Headlines

ಅನುದಾನ ಕೇಳದ ಪಾಲಿಕೆ. ಇಲ್ಲಿ ‘ಆಡಳಿತ’ ಹರೋ ಹರ..!

ಬೆಳಗಾವಿ ಪಾಲಿಕೆಗೆ ಅನುದಾನ ಕೇಳದ ಆಡಳಿತ ಮತ್ತು ವಿರೋಧ ಪಕ್ಷ. ಮೇಯರ್, ಆಡಳಿತ, ವಿರೋಧ ಪಕ್ಷದ ನಾಯಕರದಿವ್ಯ ಮೌನ, ಅಭಿವೃದ್ಧಿಗಾಗಿ ನಡೆಯದ ಚರ್ಚೆ. ಆಡಳಿತದವರ ತಪ್ಪು ಸರಿ ಮಾಡುವುದರಲ್ಲಿಯೇ ಅಭಯ ಪಾಟೀಲ ಕಸರತ್ತು. ಆಡಳಿತ ಗುಂಪಿನಲ್ಲಿ ನಡೆಯದ ಹೊಙದಾಣಿಕೆ. ಅನುದಾನ ಕೇಳಬೇಡಿ ಅಂತಾ ಸರ್ಕಾರ

ಬೆಳಗಾವಿ. ಸೂಪರ್ ಸೀಡ್ ತೂಗುಗತ್ತಿಯಿಂದ ಪಾರಾದ ಬೆಳಗಾವಿ ಮಹಾನಗರ ಪಾಲಿಕೆಯ ಆಡಳಿತ ಸರಿದಾರಿಗೆ ಬರುವ ಸ್ಥಿತಿಯಲ್ಲಿ ಇಲ್ಲ.

ಈ ಹಿಂದಿನ‌ನಗರ ಸೇವಕರು ವಾರ್ಡ ಅಭಿವೃದ್ಧಿ ಬಗ್ಗೆ ಚಿಂತನೆನೇ ಮಾಡುತ್ತಿರಲಿಲ್ಲ. ಆದರೆ ಹೊಸದಾಗಿ ಬಂದ ನಗರಸೇವಕರಿಗೆ ಕೆಲಸ ಮಾಡುವ ಉತ್ಸುಕತೆ ಇದ್ದರೂ ಅದಕ್ಕೆ ಅನುದಾನ ಕೊರತೆ ಎನ್ನುವ ಪೆಡಂಭೂತ ಕಾಡುತ್ತಿದೆ.

ಹೀಗಾಗಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸಧ್ಯಕ್ಕೆ ಯಾವುದೂ ಸರಿ ಹೋಗುವ ಲಕ್ಷಣಗಳು ಕಾಣಸಿಗುತ್ತಿಲ್ಲ.

ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಅನುದಾನ ನೀಡುತ್ತಿಲ್ಲ. ಅದನ್ನು ಯಾಕೆ ಕೊಡುತ್ತಿಲ್ಲ ಎಂದು ಪ್ರಶ್ನೆ ಮಾಡುವ ವ್ಯವಧಾನ ಆಡಳಿತ ಮತ್ತು ವಿರೋಧ ಪಕ್ಷದ ನಗರಸೇವಕರಿಗೆ ಇಲ್ಲ.

ಇಲ್ಲಿ ಆಡಳಿತ ಪಕ್ಷದ ಕೆಲ ಹಿರಿಯರು ಎನಿಸಿಕೊಂಡವರು ಮಾಡುತ್ತಿರುವ ಯಡವಟ್ಟುಗಳನ್ನು ಬಗೆಹರಿಸುವಲ್ಲಿಯೇ ಶಾಸಕ ಅಭಯ ಪಾಟೀಲರು ತಮ್ಶ್ರ ಶ್ರಮ ವ್ಯರ್ಥ ಮಾಡಬೇಕಾದ ಅನಿವಾರ್ಯ ಸ್ಥಿತಿ ಬಂದಿದೆ.

ಇಲ್ಲಿ ಎಲ್ಲ ನಗರಸೇವಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ನಾಯಕರ ಕೊರತೆ ಬಿಜೆಪಿ ನಗರಸೇವಕರಲ್ಲಿ ಇದೆ.. ಶಾಸಕರ ಮಾತನ್ನು ಮೀರಿ ಮತ್ತು ಅವರ ದಿಕ್ಕನ್ನೇ ತಪ್ಪಿಸುವ ಕೆಲಸವನ್ಬು ಕೆಲವರು ನಡೆಸಿದ್ದು ಸ್ಷಷ್ಟವಾಗಿ ಕಂಡು ಬರುತ್ತದೆ.

ಇನ್ನೂ ಅಚ್ಚರಿ ಮತ್ತು ಆಘಾತಕಾರಿ ಸಂಗತಿ ಎಂದರೆ, ಆಡಳಿತ ಪಕ್ಷದಲ್ಲಿ ಶ್ಯಾಣ್ಯಾ ಎನಿಸಿಕೊಂಡ ಕೆಲವರು ವಿರೋಧಿಗಳೊಂದಿಗೆ ಕೈ ಜೋಡಿಸಿದ್ದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಇದು ಒಂದು ರೀತಿಯ ಗೊಂದಲಕ್ಕೆ ಕಾರಣವಾಗಿದೆ. ಆಡಳಿತದಲ್ಲಿ ನಡೆಯುತ್ತಿರುವ ಗೌಪ್ಯ ಸಭೆಗಳ ಮಾಹಿತಿ ಕೂಡ ಕ್ಷಣಾರ್ಧದಲ್ಲಿ ಲೈವ್ ಕೊಡುವ ಕೆಲಸ ನಡೆಯುತ್ತಿದೆ ಎನ್ನುವ ಮಾತಿದೆ.

ನೆನಪಿಟ್ಟುಕೊಳ್ಳುವ ಕೆಲಸ ಆಗ್ತಿಲ್ಲ

ಬಿಜೆಪಿ ಪ್ರಥಮ ಮೇಯರ್ ಅವಧಿ ಇನ್ನು ಕೇವಲ ನಾಲ್ಕು ತಿಂಗಳಿಗೆ ಮುಗಿಯುವ ಹಂತಕ್ಜೆ ಬಂದಿದೆ. ಆದರೆ ಇಲ್ಲಿಯವರೆಗೆ ಬಜೆಟ್ ಸಭೆ ಆಗಿಲ್ಲ. ಅದರ ಬಗ್ಗೆ ಚರ್ಚೆಗಳೂ ಆಗುತ್ತಿಲ್ಲ. ಬಿಜೆಪಿ ಅಧಿಕಾರದಲ್ಲಿ ಬೆಳಗಾವಿಗರು ನೆನಪಿಸಿಕೊಳ್ಖುವಂತಹ ಒಂದೇ ಒಂದು ಕೆಲಸ ಕೂಡ ಆಗಿಲ್ಲ. ಈ ಅಸಮಾಧಾನ ಬಹುತೇಕರಲ್ಲಿದೆ. . ಆಡಳಿತದವರೇ ಪ್ರತಿಯೊಂದಕ್ಕೂ ಅಡ್ಡಿ ಮಾಡುತ್ತಿರುವುದರಿಂದ ಯಾವೊಂದು ಕೆಲಸಕ್ಕೆ ನಾಳೆ ಬಾ ಎನ್ನುವ ಉತ್ತರ ಬರುತ್ತಿದೆ.

ಅನುದಾನ ಕೇಳಬಾರದೇ?

ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಆಗಲಿ ಅಥವಾ ಆಡಳಿತ ಪಕ್ಷದ ನಾಯಕರಾಗಲಿ ಇನ್ನಷ್ಟು ಅನುದಾನ ಕೊಡಿ ಎಂದು ಮುಖ್ಯಮಂತ್ರಿಗಳನ್ನೊ ಅಥವಾ ನಗರಾಭಿವೃದ್ಧಿ ಸಚಿವರನ್ನು ಏಕೆ ಕೇಳುತ್ತಿಲ್ಲ?

ಇಂತಹುದೊಂದು ಪ್ರಶ್ನೆ ಬೆಳಗಾವಿ ಜನರನ್ನು ಕಾಡುತ್ತಿದೆ.

ಅಧಿವೇಶನ ಹಿನ್ನೆಲೆಯಲ್ಲಿ ಇಡೀ ಸರ್ಕಾರ ಬೆಳಗಾವಿಗೆ ಬಂದಿದೆ. ಮುಖ್ಯಮಂತ್ರಿಗಳು ,ನಗರಾಭಿವೃದ್ಧಿ ಸಚಿವರು, ಹಿರಿಯ ಅಧಿಕಾರಿಗಳು ಇಲ್ಲೇ ಇದ್ದಾರೆ.

ಅನುದಾನ ಕೊಡಿ ಎಂದು ಒಂದು ಮನವಿ ಪತ್ರ ಕೊಡಲು ಪಾಲಿಕೆಯವರಿಗೆ ಇದುವರೆಗೂ ಆಗಿಲ್ಲ ಎನ್ನುವುದು ದುರ್ದೈವದ ಸಂಗತಿ

ಇಲ್ಲಿ ಆಡಳಿತ ಮೇಯರ್ ಮತ್ತು ಆಡಳಿತ ಪಕ್ಷದ ನಾಯಕ ಎನಿಸಿಕೊಂಡವರು ಇದರ ಬಗ್ಗೆ ಚಿಂತನೆ ಮಾಡಬೇಕಿತ್ತು ಎನ್ನುವ ಮಾತುಗಳು ಕೇಳಿ ಬರುತ್ತಿವೆ.. ಆದರೆ ಅವರು ಅದರ ಬಗ್ಗೆ ತಲೆನೇ ಕೆಡಿಸಿಕೊಂಡಂತಿಲ್ಲ. ಮೇಲಾಗಿ ಎಲ್ಲಕ್ಕೂ ಶಾಸಕರೇ ಹೇಳಬೇಕು ಎನ್ನುವ ಕುಂಟುನೆಪ ಹೇಳುತ್ತ ಕುಳಿತಿದ್ದಾರೆ ಎನ್ನುವ ಮಾತಿದೆ. ಇಲ್ಲಿ ಶಾಸಕ ಅಭಯ ಪಾಟೀಲರು ನಗರಾಭಿವೃದ್ಧಿ ಸಚಿವರನ್ನು ಭೆಟ್ಟಿ ಮಾಡುವುದು ಎಲ್ಲವನ್ನು ಮಾಡುತ್ತಿದ್ದಾರೆ. ಆದರೆ ಮೇಯರ್ ಮತ್ತು‌ ಆಡಳಿತ ಪಕ್ಷದವರು ಎಲ್ಲ ನಗರಸೇವಕರನ್ನು ವಿಶ್ವಾಸಕ್ಜೆ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕಿತ್ತು. ಅದೂ ಕೂಡ ಆಗುತ್ತಿಲ್ಲ.

ಗಮನಿಸಬೇಕಾದ ಸಂಗತಿ ಎಂದರೆ, ಹಿರಿಯರು ಎನಿಸಿಕೊಂಡ ಕೆಲವರು ಮಾಡಿದ ಯಡವಟ್ಟುಗಳನ್ನು ಬಗೆಹರಿಸುವುದರಲ್ಲಿಯೇ ಶಾಸಕರು ತಮ್ಮ ಸಮಯ ವ್ಯರ್ಥ ಮಾಡಬೇಕಾದ ಸ್ಥಿತಿ ಬಂದಿದೆ.

ಇನ್ನು ಕಾಂಗ್ರೆಸ್ ಪಕ್ಷದ ಶಾಸಕರು ನಗರಾಭಿವೃದ್ಧಿ ಸಚಿವರನ್ನು ಭೆಟ್ಟಿ ಮಾಡಿ ಅನುದಾನ ಕೇಳುವ ಮನಸ್ಸು ಮಾಡುತ್ತಿಲ್ಲ. ಇದೂ ಕೂಡ ಚರ್ಚೆಯ ವಸ್ತುವಾಗಿದೆ.

Leave a Reply

Your email address will not be published. Required fields are marked *

error: Content is protected !!