ಬೆಂಗಳೂರು. ಕನ್ನಡ ಕನ್ನಡ ಎಂದು ಬೀದಿಗಿಖಿದ ಕನ್ನಡ ಹೋರಾಟಗಾರರನ್ಬು ಜೈಲಿಗಟ್ಟುವ ಕೆಲಸವನ್ನು ರಾಜ್ಯದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡಿದೆ.
ವಾಣಿಜ್ಯ ಮಳಿಗೆಗಳ ಮುಂದೆ ಕನ್ನಡ ಫಲಕ ಬೇಕು ಎನ್ನುವ ಅಭಿಯಾನ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಆಂಗ್ಲ ಫಲಕವನ್ನು ಕಿತ್ತೊಗೆಯುವ ಕೆಲಸವನ್ನು ಕನ್ನಡ ಕಲಿಗಳು ಮಾಡಿದ್ದರು.

ಆ ಹೋರಾಟಕ್ಕೆ ಮುಂದಾಗಿದ್ದ ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಸೇರಿದಂತೆ 6 ಕ್ಕೂ ಹೆಚ್ಚು ಜನ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರಕ್ಜೆ ಕಳಿಸಿದ್ದಾರೆ.
ಕನ್ನಡ ನಾಮಫಲಕವನ್ನು ಕಡ್ಡಾಯವಾಗಿ ಹಾಕುವಂತೆ ಒತ್ತಾಯಿಸಿ ಬುಧವಾರ ನಾರಾಯಣ ಗೌಡ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ದೇವನಹಳ್ಳಿ ಸಾದಹಳ್ಳಿ ಗೇಟ್ನಿಂದ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿತ್ತು.

ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿರುವ ಘಟನಾವಳಿಗಳಿಗೆ ಸಂಬಂಧಿಸಿದಂತೆ ನಾರಾಯಣ ಗೌಡ ಸೇರಿದಂತೆ 6 ಜನರ ವಿರುದ್ಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

subscribe e belagavi.
ಪಿಎಸ್‌ಐ ಲಿತೀನ್ ಎಂಬವರು ದೂರಿನನ್ವಯ ನ್ಯಾಷನಲ್ ಹೈವೇ ಅಥಾರಿಟಿ ಆ್ಯಕ್ಟ್, IPC ಸೆಕ್ಷನ್‌ಗಳಾದ 283, 188, 427, 341, 188, 283ರಡಿ ಎಫ್‌ಐಆರ್ ದಾಖಲಾಗಿದೆ. ನಾರಾಯಣ ಗೌಡ, ಜಗದೀಶ್ , ಸುರೇಶ್ ಬಿ.ಕೆ.ನಾರಾಯಣ ಸ್ವಾಮಿ , ಬಿ.ಟಿ.ಅನಿಲ್ ಕುಮಾರ್ ಹಾಗು ಅಂಬರೀಶ್ ಅವರನ್ನು ಬಂಧಿಸಲಾಗಿದೆ
ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರವೇ ಮುಖಂಡರ ವಿರುದ್ಧ ಬಿಎಂಟಿಸಿ ಬಸ್ ಮೇಲೆ ಕಲ್ಲು ತೂರಾಟ, ಪೊಲೀಸ್ ಕಾನ್ಸ್‌ಟೆಬಲ್ ಮೇಲೆ ಉಗಿದಿರುವುದು, ಹೆದ್ದಾರಿ ತಡೆ ಮತ್ತು ಗಲಾಟೆ ಕುರಿತಂತೆ ಮೂರು ಪ್ರಕರಣಗಳು ದಾಖಲಾಗಿದೆ.