Headlines

ಜನಪ್ರಿಯತೆಗೆ ‘ಬರ ಇಲ್ಲದ ‘ಮನಿ’

ಬೆಳಗಾವಿ.

ಪೊಲೀಸ್ ಇಲಾಖೆಯಲ್ಲಿ ಎಲ್ಲರಿಂದಲೂ ಭೇಷ್ ಎನಿಸಿಕೊಳ್ಳುವುದು ಕಷ್ಟ ಸಾಧ್ಯ. ಒಬ್ಬರಿಗೆ ನ್ಯಾಯ ಕೊಡಿಸಿದರೆ ಇನ್ನೊಬ್ವರು ತೆಗಳುವುದು ಸಹಜ ಮತ್ತು ಸ್ವಾಭಾವಿಕ.!

ಆದರೆ ಇಲ್ಲಿ ತೆಗಳುವವರು, ಹೊಗಳುವವರನ್ನು ಎಲ್ಲರನ್ಬು ವಿಶ್ವಾಸಕ್ಕೆ ತೆಗೆದುಕೊಂಡು ಕರ್ತವ್ಯದಲ್ಲೂ ‘ಸೈ” ಎನಿಸಿಕೊಂಡವರು ಸಿಗುವುದು ಬಲು ಅಪರೂಪ.

ಆದರೆ ಅಂತಹ ಅಪರೂಪದಲ್ಲಿ ಒಬ್ಬರು ಎನಿಸಿಕೊಂಡವರು ನಾರಾಯಣ ಬರಮನಿ. ಬೆಳಗಾವಿ ಮಾರ್ಕೆಟ್ ಉಪ ವಿಭಾಗದಲ್ಲಿ ಎಸಿಪಿ ಆಗಿ ಈಗ ಅವರು ಪದೋನ್ನತಿ ಪಡೆದು ಧಾರವಡ ಹೆಚ್ಚುವರಿ ಎಎಸ್ಪಿ ಆಗಿ ವರ್ಗಾವಣೆ ಗೊಂಡಿದ್ದಾರೆ.

ಈ ನಿಮಿತ್ತ ಕಳೆದ ದಿನ ಇಲ್ಲಿನ‌ ಜೀರಗೆ ಸಭಾಭವನದಲ್ಲಿ ಬರಮನಿ ಅವರಿಗೆ ಬೀಳ್ಕೊಡುವ ಸಮಾರಂಭವನ್ನು ಆಯೋಜಿಸಲಾಗಿತ್ತು.

ಸಭಾಂಗಣ ಸಂಪೂರ್ಣ ಭರ್ತಿಯಾಗಿತ್ತು. ಅಲ್ಲಿ ಸೇರಿದ ಜನರಲ್ಲಿ ಜಾತಿ, ಭಾಷೆ ಯಾವುದೂ ಸಂಬಂಧವಿರಲಿಲ್ಲ. ಎಲ್ಲವನ್ನು ಮೀರಿ ಬರಮನಿ ಅವರ ಮೇಲಿನ ಪ್ರೀತಿ ಎಲ್ಲರನ್ನು ಸಭಾಂಗಣಕ್ಕೆ ಕರೆದುಕೊಂಡು ಬಂದಿತ್ತು.

ಅಂದರೆ ನಾರಾಯಣ ಬರಮನಿ ಅವರಿಗೆ ಜನರ ಪ್ರೀತಿಯ ಬರವಿಲ್ಲ ಎನ್ನುವುದು ಸ್ಪಷ್ಟ.

ಬೆಳಗಾವಿಯಲ್ಲಿ ಹೇಗಾಗಿತ್ತು ಎಂದರೆ ಎಲ್ಲಿಯೇ ಸಮಸ್ಯೆ ಬಗೆ ಹರಿಯುವುದಿಲ್ಲ. ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು ಎನ್ನುವಂತಹವನ್ನು ಬರಮನಿ ಅವರು ಬಗೆಹರಿಸಿ ವಾತಾವರಣ ತಿಳಿಗೊಳಿಸಿದ ಉದಾಹರಣೆಗಳು ಸಾಕಷ್ಟಿವೆ.

ಕನ್ನಡ, ಮರಾಠಿ ಭಾಷಾ ವಿವಾದ ದಲ್ಲಿ ಬೀದಿಗೆ ಬಂದು ಜೈಕಾರ, ಧಿಕ್ಕಾರ ಹಾಕುವವರೂ ಸಹ ಇವರ ಮಾತನ್ನು ಮೀರುತ್ತಿರಲಿಲ್ಲ. ಇವರ ಒಂದು ಆಕ್ರೋಶ ಭರಿತ ನೋಟ, ವೇಗದ ಮತ್ತು ಮೊಣಚಾದ ಮಾತು ಎಲ್ಲವನ್ನು ತಿಳಿಗೊಳಿಸುತ್ತಿದ್ದವು.

ಕಳೆದ ದಿನ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಬಹುತೇಕರು ನಾರಾಯಣ ಬರಮನಿ ಅವರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಪ್ರಶಂಸಿಸಿದರು. ಇನ್ನೂ ಕೆಲ ಜನ ಭಾವುಕರಾದರು. ಆದರೆ ಈ ಇಲಾಖೆಯಲ್ಲಿ ವರ್ಗಾವಣೆ ಸಹಜ.!

ಇನ್ನೊಂದು ಮುಖ್ಯವಾದ ಸಂಗತಿ ಎಂದರೆ, ಈ ಸಮಾರಂಭದಲ್ಲಿ ಕೇವಲ ಅವರ ಇಲಾಖೆ ಜನ ಅಷ್ಟೇ ಅಲ್ಲ ಎಲ್ಲ ವರ್ಗದ ಜನ ಹಾಜರಿದ್ದರು ಮಾಧ್ಯಮ ವರ್ಗದವರು, ರಾಜಕಾರಣಿಗಳು ಸೇರಿದಂತೆ ಎಲ್ಲರೂ ಹಾಜರಿದ್ದು ಶುಭ ಕೋರಿ ಮತ್ತೇ ಹೆಚ್ಚಿನ ಹುದ್ದೆಯೊಂದಿಗೆ ಬೆಳಗಾವಿಗೆ ಬನ್ನಿ ಎಂದು ಹಾರೈಸಿದರು.

ಬೆಳಗಾವಿ ಪೊಲೀಸ್ ಆಯುಕ್ತ ಸಿದ್ರಾಮಪ್ಪ, ಡಿಸಿಪಿ ಪಿ.ವಿ ಸ್ನೇಹಾ ಜಗದೀಶ್ ಸೇರಿದಂತೆ ಇಲಾಖೆಯ ಎಲ್ಲ ಸಿಬ್ಬಂದಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!