Headlines

ಮಂತ್ರಿ, ಶಾಸಕರ ಹೆಸರು ದುರ್ಬಳಕೆ- ಆರೋಪ

ಬೆಳಗಾವಿ ಪಾಲಿಕೆಯಲ್ಲಿ ಬಗೆಹರಿಯದ ಪಿಕೆಗಳ ಗೋಳು. ದಿನೇ ದಿನೇ ಕಗ್ಗಂಟಾಗುತ್ತಿರುವ 138 ಪಿಕೆಗಳ ನೇಮಕಾತಿ ವಿಷಯ ಪಿಕೆಗಳ ನಿಯಮಬಾಹಿರ ನೇಮಕದಲ್ಲಿ ಮಂತ್ರಿ, ಶಾಸಕರ ಹೆಸರು‌ ದುರ್ಬಳಕೆ ಮಾತು. ಎರಡು ತಿಂಗಳಾದರೂ ಸಿಗದ ಸಂಬಳ. ಸರ್ಕಾರಕ್ಕೆ ಪತ್ರ ಬರೆದ ಆಯುಕ್ತರು. ಪಿಕೆ ವಿಷಯದಲ್ಲಿ ನಗರಸೇವಕರನ್ನೇ ದಾರಿ ತಪ್ಪಿಸುತ್ತಿರುವವರು ಯಾರು?. ಸಂಬಳ ಕೊಡಲಾಗದ ಇಕ್ಕಟ್ಟಿನ ಸ್ಥಿತಿಗೆ ಪಾಲಿಕೆ. ಬೆಳಗಾವಿ. ವಿಘ್ನನಿವಾರಕನನ್ನು ಹನ್ನೊಂದು ದಿನಗಳ ಕಾಲ ಭಕ್ತಿ ಪೂರ್ವಕವಾಗಿ ಪೂಜಿಸಿದರೂ ಕೂಡ ಬೆಳಗಾವಿ ಪಾಲಿಕೆಯಲ್ಲಿ 138 ಪೌರಕಾರ್ಮಿಕರಿಗೆ ಸಂಬಳ ಮಾತ್ರ ಸಿಕ್ಕಿಲ್ಲ….

Read More

ಬಾಗೇವಾಡಿ ಟೋಲ್ ಬಂದ್ ಬಂದ್..!

ಬೆಳಗಾವಿ.ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬಾರದು ಎಂದು ರೈತರು ಬಾಗೇವಾಡಿ ಟೋಲ್ ನಾಕಾ ಬಂದ್ ಮಾಡಿದ್ದಾರೆ. ಕರ್ನಾಟಕ ಬಂದ್ ಗೆ ಬೆಂಬಲಾರ್ಥವಾಗಿ ರೈತರು ಬೆಳಿಗ್ಗೆಯಿಂದ ಟೋಲ್ ಬಳಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ರೈತರ ಈ ಪ್ರತಿಭಟಬೆಯಿಂದ ಸಂಚಾರದಲ್ಲಿ ಅಸ್ತವ್ಯಸ್ತವಾಯಿತು. ಪೊಲೀಸರು ಬಂದೋಬಸ್ತ್ ಮಾಡಿದರು.

Read More

ಇನ್ನೂ‌ ಮುಗಿಯದ ವಿಸರ್ಜನೆ

ಅಲ್ಲಲ್ಲಿ ನಿದ್ರೆಗೆ ಜಾರಿದ ಕಾರ್ಯಕರ್ತರು. ಮೂರ್ತಿ ಮುಂದಕ್ಕೆ ಸಾಗುವುದೇ ಕಷ್ಡ ಎನ್ನುತ್ತಿರುವ ಪೊಲೀಸರು.9 ಗಂಟೆ ಆದರೂ ಮುಗಿಯದ ವಿಸರ್ಜನೆ. ಬೆಳಗಾವಿ – ನಗರದಲ್ಲಿ ನಿನ್ನೆ ಸಂಜೆ ಆರಂಭವಾದ ಶ್ರೀ ಮೂರ್ತಿ ವಿಸರ್ಜನೆ ಮೆರವಣಿಗೆ ಶುಕ್ರವಾರ ಬೆಳಗ್ಗೆ ಒಂಬತ್ತು ಗಂಟೆವರೆಗೂ ಮುಂದುವರೆದಿತ್ತು.. ಡಾಲ್ಬಿ ಸದ್ದಿನಿಂದಾಗಿ ಈ ವರ್ಷವೂ ಶ್ರೀಮೂರ್ತಿ ವಿಸರ್ಜನೆ ವಿಳಂಬವಾಗಿ ಸಾಗುತ್ತಿದೆ . ಡಾಲ್ಬಿ ಸದ್ದಿಗೆ ಕುಣಿದು ಕುಪ್ಪಳಿಸುತ್ತಿರುವವರನ್ನು ಕಂಡು ಜನಬೆಚ್ಚಿ ಬಿದ್ದಿದ್ದಾರೆ ಗಮನಿಸಬೇಕಾದ ಸಂಗತಿ ಎಂದರೆ, ಗಣೇಶ ಮಂಡಳದ ಕಾರ್ಯಕರ್ತರು ಮೂರ್ತಿಯನ್ನು ಹೊಂಡಕ್ಕೆ ತೆಗೆದುಕೊಂಡು ಹೋಗುವ…

Read More

ಕನ್ನಡ ಧ್ವಜ ಕಸಿದುಕೊಂಡರು..!

ಬೆಳಗಾವಿ. ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕನ್ನಡ ಬಾವುಟ ಹಿಡಿದು ಕುಣಿಯುತ್ತಿದ್ದುದಕ್ಕೆ ಓರ್ವ ಆಕ್ಷೇಪಿಸಿ ಬಾವುಟ ಕಿತ್ತುಕೊಂಡು ಹೋದ ಘಟನೆ ಬೋಗಾರವೇಸ್ ವೃತ್ತದಲ್ಲಿ 1.ಗಂಟೆ 7 ನಿಮಿಷದಲ್ಲಿ‌ ನಡೆದಿದೆ . ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಹಾಡಿಗೆ ತಕ್ಕಂತೆ ಗುಂಪಿನಲ್ಲಿದ್ದ ವ್ಯಕ್ತಿ ಕನ್ನಡ ಬಾವುಟ ಹಿಡಿದುಕೊಂಡು ಕುಣಿಯುತ್ತಿದ್ದನು. ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ವ್ಯಕ್ಯಿ ಆ ಕನ್ನಡ ಬಾವುಟವನ್ನು ಕಸಿದುಕೊಂಡು ಹೋದನು.

Read More

ಮೆರವಣಿಗಿಯೊಳಗ ಪೋಜ್ ಕೊಟ್ಟಾಳೊ…!

ಬೆಳಗಾವಿ. ಗಣೇಶ ವಿಸರ್ಜನೆ ಮೆರವಣಿಗೆ ನ ಭೂತೊ ನ ಭವಿಷ್ಯತಿ ಎನ್ನುವಂತೆ ಸಾಗಿದೆ. ಬೋಗಾರವೇಸ್ ವೃತ್ತದಲ್ಲಿ ಎಲ್ಲಿ ನೋಡಿದಲ್ಲಿ ಜನರೇ ಜನ‌. ಗಣಪತಿ ಬಪ್ಪ ಮೋರಯಾ ಎಬ್ನುವ ಘೋಷಣೆ ನಡುವೆ ಡಿಜೆ ಸಂಗೀತ ಭಾರೀ ಸದ್ದು ಮಾಡುತ್ತಿದೆ. ಇದೆಲ್ಲದರ ನಡುವೆ ಸಿಕ್ಕಾಪಟ್ಟೆ ವೈರಲ್ ಆಗಿರುವ ಶಾಂತಾಬಾಯಿ ..ಹಾಡಿಗೆ ಜನ‌ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಇದೆಲ್ಲಕ್ಕಿಂತ ಮುಖ್ಯವಾಗಿ ಪೋಜ್ ಕೊಟ್ಟಾಳೊ ಹುಡುಗಿ ಪೋಜ್ ಕೊಟ್ಟಾಳೊ ಎನ್ನುವ ಕನ್ನಡ ಹಾಡಿಗೆ ಕುಣಿದ ದೃಶ್ಯ ಎಲ್ಲರ ಗಮನ ಸೆಳೆಯಿತು.

Read More

ಗಣಪತಿ ಬಪ್ಪ ಮೋರಯಾ..!

ಗಣೇಶ ವಿಸರ್ಜನೆ ಮೆರವಣಿಗೆ ಆರಂಭ, ಶಾಸಕ ಅಭಯ ಪಾಟೀಲ, ಕವಟಗಿಮಠ, ರಾಜು ಶೇಠ, ಮೇಯರ್ ಭಾಗಿ, ಮೆರವಣಿಗೆ ಕಣ್ತುಂಬಿಕೊಳ್ಳುವ ಸಂಭ್ರಮಕ್ಕೆ ಖಾಕಿ ಅಡ್ಡಿ, ಅಂಬ್ಯುಲೆನ್ಸ್ ಹೋಗದಂತೆ ಬ್ಯಾರಿಕೇಡ್ ಹಾಕಿದ ಖಾಕಿ ಬೆಳಗಾವಿ.ಗಡಿನಾಡ ಬೆಳಗಾವಿಯಲ್ಲಿ ಹನ್ನೊಂದು ದಿನಗಳ ಕಾಲ ವಿರಾಜಮಾನಗೊಂಡ ಗಣಪತಿ‌ ವಿಸರ್ಜನೆ ಮೆರವಣಿಗೆ ನಿಗದಿತ ಸಮಯಕ್ಕೆ ಆರಂಭಗೊಂಡಿದೆ. ಕಾವೇರಿ ಕೋಲ್ಡ್ರಿಂಕ್ಸ್ ಬಳಿ ಶಾಸಕ ಅಭಯ ಪಾಟೀಲ ವಿಧಾನ. ಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಶಾಸಕ ಆಸೀಫ್ ಶೇಠ, ಮೇಯರ್ ಶೋಭಾ ಸೋಮನ್ನಾಚೆ, ಉಪ‌ಮೇಯರ್ ರೇಷ್ಮಾ ಪಾಟೀಲ,…

Read More

3 ದಿನ ಮೋಡ ಬಿತ್ತನೆ

3 ದಿನ ಬೆಳಗಾವಿ ಜಿಲ್ಲೆಯಲ್ಲಿ ಮೋಡ ಬಿತ್ತನೆ: ಸಚಿವ ಸತೀಶ್‌ ಜಾರಕಿಹೊಳಿ ಬೆಳಗಾವಿ: ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದ್ದು, ಮುಂಗಾರು ಮಳೆ ತೀವ್ರ ಕೊರತೆಯಿಂದ ಜಿಲ್ಲೆಯ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದಕಾರಣ ಮಳೆಗಾಗಿ ನಾಳೆಯಿಂದ ಬೆಳಗಾವಿ ಜಿಲ್ಲೆಯಲ್ಲಿ ಮೂರು ದಿನ ಬೆಳಗಾಂ ಶುಗರ್ಸ್‌ನಿಂದ ಮೋಡ ಬಿತ್ತನೆ ಮಾಡಲಾಗುತ್ತಿದ್ದು, ರಾಜ್ಯ, ಕೇಂದ್ರ ಸರ್ಕಾರದಿಂದ ಒಪ್ಪಿಗೆ ದೊರೆತಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರು ತಿಳಿಸಿದರು. ನಗರದ ಕಾಂಗ್ರೆಸ್‌ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…

Read More

ಎಲ್ಲಿ ನೋಡಿದಲ್ಲಿ ಪೊಲೀಸ್ ಬೂಟಿನ ಸದ್ದು

ಬೆಳಗಾವಿ.ಗಡಿನಾಡ ಬೆಳಗಾವಿಯಲ್ಲಿ ಈಗ ಹೆಜ್ಜೆ ಹೆಜ್ಜೆಗೂ ಪೊಲೀಸರ ಬೂಟಿನ ಸದ್ದು ಕೇಳಿಸುತ್ತಿದೆ.ಅಷ್ಟೇ ಅಲ್ಲ ಸೂಕ್ಷ್ನ ಪ್ರದೇಶ ಸೇರಿದಂತೆ ಮೆರವಣಿಗೆ ಮಾರ್ಗ ಸಂಚರಿಸುವ ಮಾರ್ಗದಲ್ಲಿ ಹದ್ದಿನ ಕಣ್ಣಿಡಲು ನಾಲ್ಕು ನೂರಕ್ಕೂ ಹೆಚ್ಚು ಸಿಸಿಟಿವಿಗಳನ್ನು ಅಳವಡಿಸಲಾಗಿದೆ.ಇದರ ಜೊತೆಗೆ ದ್ರೋಣ ಕ್ಯಾಮೆರಾಗಳೂ ಕೂಡ ಹಾರಾಡಲಿವೆ ವಿಸರ್ಜನಾ ಮೆರವಣಿಗೆಯು ನಾಳೆ ದಿ. 28 ರಂದು ಮಧ್ಯಾಹ್ನ 4 ಕ್ಕೆ ಆರಂಭವಾಗಲಿದೆ. ಅದು ಮುಕ್ತಾಯಗೊಳ್ಳುವುದು ಮರುದಿನ ಅಂತ್ಯಗೊಳ್ಳಲಿದೆ. ಬೆಳಗಾವಿ ನಗರದಲ್ಲಿ ಒಟ್ಟು 937 ಸಾರ್ವಜನಿಕ ಗಣೇಶ ಮೂರ್ತಿಗಳು ವಿಸರ್ಜನೆಗೊಳ್ಳಲಿವೆಈ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು…

Read More

ಬೆಳಗಾವಿಯಲ್ಲಿ ವಿಸರ್ಜನೆಯದ್ದೇ ಸಮಸ್ಯೆ..!

ಬೆಳಗಾವಿ, ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆಗೆ ಅಂತಿಮ ಸಿದ್ಧತೆ ಗಳು ನಡೆದ. ಬೆನ್ನ ಹಿಂದೆಯೇ ಜಿಲ್ಲಾಡಳಿತಕ್ಕೆ ವಿಸರ್ಜನೆ ಹೊಂಡದ ಸಮಸ್ಯೆ ಕಾಡತೊಡಗಿದೆ. ಬೆಳಗಾವಿ‌ನಗರದಲ್ಲಿ ಈ ಬಾರಿ ಸುಮಾರು‌ ಮೂರುನೂರಕ್ಕೂ ಅಧಿಕ ಸಾರ್ವಜನಿಕ ಗಣೇಶ ಮೂರ್ತಿಗಳಿವೆ. ಗಮನಿಸಬೇಕಾದ ಸಂಗತಿ ಎಂದರೆ ಅವುಗಳ ಎತ್ತರ ಕಳೆದ ಬಾರಿಗಿಂತ ಎತ್ತರವಾಗಿವೆ. ಕಳೆದ ವಾರಿ ವಿಸರ್ಜನೆ ವೇಳೆ ಬಹಳಷ್ಟು ತೊಂದರೆ ಆಗಿತ್ತು. ಈಗ ಮೂರ್ತಿಗಳು ಎತ್ತರ ಆಗಿದ್ದರಿಂದ ಮತ್ತದೇ ಸಮಸ್ಯೆ ಬರಬಹುದು ಎನ್ನುವ ಮಾತು ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ದಕ್ಷಿಣ…

Read More

ಗಣಪತಿ ವಿಸರ್ಜನೆ ಇದೇ ಮಾರ್ಗದಿಂದ ಸಂಚರಿಸಿ

ಬೆಳಗಾವಿ. ಗಡಿನಾಡ ಬೆಳಗಾವಿ‌ ಗಣೇಶ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆ ಎಲ್ಲ ರೀತಿಯ ಕ್ರಮವನ್ನು ತೆಗೆದುಕೊಂಡಿದೆ. ನಾಳೆ ದಿ.28 ರಂದು ಸಂಜೆ ವಿಸರ್ಜನಾ ಮೆರವಣಿಗೆ ಆರಂಭವಾಗಲಿದೆ. ಬಹುಶಃ ಅದು ಮರುದಿನವೇ ಮುಗಿಯುತ್ತದೆ. ಈ ಸಂದರ್ಭದಲ್ಲಿ ಮೆರವಣಿಗೆ ವೀಕ್ಷಣೆಗೆ ಬಂದ. ಜನ ಸಮೂಹಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ಪೊಲೀಸರು ಮಾರ್ಗ ಬದಲಾವಣೆ ಮಾಡಿದ್ದಾರೆ. ಸಂಚಾರ ಮಾರ್ಗ ಬದಲಾವಣೆ. ಮೆರವಣಿಗೆಯು ನರಗುಂದಕರ ಭಾವ ಚೌಕದಿಂದ ಪಾರಂಭವಾಗಿ ಮಾರುತಿ ಗಲ್ಲಿ, ಹುತಾತ್ಮ…

Read More
error: Content is protected !!