Headlines

ಬಿಜೆಪಿ ಅಧಿಕಾರ ನಾಮಕಾವಾಸ್ತೆ..!

ಬಿಜೆಪಿ ನಗರಸೇವಕರ ವಾರ್ಡಗಳಿಗೆ ಅನುದಾನ ಇಲ್ಲ.

ಅನುದಾನ ಕೊಡಿ ಎಂದು ಕೇಳದ ಬಿಜೆಪಿಗರು. ಅನುದಾನ ಕೊಡದ ಕಾಂಗ್ರೆಸ್ಸಿಗರು.

ಬಿಜೆಪಿ ಸರ್ಕಾರದ ಅವಧಿಯ ಕಾನಗಾರಿಗಳು ಸ್ಥಗಿತ

ಮೇಯರ್ ಅವಧಿ ಮುಗಿಯುತ್ತ ಬಂದರೂ‌ ಸರಿಯಾಗಿ ನಡೆಯದ ಅಭಿವೃದ್ಧಿ ಚರ್ಚೆ

ಅಭಿವೃದ್ಧಿಗಿಂತ ವಿವಾದಗಳದ್ದೇ ಸದ್ದು

ಬೆಳಗಾವಿ.

ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಆಡಳಿತಾರೂಢ ಬಿಜೆಪಿ ನಗರಸೇವಕರು ಅಂದರೆ ಓಂದು ರೀತಿಯಲ್ಲಿ ಮಲತಾಯಿ ಮಕ್ಕಳು ಆಗಿದ್ದಾರೆ.

ಬಿಜೆಪಿ‌ ನಗರ ಸೇವಕರಿರುವ ವಾರ್ಡಗಳಲ್ಲಿ ಸರ್ಕಾರದಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬರುತ್ತಿಲ್ಲ. ಬಿಜೆಪಿಯವರೂ ಕೂಡ ತಮ್ಮ ವಾರ್ಡಗಳಿಗೆ ಅನುದಾನ ಕೊಡಿ ಎಂದು ಕಾಂಗ್ರೆಸ್ ಸರ್ಕಾರವನ್ನು ಕೇಳುತ್ತಿಲ್ಲ.
ಪಕ್ಷ ಬೇಧ ಮರೆತು ಸಮಗ್ರ ಅಭಿವೃದ್ದಿ ಬಗ್ಗೆ ಗಮನಹರಿಸಬೇಕಾಗಿದ್ದ ರಾಜ್ಯ ಸರ್ಕಾರ
ಬೆಳಗಾವಿ ಮಹಾನಗರ ಪಾಲಿಕೆ ಬಗ್ಗೆ ದ್ವಂದ್ವ ನಿಲುವು ತಾಳುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ‌
ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬೆಳಗಾವಿ ಪಾಲಿಕೆ ವಿಷಯದಲ್ಲಿ ಒಂದು ಕಣ್ಣಿಗೆ ಬೆಣ್ಣೆ
ಮತ್ತೊಂದು ಕಣ್ಣಿಗೆ ಸುಣ್ಣ ಎನ್ನುವ ತರಹ ವರ್ತಿಸುತ್ತಿದೆ.
ಬಿಜೆಪಿ ಹಿಡಿತದಲ್ಲಿರುವ ಪಾಲಿಕೆಗೆ ಯಾವುದೇ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡುತ್ತಿಲ್ಲ ಎನ್ನುವ ಮಾತಿದೆ. ಇದು ಎಲ್ಲ ನಗರಸೇವಕರಿಗೆ ಅನ್ವಯವಾಗುತ್ತಿದ್ದರೆ ಸರ್ಕಾರದ ನಿರ್ಧಾರ ವನ್ನು ಯಾರೂ ಪ್ರಶ್ನೆ ಮಾಡುವ ಪ್ರಮೇಯವೇ ಬರುತ್ತಿರಲಿಲ್ಲ. ಆದರೆ ಇಲ್ಲಿ ಕಾಂಗ್ರೆಸ್ ಮತ್ತು ಎಂಇಎಸ್ ನಗರ ಸೇವಕರಿರುವ ವಾರ್ಡಗಳಿಗೆ ಮಾತ್ರ ಸರ್ಕಾರ ತಲಾ 25 ಲಕ್ಷ ಅನುದಾನ ನೀಡುತ್ತಿರುವುದು ಬಹುತೇಕರ ಅಸಮಾಧಾನಕ್ಕೆ ಕಾರಣವಾಗುತ್ತಿದೆ.
ಸಧ್ಯ ಬಂದಿರುವ ಮಾಹಿತಿ ಪ್ರಕಾರ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಶೇಠ ಅವರು
ಬೆಳಗಾವಿ ನಗರದ ಒಳಚರಂಡಿ ಸಲವಾಗಿ 1100 ಕೋಟಿ ರೂ ಅನುದಾನವನ್ನು ಕೇಳಿದ್ದಾರೆ.
ಅದನ್ನು ಎಂಇಎಸ್ ಮತ್ತು ಕಾಂಗ್ರೆಸ್ ನಗರಸೇವಕರ ವಾರ್ಡಗಳಿಗೆ ಮಾತ್ರ ಹಂಚಿಕೆ ಮಾಡುವ ಬಗ್ಗೆ ತೀರ್ಮಾನ ಮಾಡಿದ್ದಾರೆಂದು ಗೊತ್ತಾಗಿದೆ.


ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭಗೊಂಡಿದ್ದ ಕಾಮಗಾರಿಗಳು ಈಗ ಅರ್ಧಕ್ಕೆ ನಿಂತಿವೆ. ಈಗಾಗಲೇ ಪಾಲಿಕೆಯ ವಿರೋಧ ಪಕ್ಷದವರ ವಾರ್ಡುಗಳ ಅಭಿವೃದ್ಧಿ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ಆಸೀಫ್ ಶೇಠ ಅವರು ಚರ್ಚೆ ನಡೆಸಿದ್ದಾರೆ,

ಆದರೆ ಈ ಅಭಿವೃದ್ಧಿ ತಾರತಮ್ಯವನ್ನು ಸರಿಯಾದ ರೀತಿಯಲ್ಲಿ ಪ್ರಶ್ನೆ ಮಾಡುವ ಗೋಜಿಗೆ ಆಡಳಿತ ಪಕ್ಷದ ನಾಯಕರು ಮುಂದಾಗದೇ ಇರುವುದು ಅಚ್ಚರಿಗೆ ಕಾರಣವಾಗಿದೆ.
ಇಲ್ಲಿ ಎಲ್ಲವನ್ನು ಬಿಜೆಪಿ ಶಾಸಕ ಅಭಯ ಪಾಟೀಲರೇ ಬಂದು ಕೇಳಬೇಕಾದ ಪರಿಸ್ಥಿತಿ ಇದೆ

ಏಕೆಂದರೆ ಬಿಜೆಪಿ ನಗರಸೇವಕರಲ್ಲಿ ತಾಳಮೇಳವಿಲ್ಲ ಎನ್ನವುದು ಜಗಜ್ಜಾಹೀರ, ಅದನ್ನು ಸರಿ ಮಾಡುವುದರಲ್ಲಿಯೇ ಶಾಸಕರು ತಮ್ಮ ಸಮಯವನ್ನು ವ್ಯರ್ಥ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಇಲ್ಲಿ ಮೇಲುಸ್ತುವಾರಿ ಸಮಿತಿಯಲ್ಲಿಯೇ ಕೆಲವರು ಅನಗತ್ಯ ವಿವಾದಗಳನ್ನು ಮೈಮೇಲೆ ಎಳೆದು ಕೊಳ್ಳುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ

ಸ್ಮಶಾನ ಅಭಿವೃದ್ಧಿ.


ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಬೆಳಗಾವಿ ನಗರದ ಎಲ್ಲ ಸ್ಮಶಾನಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವ ಕೆಲಸವನ್ನು
ಕೈಗೆತ್ತಿಕೊಂಡಿದ್ದಾರೆಂದು ಗೊತ್ತಾಗಿದೆ,
ಆದರೆ ತಮ್ಮದೇ ಲೋಕೋಪಯೋಗಿ ಇಲಾಖೆಯ ಮೂಲಕ ಕಾಂಗ್ರೆಸ್ ಮತ್ತು ಎಂಇಎಸ್ ನಗರಸೇವಕರಿಗೆ 25 ಲಕ್ಷ ರೂ ಅನುದಾನ ನೀಡಲಿದ್ದಾರೆಂದು ಹೇಳಲಾಗಿದೆ
.

ಇವರೇಕೆ ಚರ್ಚೆ ಮಾಡಿಲ್ಲ?


ಗಮನಿಸಬೇಕಾದ ಸಂಗತಿ ಎಂದರೆ, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇದುವರೆಗೂ ಗಂಭೀರವಾಗಿ ಅಭಿವೃದ್ಧಿ ಬಗ್ಗೆ ಚರ್ಚೆ ನೇ ಆಗಿಲ್ಲ. ಆಡಳಿತ ಪಕ್ಷ ಬಿಜೆಪಿಯವರೂ ಈ ನಿಟ್ಟಿನಲ್ಲಿ ಗಮನಹರಿಸದೇ ಇರುವುದು ಸಹ ಚರ್ಚೆಗೆ ಕಾರಣವಾಗಿದೆ.
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕೆಲವೊಂದು ವಿವಾದಗಳು ಮುನ್ನೆಲೆಗೆ ಬಂದವು, ಅದನ್ನು ತಣ್ಣಗೆ ಮಾಡಲು ಶಾಸಕರು ಹರಸಾಹಸ ಮಾಡಬೇಕಾದ ಪರಿಸ್ಥಿತಿ ಬಂದಿತು

ತಪ್ಪಿದ ಸೂಪರ್ ಸೀಡ್..


ಇಲ್ಲಿ ಆಡ:ಳಿತ ಬಿಜೆಪಿಯಲ್ಲಿನ ಲೋಪಗಳನ್ನು ಮುಂದಿಟ್ಟುಕೊಂಡು ಪಾಲಿಕೆಯನ್ನು ಸೂಪರ್
ಸೀಡ್ ಮಾಡುವ ದೊಡ್ಡ ಮಟ್ಟದ ಪ್ರಯತ್ನ ನಡೆದಿತ್ತು, ಅದಕ್ಕೆ ಪ್ರತಿಯಾಗಿ ಶಾಸಕ ಅಭಯ ಪಾಟೀಲರು ತಕ್ಕ ಎದಿರೇಟು ಕೊಟ್ಟ ನಂತರ ಸೂಪರ್ ಸೀಡ್ ತಪ್ಪಿತು.

Leave a Reply

Your email address will not be published. Required fields are marked *

error: Content is protected !!