Headlines

ತೆಲಂಗಾಣದಲ್ಲಿ ಚನ್ನರಾಜ ಓಟ..!

ತೆಲಂಗಾಣ ವಿಧಾನಸಭೆ ಚುನಾವಣೆ ಕಾರ್ಯತಂತ್ರದಲ್ಲಿ ಚನ್ನರಾಜ ಹಟ್ಟಿಹೊಳಿ ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಗೆ ವೀಕ್ಷಕರಾಗಿ ನೇಮಕವಾಗಿರುವ ಬೆಳಗಾವಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಹೈದರಾಬಾದ್ ನಲ್ಲಿರುವ ಟಿಪಿಸಿಸಿ ಕಚೇರಿಗೆ ಭೇಟಿ ನೀಡಿ ಪೂರ್ವಭಾವಿ ಸಭೆ ನಡೆಸಿದರು. ವನಪರ್ತಿ ವಿಧಾನಸಭಾ ಕ್ಷೇತ್ರಕ್ಕೆ ಚನ್ನರಾಜ ಹಟ್ಟಿಹೊಳಿ ಅವರನ್ನು ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. ಕ್ಷೇತ್ರದ ಹಾಗೂ ಅಭ್ಯರ್ಥಿಯ ಮಾಹಿತಿ ಪಡೆದು, ಸ್ಥಳೀಯ ಮುಖಂಡರೊಂದಿಗೆ ಸುದೀರ್ಘ ಚರ್ಚೆ ನಡೆಸಿದ ಅವರು, ಕರ್ನಾಟಕದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯತಂತ್ರಗಳ ಕುರಿತು ವಿವರಿಸಿದರು….

Read More

ಬೆಳಗಾವಿಗೂ ಬರಲಿದೆ ವಂದೇ ಭಾರತ್..!

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಒತ್ತಡ.‌ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಹಕಾರ ಬೆಳಗಾವಿ: ಜಿಲ್ಲೆಯ ಜನರ ಬಹು ದಿನಗಳ ಬೇಡಿಕೆಯಾದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲನ್ನು ಬೆಂಗಳೂರು- ಧಾರವಾಡದಿಂದ ಬೆಳಗಾವಿಯವರೆಗೆ ವಿಸ್ತರಣೆ ಮಾಡಿ ರೈಲ್ವೆ ಸಚಿವಾಲಯ ಆದೇಶ ನೀಡಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. ಮಂಗಳವಾರ ನ-14 ರಂದು ಪತ್ರಿಕಾ ಹೇಳಿಕೆ ನೀಡಿದ ಅವರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಬೆಂಗಳೂರಿನಿಂದ ರೈಲು ಸಂಖ್ಯೆ (20661) ಬೆಳಿಗ್ಗೆ 05.45 ಕ್ಕೆ ಬೆಂಗಳೂರು ನಿಲ್ದಾಣದಿಂದ…

Read More

ದೀಪಾವಳಿ ಶುಭಾಶಯ

ಬೆಳಗಾವಿ. ಬೆಳಗಾವಿ ಮಹಾನಗರ ಪಾಲಿಕೆಯ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಚಾಣಿ ವಿಲಾಸ ಜೋಶಿ ಮತ್ತು ಲೆಕ್ಕಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾ ವಿಜಾಪುರೆ ಅವರು ಶಾಸಕ ಅಭಯ ಪಾಟೀಲರನ್ಬು ಭೆಟ್ಟಿ ಮಾಡಿ ದೀಪಾವಳಿ ಶುಭಾಶಯ ಕೋರಿದರು. ಇಂದು ಬೆಳಿಗ್ಗೆ ಶಾಸಕರ ಮನೆಗೆ ತೆರಳಿ ಅವರು ಶುಭ ಕೋರಿದರು. ಈ ಸಂದರ್ಭದಲ್ಲಿ ಪಕ್ಷ ಸಙಘಟನೆ ಸೇರಿದಂತೆ ಮುಂದಿನ ದಿನಗಳಲ್ಲಿ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಯಾವ ರೀತಿ ಕಾರ್ಯನಿರ್ವಹುಸಬೇಕು ಎನ್ನುವುದರ ಬಗ್ಗೆ ಸಲಹೆ ನೀಡಿದರು.

Read More

ಜನರತ್ತ ಸೈಕಲ್ ಏರಿ ಹೊರಟ ಅಭಯ

ಬೆಳಗಾವಿ.ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲರು ಮತ್ತೇ ತಮ್ಮ ಸೈಕಲ್ ಪಯಣ ಶುರು ಮಾಡಿದ್ದಾರೆ.ಬಹುತೇಕ ಜನಪ್ರತಿನಿಧಿಗಳು ತಮ್ಮ‌ಐಶಾರಾಮಿ ಕಾರುಗಳಲ್ಲಿ ಜನರ ಸಮಸ್ಯೆ ಆಲಿಸಲು ಹೊರಟರೆ ಶಾಸಕ ಅಭಯ ಪಾಟೀಲರು ಸೈಕಲ್ ಏರಿ ಹೊರಟಿದ್ದಾರೆ‌. ಇದು ಇಂದು ನಿನ್ನೆ ಆರಂಭ ಮಾಡಿದ್ದಲ್ಲ. ಅಥವಾ ಬರೀ ಪೊಟೊ ಪೋಜ್ ಗೂ ಹೊರಟ ಸೈಕಲ್ ಫೇರಿ ಅಲ್ಲ. ಕಳೆದ ಹಲವು ವರ್ಷಗಳಿಂದ ಅಭಯ ಪಾಟೀಲರು ಸೈಕಲ್ ಮೇಲೆಯೇ ದಕ್ಷಿಣ ಕ್ಷೇತ್ರದ ವಾರ್ಡುಗಳಿಗೆ ಸಂಚರಿಸಿ ಸಾರ್ವಜನಿಕರ ಅಹವಾಲು ಆಲಿಸುವ ಕೆಲಸ ಮಾಡುತ್ತಿದ್ದರು.ಈಗ…

Read More

ಬೆಳಗಾವಿಗೆ ಬರುವ ಐಟಿಗಳಿಗೆ ಎಳ್ಳು ನೀರು

ಬೆಳಗಾವಿ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಳಗಾವಿಗೆ ಐಟಿಗಳು ಬರಬೇಕು ಎನ್ನುವ ನಿಟ್ಟಿನಲ್ಲಿ ಮಾಡಿದ ಪ್ರಯತ್ನಕ್ಕೆ ಕಾಂಗ್ರೆಸ್ ಸರ್ಕಾರ ಎಳ್ಳುನೀರು ಬಿಡುತ್ತಿದೆ ಎಂದು ಶಾಸಕ ಅಭಯ ಪಾಟೀಲ ಆರೋಪಿಸಿದರು. ಇಲ್ಲಿನ ವಿದ್ಯಾವಂತ ಯುವಕರು ಐಟಿ ಉದ್ಯಮದಲ್ಲಿ ಉದ್ಯೋಗಕ್ಕಾಗಿ ಪುಣೆ, ಮುಂಬೈ, ಬೆಂಗಳೂರು, ಹೈದರಾಬಾದ್ ಮುಂತಾದ ಸ್ಥಳಗಳಿಗೆ ಹೋಗುತ್ತಿದ್ದಾರೆ. ಅವರಿಗೆ ಬೆಳಗಾವಿಯಲ್ಲಿಯೇ ಐಟಿ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಯತ್ನ ಮಾಡಲಾಗಿತ್ತು ಎಂದು ಶಾಸಕ ಅಭಯ ಪಾಟೀಲರು ಹೇಳಿದರು,. ಮುರುಗೇಶ್ ನಿರಾಣಿ ಕೈಗಾರಿಕಾ ಸಚಿವರಾಗಿದ್ದಾಗ ಬೆಳಗಾವಿಯಲ್ಲಿ ಐಟಿ…

Read More

ಅಭಯ `ಉಸಾಬರಿ’ ಕಟ್ಟೆಗಳು.!

ದಕ್ಷಿಣ ಶಾಸಕ ಅಭಯ ಪಾಟೀಲರ ಹೊಸ ಪರಿಕಲ್ಪನೆ. ಬೆಳಗಾವಿ ದಕ್ಷಿಣದ ವಾರ್ಡಗಳಲ್ಲಿನ್ನು ಉಸಾಬರಿ ಕಟ್ಟೆ ಸ್ಥಾಪನೆ.‌ ಮನಸೋ ಇಚ್ಚೆ ನಾತಾಡಿ, ಬಿಪಿ, ಶುಗರದಿಂದ ದೂರವಾಗಿರಿ. ರಾಜ್ಯದಲ್ಕಿಯೇ ಮೊದಲ ಉಸಾವರಿ ಕಟ್ಟೆಗಳು. ಬೆಳಗಾವಿಸದಾ ವಿನೂತನ ಯೋಜನೆಗಳ ಬಗ್ಗೆ ಚಿಂತನೆ ಮಾಡುವ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರ ಉಸಾಬರಿ ಕಟ್ಟೆ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ,ಅಂದಹಾಗೆ ಉಸಾಬರಿ ಕಟ್ಟೆ ಎಂದಾಕ್ಷಣ ಇದು ಕೆಟ್ಟದ್ದು ಎನ್ನುವ ಚಿಂತೆ ಮಾಡಬೇಡಿ. ಎಲ್ಲರೂ ಒಂದೆಡೆ ಕುಳಿತು ಮುಕ್ತವಾಗಿ ಹರಟೆ ಹೊಡೆದು ಮನಸ್ಸಿನ…

Read More

ಬೆಳಗಾವಿಗೆ ಲಿಂಗಾಯತ. ಚಿಕ್ಕೋಡಿಗೆ ಕುರುಬ ಸಮಾಜಕ್ಕೆ ಟಿಕೆಟ್..!

ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಹೇಳಿಕೆಬೆಳಗಾವಿಗೆ ಲಿಂಗಾಯತ.ಚಿಕ್ಕೊಡಿಗೆ ಕುರುಬ ಸಮಾಜಕ್ಕೆ ಟಿಕೆಟ್ಬೆಳಗಾವಿ:ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಲಿಂಗಾಯತ, ಚಿಕ್ಕೋಡಿ ಕ್ಷೇತ್ರಕ್ಕೆ ಕುರುಬ ಸಮಾಜದ ಅಭ್ಯಥರ್ಿಗೆ ಟಿಕೆಟ್ ನೀಡಲು ಚಿಂತನೆ ನಡೆದಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು,ರಾಜ್ಯದ 20 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಗೆಲುವಿಗೆ ಗುರಿ ಇಟ್ಟುಕೊಳ್ಳಲಾಗಿದೆ ಎಂದರು. ಈಗಾಗಲೇ ಲೋಕಸಭೆ ಚುನಾವಣೆಗೆ ತಯಾರಿ ನಡೆದಿದೆ. ಕಾರ್ಯಕರ್ತರು ಚುನಾವಣೆ ಎದುರಿಸಲು ಸಿದ್ದರಾಗಿದ್ದು, ಎಲ್ಲಾ ರೀತಿಯ ಮಾನದಂಡಗಳನ್ನು ಅನುಸರಿಸಿ, ಮೂರು ಹಂತಗಳಲ್ಲಿ ಚರ್ಚಸಿದ…

Read More

ವಿಜಯೇಂದ್ರ 15 ರಂದು ಅಧಿಕಾರ ಸ್ವೀಕಾರ

ತುಮಕೂರು. ನವೆಂಬರ್ 15ರಂದೇ ಬೆಂಗಳೂರಿನ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ ಹಿರಿಯರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸುತ್ತೇನೆಂದು ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು. ಪಕ್ಷದ ಅಧ್ಯಕ್ಷರಾದ ನಂತರ ಇಲ್ಲಿನ ಸಿದ್ಧಗಂಗಾ ಮಠಕ್ಜೆ ಭೆಟ್ಟಿ ನೀಡಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ವಿಪಕ್ಷ ನಾಯಕ ಆಯ್ಕೆ ನಂತರ ದೆಹಲಿಗೆ ಭೇಟಿ ನೀಡಲಾಗುವುದು ಎಂದು ವಿಜಯೇಂದ್ರ ಮಾಹಿತಿ ನೀಡಿದರು. 16ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯಕರ್ತ ಸಭೆ ಆಯೋಜಿಸಲಾಗುವುದು ಎಂದು ತಿಳಿಸಿದರು. ಅಂದೇ ಶಾಸಕಾಂಗ ಪಕ್ಷ ಸಭೆ ಸಹ‌ನಡೆಸಲಾಗುವುದು ಎಂದರುಸದ್ಯ ದೇಶದ ಐದು…

Read More

ವಿಜಯೇಂದ್ರ ವಿಜಯದ ಸಂಕೇತ..!

ಬಿಜೆಪಿಗೆ ವಿಜಯೇಂದ್ರ ಸಾರಥ್ಯ-ಕೆಲವರಿಗೆ ಇಷ್ಟ- ಕಷ್ಟ. ವಿಜಯೇಂದ್ರ ಮುಂದೆ ಹತ್ತಾರು ಸವಾಲುಗಳು., ವಿಜಯೇಂದ್ರ ಅಂದರೆ ವಿಜಯದ ಸಂಕೇತ. ಹಲವು ಪದಾಧಿಕಾರಿಗಳ ಬದಕಾವಣೆ ಸಾಧ್ಯತೆ ಬೆಳಗಾವಿ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿರುವಾಗಲೇ ಕಿರಿಯ ಎನಿಸಿಕೊಂಡ ರಾಜಾಹುಲಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರಿಗೆ ಹೈಕಮಾಂಡ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ದೊಡ್ಡ ಜವಾಬ್ದಾರಿ ನೀಡಿದೆ. ವಿಜಯೇಂದ್ರ ಅವರ ವರ್ಚಸ್ಸು, ಪ್ರಭಾವ, ಸಾಮರ್ಥ್ಯ ಏನೇ ಇದ್ದರೂ ರಾಜ್ಯ ಬಿಜೆಪಿಯ ಚುಕ್ಕಾಣಿ ಹಿಡಿದು ಮುನ್ನಡೆಸುವುದು ಅಷ್ಟು ಸುಲಭದ ಸಂಗತಿಯಲ್ಲ ಎನ್ನುವುದು ವಾಸ್ತವ. ಬಿಜೆಪಿ ಕಾರ್ಯಕರ್ತರ…

Read More

ಸುದ್ದಿ ಸಾರ ಮರೆಯದಿರಿ..!

ಬೆಳಗಾವಿ.ಬೆರಳ ತುದಿಯಲ್ಲಿ ಮಾಹಿತಿ ಲಭ್ಯವಾಗಿಸುವ ತಂತ್ರಜ್ಞಾನದ ಯುಗದಲ್ಲಿ ಸುದ್ದಿ ಬಿತ್ತರಿಸುವ ಭರದಲ್ಲಿ ಸುದ್ದಿಯ ಸಾರವನ್ನು ಪತ್ರಕರ್ತರು ಮರೆಯುವಂತಾಗಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಣಸ ಜಾರಕಿಹೊಳಿ ಹೇಳಿದರು.ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ. ವಿ. ಪ್ರಭಾಕರ್, ಗಿರೀಶ ಕೋಟೆ ಅವರಿಗೆ ಹಮ್ಮಿಕೊಂಡಿದ್ದ ಅಭಿಮಾನದ ಅಭಿವಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿನ ಸಮಸ್ಯೆಗಳತ್ತ ಬೆಳಕು ಚೆಲ್ಲುವ ಕೆಲಸವಾಗಬೇಕು. ಮುಖ್ಯವಾಗಿ ಪತ್ರಿಕಾ ರಂಗದಲ್ಲಿ ಎಲೆಮರೆ ಕಾಯಿಯಂತಿರುವ ಸಾಧಕರನ್ನು ಗುರುತಿಸುವ ಕಾರ್ಯವಾಗಬೇಕೆಂದರು….

Read More
error: Content is protected !!