Headlines

ಗೃಹ ಮಂತ್ರಿ ಉತ್ತರ ಏನಿರಬಹುದು?

ವಿಧಾನಸಭೆ. ಬೆಳಗಾವಿ.ಮಹಾನಗರ ಪಾಲಿಕೆ ಬಿಜೆಪಿ ನಗರಸೇವಕ ಅಭಿಜಿತ್ ಜವಳಕರ ಬಂಧನ ಪ್ರಕರಣದಲ್ಲಿ ಪೊಲೀಸ್ ಕ್ರಮದ ಬಗ್ಗೆ ಇಂದು ಸದನದಲ್ಲಿ ಗೃಹಸಚಿವರು ಉತ್ತರ ನೀಡಲಿದ್ದಾರೆ

ಕಳೆದ ದಿನ ಸದನದಲ್ಲಿಯೇ ಬಿಜೆಪಿ ಶಾಸಕ ಅಭಯ ಪಾಟೀಲರು ಟಿಳಕವಾಡಿ ಸಿಪಿಐ ಪರಶುರಾಮ ಪೂಜಾರಿ ಹೆಸರು ಉಲ್ಲೇಖಿಸಿ ವಿವರವಾಗಿ ಮಾತನಾಡಿದ್ದರು. ಅಷ್ಟೇ ಅಲ್ಲ ಪೊಲೀಸರ ಲೋಪವನ್ನು ದಾಖಲೆ ಸಮೇತ ಪ್ರಸ್ತಾಪ‌ಮಾಡಿ ಸಿಪಿಐ ಸೇರಿದಂತೆ ಇನ್ನೂ ಇಬ್ಬರ ಅಮಾನತ್ ಗೆ ಆಗ್ರಹಿಸಿದ್ದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಆಸೀಫ್ ಶೇಠರು ಪೊಲೀಸರ ಕ್ರಮವನ್ನು ಸಮರ್ಥಿಸಿಕೊಳ್ಖುವ ಕೆಲಸ ಮಾಡಿದರು.‌ಆದರೆ ಅದಕ್ಕೆ ಸಭಾಧ್ಯಕ್ಷರು ಅವಕಾಶ ನೀಡಲಿಲ್ಲ. ಹೀಗಾಗಿ ಈ ಪ್ರಕರಣದ ಬಗ್ಗೆ ಗೃಹ ಸಚಿವರಿಂದ ಉತ್ತರ ಕೊಡಿಸುವುದಾಗಿ ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದ್ದರು.

ಹೀಗಾಗಿ ಗೃಹ ಸಚಿವರು ಯಾವ ಉತ್ತರ ಕೊಡುತ್ತಾರೆ ಎನ್ನುವ ಕುತೂಹಲ ಎಲ್ಲರನ್ನು ಕಾಡುತ್ತಿದೆ.

ಅಭಯ ಆರೋಪ ಏನು?

ಇಲ್ಲಿ ಶಾಸಕ ಅಭಯ ಪಾಟೀಲರು ನಗರಸೇವಕ ಜವಳಕರ ಬಂಧನಕ್ಕೆ ಆಕ್ಷೇಪ ವ್ಯಕ್ತಪಡಿಸಿಲ್ಲ. ಆದರೆ ಇಲ್ಲಿ ಪೊಲೀಸರು ಅನುಸರಿಸಿದ ರೀತಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಸಿಪಿಐ ಮತ್ತು ಇಬ್ಬರು ಪೊಲೀಸರು ಜವಳಕರಗೆ ಹಚ್ಚಿದ್ದ ಸಲಾಯಿನ್ ಒತ್ತಾಯಪೂರ್ವಕವಾಗಿ ಬಂಧಿಸಿದ್ದರು.‌ಅಷ್ಟೇ ಅಲ್ಲ ಡಿಸ್ಚಾರ್ಜ ಸಮರಿಯನ್ನು ಪೊಲೀಸರೇ ತೆಗೆದುಕೊಂಡು ಹೋಗಿದ್ದರು. ಮತ್ತೊಂದು ಕಡೆಗೆ ಈ ಬಗ್ಗೆ ಪೊಲೀಸರ ಕ್ರಮದ ಬಗ್ಗೆ ಆಸ್ಪತ್ರೆಯವರು ನೇರವಾಗಿ ಪೊಲೀಸ್ ಆಯುಕ್ತರಿಗೆ ಪತ್ರವನ್ನು ಬರೆದಿದ್ದರು. ಆದರೆ ಅಲ್ಲಿ ಕೂಡ ಆಸ್ಪತ್ರೆಯವರನ್ನು ಹೆದರಿಸುವ ಕೆಲಸ ಆಯಿತು ಎನ್ನುವುದು ಶಾಸಕ ಅಭಯ ಪಾಟೀಲರ ಆರೋಪವಾಗಿತ್ತು.

ಆದರೆ ಪೊಲೀಸ್ ಆಯುಕ್ತರು ತಮ್ಮ ಅಧಿಕಾರಿಗಳ ಕ್ರಮವನ್ನು ಸಮರ್ಥಿಸಿಕೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!