ಕಿತ್ತೂರು ಬಳಿ ಕುಲವಳ್ಳಿ ರೈತರ ಪ್ರತಿಭಟನೆ ಬಗ್ಗೆ ಈಗಾಗಲೇ ಎಸ್ಪಿಯವರು ಸ್ಪಷ್ಟನೆ ನೀಡಿದ್ದಾರೆ. ಇಲ್ಕಿ ಸರ್ಕಾರವೇ ಇರುವುದರಿಂದ ಹೆದ್ದಾರಿ ತಡೆ ಮಾಡಿದರೆ ಗಣ್ಯರ ಸಂಚಾರಕ್ಕೆ ಅಡ್ಡಿಯಾಗಬಹುದು ಎನ್ನುವ ಕಾರಣಕ್ಜೆ ಅವರು ಸ್ವಲ್ಪ ಮಟ್ಟಿಗೆ ಆಕ್ರೋಶ ಭರಿತರಾಗಿರಬಹುದು ಅನಿಸುತ್ತದೆ.ಆದರೆ ಉಳಿದವರ ಜೊತೆ ಮಾತನಾಡಿದಂತೆ ರೈತರು ಮತ್ತು ಮಕ್ಕಳ ಜೊತೆ ನಡೆದುಕೊಂಡ ಖಾಕಿ ದರ್ಪ ಕೋಲಾಹಲಕ್ಕೆ ಕಾರಣವಾಗಬಹುದು ಎನ್ನಲಾಗುತ್ತದೆ.
ಬೆಳಗಾವಿ.
ಯಾಕೊ ಏನೊ. ಈ ಬಾರಿ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಗಿಂತ ಪೊಲೀಸ್ ಬಗ್ಗೆನೇ ಗಂಭೀರ ಚರ್ಚೆ ನಡೆದಿದೆ.
ಅಧಿವೇಶನ ಆರಂಭದ ಮೊದಲವಾರ ಹೇಳಿಕೊಳ್ಖುವಙತಹ ಚರ್ಚೆಗಳು ನಡೆಯಲಿಲ್ಕ. ಬದಲಾಗಿ ಆರೋಪ, ಪ್ರತ್ಯಾರೋಪದಲ್ಲಿಯೇ ಸಮಯ ಕಖೆದುಹೋಯಿತು.
ಇನ್ನುಳಿದ ದಿನಗಳಲ್ಲಿ ಉತ್ತರ ಕರ್ನಾಟಕ ಬಗ್ಗೆ ಚರ್ಚೆ ಅಂದಿದ್ದಾರೆ. ಏನಾಗುತ್ತೊ ನೋಡಬೇಕು. ಇಲ್ಲಿ ಎಲ್ಲವೂ ಒಂದು ಹಂತಕ್ಕೆ ಸರಿ ಹೋಯಿತು ಎನ್ನುವಷ್ಡರಲ್ಲಿ ಜಿಲ್ಲಾ ಪೊಲೀಸ್ ವರಿಷ್ಠರು ರೈತರಿಗೆ ಸೆಡ್ಡು ಹೊಡೆದಿದ್ದು ಮತ್ತು ರೈತರ ಮಕ್ಕಳೊಂದಿಗೆ ಪೊಲೀಸರು ನಡೆದುಕೊಂಡ ರೀತಿ ಸೋಮವಾರ ಸದನ ಕಾವೇರುವಂತೆ ಮಾಡುವ ಸಾಧ್ಯತೆಗಳು ಹಚ್ಚಾಗಿವೆ.
ಮಕ್ಕಳ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕ್ರಮ
ಇಲ್ಲಿ ಎಸ್ಪಿಯವರು ಮಕ್ಕಳ ಮೇಲೆ ಯಾರೇ ನಮ್ಮವರು ಹಲ್ಲೆ ಮಾಡಿದ್ದರೆ ಅದನ್ನು ಸಮರ್ಥಿಸಿಕೊಳ್ಳಲ್ಲ. ಅದು ತಪ್ಪು. ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಸ್ಪಿ ಭೀಮಾಶಂಕರ ಗುಳೆದ ಸ್ಪಷ್ಟಪಡಿಸಿದ್ದಾರೆ.
ಆರಂಭದಲ್ಲಿ ಪ್ರಶ್ನೆ ಮಾಡಿದ ಸುದ್ದಿಗಾರರ ವಿರುದ್ಧವೇ ರೇಗಾಡಿದ ಎಸ್ಪಿ ನಂತರ ಕೆಲ ತಪ್ಪುಗಳನ್ನು ಒಪ್ಪಿಕೊಂಡರು.ಆದರೆ ಅದಕ್ಕ ದಾಖಲೆ ಕೊಡಿ ಎಂದು ಪತ್ರಕರ್ತರನ್ನೇ ಕೇಳಿದರು.
ಸಾಮಾಜಿಕ ಜಸಲತಾಣದಲ್ಲಿ ವೈರಲ್ ಆದ ವಿಡಿಯೋವನ್ನು ಗಮನಿಸಿದರೆ ಎಸ್ಪಿಯವರ ಆವಾಜಗೆ ರೈತರು ಅಷ್ಟೇ ಅಲ್ಲ ಮಕ್ಕಳೂ ಕೂಡ ಹೌಹಾರಿದ್ದರು. ಆರಂಭದಲ್ಲಿ ರಸ್ತೆ ಬದಿಗೆ ಕುಳಿತಿದ್ದ ಶಾಲಾ ಮಕ್ಕಳಿಗೆ ಏರಿದ ಧ್ವನಿಯಲ್ಲಿ ಆವಾಜ್ ಹಾಕುತ್ತಾರೆ. ಅದಕ್ಕೆ ಮಕ್ಕಳು ಹೆದರುತ್ತಾರೆ. ನಂತರ ರಸ್ತೆ ಕೆಳಗೆ ನಿಂತಿದ್ದ ರೈತರನ್ನು ಕಂಡ ಎಸ್ಪಿ ಹದ್ದಾರಿ ಪಕ್ಕಕ್ಕೆ ನಿಂತು ದಮ್ ಇದ್ದರೆ ಬನ್ನಿ ಈಗ ಎಂದು ಶೆಡ್ಡು ಹೊಡೆಯುತ್ತಾರೆ.
ಇಲ್ಲಿ ಕೂಡ ಎಸ್ಪಿಯವರ ರೌದ್ರಾವತಾರ ಕಂಡು ಹಸಿತು ಟವೆಲ್ ಹೊತ್ತ ರೈತರು ಅಕ್ಷರಶಃ ಗಾಬರಿಯಾಗಿ ನಿಂತಿದ್ದರು. ಮತ್ತೊಂದು ಕಡೆಗೆ ಎಸ್ಪಿಯವರ ಈ ರೌದ್ರಾವತಾರ ಕಂಡ ಉಳಿದ ಪೊಲೀಸರು ಕೈಯ್ಯಲ್ಲಿ ಲಾಠಿ ಹಿಡಿದುಕೊಂಡು ರೈತರತ್ತ ನುಗ್ಗಿ ಅವರನ್ನು ಅಲ್ಲಿಂದ ಓಡಿಸಿದರು.
ತಾಳ್ಮೆ ಬೇಕಿತ್ತು..!
ಬೆಳಗಾವಿಯಲ್ಲಿ ಇಡೀ ಸರ್ಕಾರವೇ ತಳವೂರಿದೆ. ರೈತರ ಸಮಸ್ಯೆ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತಿವೆ. ಒಂದು ರೀತಿಯಲ್ಲಿ ನೋಡಿದರೆ ರಸ್ತೆ ಮೇಲೆ ಬಂದ ಮಕ್ಕಳನ್ನು ಬದಿಗೆ ಸರಿಸಿದ್ದು ಸರಿ. ಆದರೆ ಅವರೊಂದಿಗೆ ನಡೆದುಕೊಂಡ ರೀತಿ ಸರಿಯಿಲ್ಲ ಎನ್ನುವ ವಾದ ಕೇಳಿ ಬರುತ್ತಿದೆ