚಚರ್ೆ ನಡೆಸಿದ್ದಾರೆ.


ಬೆಳಗಾವಿಯಲ್ಲಿ ಕೂಡ ಇಂದು ಬೆಳಿಗ್ಗೆನೇ ಪಕ್ಷದ ಕಾರ್ಯಕರ್ತರೊಂದಿಗೆ ಕೆಎಲ್ಇ ಗೆಸ್ಟಹೌಸನಲ್ಲಿ ಕೆಲ ಹೊತ್ತು ಗಂಭೀರ ಚಚರ್ೆ ನಡೆಸಿದರು. ಈ ಸಂದರ್ಭದಲ್ಲಿ ಕೆಲವರು ಕಳೆದ ವಿಧಾನಸಭೆ ಚುನಾವಣೆಯಲ್ಲಾದ ತಪ್ಪುಗಳನ್ನು ಈ ಲೋಕಸಭೆ ಚುನಾವಣೆಯಲ್ಲಿ ಮಾಡಬೇಡಿ ಎಂದು ನೇರಾ ನೇರ ಮಾತುಗಳಲ್ಲಿ ಹೇಳಿದರು ಎನ್ನಲಾಗಿದೆ. ಅಷ್ಟೇ ಅಲ್ಲ ಲೋಕಸಭೆ ಚುನಾವಣೆಯಲ್ಲಿ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳುವ ವ್ಯಕ್ತಿಗೆ ಟಿಕೆಟ್ ನೀಡಿ, ಆದರೆ ನೀವು ಮತ್ತೇ ಹಿಂದಿನಂತೆ ಮಾಡಿದರೆ ನಾವು ಸೀಟು ಕಳೆದುಕೊಳ್ಳುವುದು ಗ್ಯಾರಂಟಿ ಎಲ್ಲ ಎಂದರು,


ಕಾರ್ಯಕರ್ತರ ಆಭಿಪ್ರಾಯವನ್ನು ಗಂಭೀರವಾಗಿ ಆಲಿಸಿದ ವಿಜಯೇಂದ್ರ ಅವರು ಪಕ್ಷ ಸಂಘಟನೆ ದೃಷ್ಟಿಯಿಂದ ಏನೇ ಸಲಹೆ ನೀಡಿದರೂ ಅದನ್ನು ಸವಾಲಾಗಿ ಸ್ವೀಕರಿಸುವುದಾಗಿ ತಿಳಿಸಿದರು,
ಈ ಸಂದರ್ಭದಲ್ಲಿ ಇನ್ನೂ ಕೆಲವೊಂದು ಸಂಗತಿಗಳನ್ನು ಹೇಳಲು ಕಾರ್ಯಕರ್ತರು ಹಿಂಜರಿದಾಗ ವಿಜಯೇಂದ್ರ ಅವರು ಅದನ್ನು ಬೇಕಿದ್ದರೆ ಲಿಖತ ರೂಪದಲ್ಲಿ ಬರೆದುಕೊಡುವಂತೆ ಸೂಚಿಸಿದರು,
ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಡೆದ ಮಹಾನಗರ ಪಾಲಿಕೆಯ ಬಿಜೆಪಿ ನಗರಸೇವಕ ಅಭಿಜಿತ್ ಜವಳಕರ ಪ್ರಕರಣದ ಬಗ್ಗೆಯೂ ಕೂಡ ಗಂಭೀರ ಚಚರ್ೆ ನಡೆಯಿತು, ಇಲ್ಲಿ ನಗರಸೇವಕರೊಂದಿಗೆ ಪೊಲೀಸರ ವರ್ತನೆ ಬಗ್ಗೆ ಸಂಸದರು ತುಟಿಪಿಟಕ್ಕೆನ್ನದೇ ಇರುವುದರ ಬಗ್ಗೆ ಅಸಮಾಧಾನರ ಮಾತುಗಳು ಕೇಳಿ ಬಂದವು, ಕೊನೆಗೆ ಇದನ್ನು ಗಂಭೀರವಾಗಿ ಪರಿಗಣಿಸುವುದಾಗಿ ವಿಜಯೇಂದ್ರ ಅವರು ಭರವಸೆ ನೀಡಿದರು ಎಂದು ಗೊತ್ತಾಗಿದೆ, ಅಷ್ಟೇ ಅಲ್ಲ ಇದೇ ಪ್ರಕರಣ ಮುಂದಿಟ್ಟುಕೊಂಡು ಪೊಲೀಸ್ ಅಧಿಕಾರಿಗಳನ್ನು ವಿಚಾರಣೆ ಮಾಡುವುದಾಗಿಯೂ ಹೇಳಿದರು,.

Leave a Reply

Your email address will not be published. Required fields are marked *

error: Content is protected !!