
ಗೃಹ ಮಂತ್ರಿ ಉತ್ತರ ಏನಿರಬಹುದು?
ವಿಧಾನಸಭೆ. ಬೆಳಗಾವಿ.ಮಹಾನಗರ ಪಾಲಿಕೆ ಬಿಜೆಪಿ ನಗರಸೇವಕ ಅಭಿಜಿತ್ ಜವಳಕರ ಬಂಧನ ಪ್ರಕರಣದಲ್ಲಿ ಪೊಲೀಸ್ ಕ್ರಮದ ಬಗ್ಗೆ ಇಂದು ಸದನದಲ್ಲಿ ಗೃಹಸಚಿವರು ಉತ್ತರ ನೀಡಲಿದ್ದಾರೆ ಕಳೆದ ದಿನ ಸದನದಲ್ಲಿಯೇ ಬಿಜೆಪಿ ಶಾಸಕ ಅಭಯ ಪಾಟೀಲರು ಟಿಳಕವಾಡಿ ಸಿಪಿಐ ಪರಶುರಾಮ ಪೂಜಾರಿ ಹೆಸರು ಉಲ್ಲೇಖಿಸಿ ವಿವರವಾಗಿ ಮಾತನಾಡಿದ್ದರು. ಅಷ್ಟೇ ಅಲ್ಲ ಪೊಲೀಸರ ಲೋಪವನ್ನು ದಾಖಲೆ ಸಮೇತ ಪ್ರಸ್ತಾಪಮಾಡಿ ಸಿಪಿಐ ಸೇರಿದಂತೆ ಇನ್ನೂ ಇಬ್ಬರ ಅಮಾನತ್ ಗೆ ಆಗ್ರಹಿಸಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಆಸೀಫ್ ಶೇಠರು ಪೊಲೀಸರ ಕ್ರಮವನ್ನು ಸಮರ್ಥಿಸಿಕೊಳ್ಖುವ…