Headlines

ಮೇಯರ್ ವಿರುದ್ಧವೇ ಮಸಲತ್ತು ನಡೆಸಿದ್ದು ಯಾರು?

ಎರಡು ದಿನ ಮುಂಚಿತವಾಗಿ ಮೇಯರ್ ವಿರುದ್ಧ ಸ್ಕೆಚ್ ಹಾಕಲಾಗಿತ್ತಾ? ಮೇಯರ್ ಅನುದಾನವನ್ನೇ ಗುರಿಯಾಗಿಸಿಕೊಂಡಿದ್ದು ಯಾಕೆ? ಅಂತಹ ಲೋಪದ ಬಗ್ಗೆ ಅವರು ವಿರೋಧಿಗಳಿಗೆ ಕೊಟ್ಟ ಕ್ಲ್ಯೂ ಆದರೂ ಏನು? ಪರಿಷತ್ ಸಭೆ ಗೆ ಬಾರದೇ ಹಿಂದೆ ಕುಳಿತು ಮೇಯರ್ ವಿರುದ್ಧ ಮಸಲತ್ತು‌ ನಡೆಸಿದ್ದು ಯಾರು? ಆ ನಗರಸೇವಕನ ವಿರುದ್ಧವೇ ಉಳಿದವರು ದೂರು ನೀಡಲು ರೆಡಿ? ವಿರೋಧ ಪಕ್ಷದ ಗುಂಪಿನಲ್ಲೂ ಶುರುವಾಯಿತು ಭಿನ್ನ ಮಾತು. ಹೊಂದಾಣಿಕೆ ರಾಜಕಾರಣಕ್ಕೆ ಬಲಿಯಾದ ವಿರೋಧಿ ಗುಂಪಿನ ಆ ನಾಯಕ ಯಾರು?

ಬೆಳಗಾವಿ.

ಮಹಾನಗರ ಪಾಲಿಕೆಯ ಆಡಳಿತಾರೂಢ ಬಿಜೆಪಿಯಲ್ಲಿ ಈಗ ಇಂತಹುದೊಂದು ಬಹುದೊಡ್ಡ ಪ್ರಶ್ನೆ ಬಹುತೇಕರನ್ಬು ಕಾಡುತ್ತಿದೆ.

ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ನಡೆದ ರೀತಿ ಮತ್ತು ಅದರ ಹಿನ್ನೆಲೆ ಮುನ್ನೆಲೆಯನ್ನು ಕೆದಕುತ್ತ ಹೋದರೆ ಇದೆಲ್ಲದರ ಸೂತ್ರದಾರ ಯಾರು ಎನ್ನುವುದನ್ನು ಕಂಡು ಹಿಡಿಯಲು ಬಹಳ ಸಮಯ ಬೇಕಾಗುವುದೇ ಇಲ್ಲ. ಪಾಲಿಕೆ ರಾಜಕಾರಣ ಅರಿತವರು ಥಟ್ಟನೆ ಆ ವ್ಯಕ್ತಿಯ ಹೆಸರನ್ನು ಹೇಳಿ ಬಿಡುತ್ತಾರೆ.

ಮಹಾನಗರ ಪಾಲಿಕೆಯಲ್ಲಿ ಘನತೆವೆತ್ತ ಮಹಾಪೌರರನ್ನು ಅವಮಾನಿಸುವ ಮತ್ತು ಅವರನ್ನು ಉತ್ತರಿಸಲು ಆಗದ ರೀತಿಯಲ್ಲಿ ಇಕ್ಕಟ್ಟಿಗೆ ಸಿಲುಕಿಸುವ ಷಡ್ಯಂತ್ರ ನಡೆಯಿತು ಎನ್ನುವುದು ಇಲ್ಲಿ ಸ್ಪಷ್ಟ.

ಈ ಷಡ್ಯಂತ್ರವನ್ನು ವಿರೋಧ ಪಕ್ಷದವರು ಮಾಡಿದ್ದರೆ ಅದನ್ನು ಎದುರಿಸಬಹುದು. ಆದರೆ ಬೆನ್ನಿಗೆ ಚೂರಿ ಹಾಕುವ ರೀತಿಯಲ್ಲಿ ಕೆಲ ಮೀರಸಾಧಕರು ವಿರೋಧಿಗಳೊಂದಿಗೆ ಕೂಡಿ ಆಡಿದ ಆಟದ ಅಸಲಿ ಮುಖವಾಡ ಈಗ ಬಟಾ ಬಯಲಾಗಿದೆ.

ಅಚ್ಚರಿಯ ಸಂಗತಿ ಎಂದರೆ, ಆಡಳಿತ ಗುಂಪಿನ ಕೆಲವರ ಮಾತು ಕೇಳಿ ಮಾತನಾಡಿದ ಕೆಲವರ ವಿರುದ್ಧವೇ ವಿರೋಧಿ ಗುಂಪಿನಲ್ಲಿ ಅಸಮಾಧಾನ‌ ಭುಗಿಲೆದ್ದಿದೆ.

ಗಮನಿಸಬೇಕಾದ ಸಂಗತಿ ಎಂದರೆ, ನೇರವಾಗಿ ವಿರೋಧ ಪಕ್ಷದ ನಾಯಕರ ಬಗ್ಗೆಯೇ ಕೆಲವರು ಅಸಮಾಧಾನ ಹೊರಹಾಕಿದ್ದಾರೆ. ಅಷ್ಟೇ ಅಲ್ಲ ಈ ರೀತಿ ಕೆಳ ಮಟ್ಟದ ಹೊಂದಾಣಿಕೆ ರಾಜಕಾರಣ ಮಾಡುವುದಾದರೆ ನಿಮ್ಮ‌ದಾರಿ ನಿಮಗೆ, ನಮ್ಮ ದಾರಿ ನಮಗೆ ಎನ್ನುವ ರೀತಿಯಲ್ಲಿ ಕೆಲವರು ಉತ್ತರ ಕೊಟ್ಟಿದ್ದು ಸಹ ಈಗ ಗುಟ್ಟಾಗಿ ಉಳಿದಿಲ್ಲ.

ಬೆಳಿಗ್ಗೆ ಸಭೆ ಆರಂಭವಾಗುವ‌ ಮೊದಲು ವಿರೋಧಿ ಪಕ್ಷದ ಕೆಲವರು ಆಡಳಿತ ಗುಂಪಿಗೆ” ನಿಮ್ಮವರ ಸೂಚನೆ ಮೇರೆಗೆ ಇಂತಹ ಪ್ರಶ್ನೆ ಬರಲಿವೆ ಎನ್ನುವುದನ್ನು ಹೇಳಿದ್ದರು.ಅದಕ್ಕೆ ಆಡಳಿತ ಗುಂಪಿನ ನಾಯಕ ಸೇರಿದಂತೆ ಇನ್ನಿತರರು ಉತ್ತರ ಕೊಡಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು

ಆರಂಭದಲ್ಲಿ ನಿರೀಕ್ಷಿಸಿದಂತೆ ನಗರ ಯೋಜನೆ ಸ್ಥಾಯಿ ಸಮಿತಿಯ ವಿಷಯ ಬಂದಿತು. ಅದರಲ್ಲಿನ‌ ವಿಷಯ ಏನು ಎನ್ನುವುದನ್ನು ಅರ್ಥೈಸಿಕೊಳ್ಳದ ವಿರೋಧ‌ ಪಕ್ಷದವರು ಪ್ರಶ್ನೆ ಮಾಡತೊಡಗಿದರು. ಅದಕ್ಕೆ ಕಮಿಟಿ ಅಧ್ಯಕ್ಷರು ಅಷ್ಟೇ ಅಲ್ಲ ಖುದ್ದು ಅಧಿಕಾರಿಗಳೇ ಮಕ್ಕಳಿಗೆ ಹೇಳಿದಂತೆ ತಿಳುವಳಿಕೆ ನೀಡಿದರು.‌ ಆದರೆ ವಿರೋಧಕ್ಕೆ ವಿರೋಧ ಎನ್ನುವ ರೀತಿಯಲ್ಲಿ ಅಡ್ಡಿ ಮಾಡಿದರು.

ಕೊನೆಗೆ ಅದರಲ್ಲಿ ಯಾವುದೇ ಲೋಪವಿಲ್ಲ ಎನ್ನುವುದು ಸ್ಪಷ್ಟವಾಗತೊಡಗಿದಾಗ ಅದನ್ನು ಬಿಟ್ಟು ಮೇಯರ್ ಮತ್ತು ಉಪಮೇಯರ್ ಅನುದಾನದ ಬಗ್ಗೆ ಮಾತನಾಡತೊಡಗಿದರು. ಬರಬರುತ್ತ ಮೇಯರ್ ಅವರು ಅನುದಾನದಲ್ಲಿ ಭ್ರಷ್ಟಾಚಾರವಾಗಿದೆ ಎನ್ನುವ ಕೂಗು ಎಬ್ಬಿಸಿದರು.

ಆಗ ಅಡಳಿತ ಪಕ್ಷದ ಕೆಲವರು ಈ ಎಲ್ಲ ಮಾತುಗಳ ಹಿಂದಿನ ಸೂತ್ರಧಾರರ ಬಗ್ಗೆ ಕೆದಕುತ್ತ ಹೊರಟರು ಇನ್ನೂ ಅಚ್ಚರಿ ಸಂಗತಿ ಎಂದರೆ ಆಡಳಿತ ಗುಂಪಿನಲ್ಲಿ ಏನೆಲ್ಲಾ ಬೆಳವಣಿಗೆಗಳು ಆಗುತ್ತಿವೆ ಎನ್ನುವ ಮಾಹಿತಿಯನ್ನು ಲೈವ್ ಆಗಿ ಸೂತ್ರದಾರನಿಗೆ ಕೊಡುವ ಕೆಲಸವನ್ನು ಕೆಲವರು ಮಾಡಿದರು

Leave a Reply

Your email address will not be published. Required fields are marked *

error: Content is protected !!