ಪಕ್ಷದ‌ ಕೆಲಸಕ್ಕೆ ಅಭಯ ಹಾಜರಿ..!

ಬೆಳಗಾವಿ. ಕಳೆದ ದಿನವಷ್ಟೇ ಆಪ್ತ ಸ್ನೇಹಿತ ಹಾಗೂ ಪಕ್ಷದ ನಿಷ್ಠಾವಂತನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಶಾಸಕ ಅಭಯ ಪಾಟೀಲರು ದೆಹಲಿಯಿಂದ ಬೆಳಗಾವಿಗೆ ಬಂದಿದ್ದರು. ಆದರೆ ಇಂದು ಮತ್ತೇ ಪಕ್ಷದ ವಹಿಸಿದ ಜವಾಬ್ದಾರಿಗೆ ಅಭಯ ಪಾಟೀಲ ಅಣಿಯಾಗಿದ್ದಾರೆ. ದೆಹಲಿಯಲ್ಲಿ ನಡೆದ ಬಿಜೆಪಿ ಹಿರಿಯ ನಾಯಕರ‌ ಸಭೆಯಲ್ಲಿ ಅಭಯ ಪಾಟೀಲ ಭಾಗವಹಿಸಿದ್ದಾರೆ. ಶಾಸಕರ ಪ್ರವಾಸ ಅಭಿಯಾನ ಸಭೆಯಲ್ಲಿ ರಾಷ್ಟ್ರೀಯ ಉಪಾಧ್ಯಕ್ಷ ಜಯ ಪಾಂಡೇಜಿ ಅವರ ಉಪಸ್ಞಿತಿಯಲ್ಲಿ ಸಭೆ ನಡೆದಿದೆ‌ ಅಭಯ ಪಾಟೀಲರು ಕಳೆದ ಒಂದು ತಿಂಗಳಿಂದ ಛತ್ತೀಸಗಡದಲ್ಲಿಯೇ ಠಿಕಾಣಿ ಹೂಡಿದ್ದಾರೆ. ಪ್ರದೀಪ…

Read More

ಪ್ರದೀಪ ಶೆಟ್ಟಿ ಇನ್ನು ನೆನಪು ಮಾತ್ರ..!

ಬೆಳಗಾವಿ.‌ ಅಕ್ಕಾರೀ, ವೈನೀರಿ, ಅಣ್ಣಾರ….ಎಂದು ಕೂಗಿ ಕರೆಯುವ ಧ್ವನಿ ಈಗ ಇಲ್ಲದಾಗಿದೆ. ಆ ಧ್ವನಿ ಮತ್ಯಾರದ್ದೂ ಅಲ್ಲ .‌ ಅದು ಪ್ರದೀಪ ಶೆಟ್ಟಿ ಅವರದ್ದು.! ಪಕ್ಕಾ ನಿಷ್ಠಾವಂತ ಬಿಜೆಪಿ ಕಾರ್ಯಕರ್ತ ಮತ್ತು‌ ಅದರಲ್ಲೂ ವಿಶೇಷವಾಗಿ ಶಾಸಕ ಅಭಯ ಪಾಟೀಲರ ಕುಟುಂಬ‌ ಸದಸ್ಯರಲ್ಲಿ ಒಬ್ಬರು ಎಂದು ಗುರುತಿಸಿಕೊಂಡವರಲ್ಲಿ ಪ್ರದೀಪ ಶೆಟ್ಡಿ ಒಬ್ಬರು. ಬೆಳಗಾವಿಯ ಅಭಯ ಪಾಟೀಲರ ಕಚೇರಿಗೆ ಹೋದರೆ ಪ್ರದೀಪಣ್ಣಾ ಎಂದು ಪ್ರೀತಿಯಿಂದ ಕರೆಯಿಸಿಕೊಳ್ಳುವ ಅವರು‌ ಬಹಳ‌ ಅವಸರ ಮಾಡಿ ಬಿಟ್ಟು ವಾಪಸ್ಸು ಬರಲಾರದ ಜಾಗಕ್ಕೆ ಹೋಗಿ ಬಿಟ್ಟಿದ್ದಾರೆ….

Read More

ಆಯುಕ್ತರ ಸನ್ಮಾನ

ಪಾಲಿಕೆ ನೌಕರರು ಫುಲ್ ಖುಷ್..!ಬೆಳಗಾವಿ.ಮಹಾನಗರ ಪಾಲಿಕೆಯ ಸಿಬ್ಬಂದಿಗಳು ಇಂದು ಫು;ಲ್ ಖುಷ್ ಆಗಿದ್ದರು.ಆಯುಕ್ತ ಅಶೋಕ ದುಡಗುಂಟಿ ಅವರು ನೌಕರರ ಸ್ನೇಹಿ ಆದೇಶಗಳನ್ನು ಹೊರಡಿಸಿದ್ದು ಈ ಖುಷಿಗೆ ಕಾರಣ. ವಿಶೇಷವಾಗಿ ಗ್ರೂಪ್ ಸಿ ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಹುದ್ದೆಗೆೆ ಹಾಗೂ ಗ್ರುಪ್ ಡಿ ವೃಂದದವರಿಗೆ ಗ್ರುಪ್ ಸಿ ದ್ವಿ.ದ.ಸ ಹುದ್ದೆಗಳಿಗೆ ಪದೋನ್ನತಿ ನೀಡಿ ಆಯುಕ್ತರು ಆದೇಶ ಹೊರಡಿಸಿದ್ದಾರೆ, ಅಷ್ಟೇಅಲ್ಲ ಪಾಲಿಕೆಯ ಎಲ್ಲ ಸಿಬ್ಬಂದಿಗಳಿಗೆ ಶೇ. 17 ರಷ್ಟು ಮಧ್ಯಂತರ ಪರಿಹಾರ, ಗಳಿಕೆ ರಜೆ ನಗದೀಕರಣ, ತುಟ್ಟಿಭತ್ಯೆ…

Read More

ಸಿಕ್ಕಿ ಬಿದ್ದ ಲಂಚಬಾಕ..!

ಇ ಬೆಳಗಾವಿ ಬಳಿ ದಾಖಲೆ ಲಭ್ಯ. ಟೇಬಲ್ ಮೇಲೆ ಗರಿಗರಿ ನೋಟಿದ್ದರೆ ಕೆಲಸ, ಇಲ್ಲದಿದರೆ ನಾಳೆ ಬಾ ಲೋಕಾಯುಕ್ತರ ಭಯ ಇಲ್ಲದ ಲಂಚಬಾಕರು. ಬೆಳಗಾವಿ. ಗಡಿನಾಡ ಬೆಳಗಾವಿಯ ಕೆಲ ಸರ್ಕಾರಿ ಕಚೇರಿಗಳಲ್ಲಿ ಕಾಂಚಾಣ ಸದ್ದು ಮಾಡದಿದ್ದರೆ ಬ್ರಹ್ಮ ಬಂದರೂ ಕೆಲಸ ಆಗಲ್ಲ ಎಂದು E belagavi ವರದಿ ಮಾಡಿತ್ತು. ಯಾವಾಗಲೂ ಇ ಬೆಳಗಾವಿ ಡಾಟ್ ಕಾಮ್ ಗಾಳಿಯಲ್ಲಿ ಗುಂಡು ಹಾರಿಸಿದಂತೆ ,ಅಂತೆ ಕಂತೆಗಳ ಮೇಲೆ ವರದಿ ಮಾಡಲ್ಲ. ಪಕ್ಕಾ ದಾಖಲೆಗಳನ್ನು ಇಟ್ಡುಕೊಂಡೇ ಸುದ್ದಿಯನ್ನು ಪ್ರಕಟಿಸುವ ಕೆಲಸವನ್ನು ನಿಮ್ಮ…

Read More

16 ಕ್ಕೆ ಪಾಲಿಕೆ ಸಭೆ

ಬೆಳಗಾವಿ. ಕೊನೆಗೂ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಇದೇ ಬರುವ ದಿ.‌16 ಕ್ಕೆ ನಿಗದಿಯಾಗಿದೆ. ಮೇಯರ್ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಈ ದಿನಾಂಕವನ್ನು ನಿಗದಿ ಪಡಿಸಲಾಗಿದೆ. ಈ ಹಿಂದೆ ಮೇಯರ್ ಅವರು ಎರಡು ಬಾರಿ‌ ದಿನಾಂಕ ನಿಗದಿ ಪಡಿಸಿದ್ದರೂ ಮುಹೂರ್ತ ಕೂಡಿ ಬಂದಿರಲಿಲ್ಲ. ಈ ಬಗ್ಗೆ E belagavi. ಡಾಟ್ ಕಾಮ್ ವರದಿ‌ಮಾಡಿತ್ತು.

Read More

L and Tಗೆ 21 ಕೋಟಿ ದಂಡ

ದಂಡ ವಿಧಿಸಿದ ಮಹಾನಗರ ಪಾಲಿಕೆ. ಪಾಲಿಕೆ ಆಯುಕ್ತರ ದಿಟ್ಟ ನಿರ್ಧಾರ. ಬುದ್ದಿ ಹೇಳಿದರೂ ಸುಧಾರಿಸದ ಕಂಪನಿ. ಕಳಪೆ ಕಾಮಗಾರಿಯ ಆರೋಪ ಬೆಳಗಾವಿ.ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸದವರಿಗೆ ಸರಿಯಾದ ರೀತಿಯಲ್ಲಿ ಬುದ್ದಿ ಕಲಿಸುವ ಕೆಲಸವನ್ನು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ಮಾಡಿದ್ದಾರೆ. ಬೆಳಗಾವಿಗೆ ನಿರಂತರ ಕುಡಿಯುವ ನೀರು ಪೂರೈಕೆ ಜವಾಬ್ದಾರಿ ಹೊತ್ತ ಎಲ್ ಆ್ಯಂಡ್ ಟಿ ಕಂಪನಿಗೆ ಮಹಾನಗರ ಪಾಲಿಕೆಯು ಬರೊಬ್ಬರಿ 21 ಕೋಟಿ 46 ಲಕ್ಷ ರೂ ದಂಡ ವಿಧಿಸಿದೆ. ನಿಗದಿತ ಅವಧಿಯಲ್ಲಿ ಗುರಿಸಾಧನೆ…

Read More

ಪ್ರದೀಪ ಶೆಟ್ಟಿ ಇನ್ನಿಲ್ಲ

ಬೆಳಗಾವಿ. ಸದಾ ನಗುಮುಖದ ವ್ಯಕ್ತಿತ್ವ ಹೊಂದಿದ್ದ ಪ್ರದೀಪ ಶೆಟ್ಟಿ ಅನಾರೋಗ್ಯದ ಹಿನ್ನೆಲೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಹಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕಳೆದ ದಿನ ಮಧ್ಯರಾತ್ರಿ‌ ನಿಧನರಾದರು ಮೃತರು ಶಾಸಕ‌ ಅಭಯ ಪಾಟೀಲರ ಆತ್ಮೀಯರಲ್ಲಿ ಒಬ್ಬರಾಗಿದ್ದರು. ಸಂತಾಪ. ಪ್ರದೀಪ ಶೆಟ್ಟಿ ನಿಧನಕ್ಕೆ ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಅನಿಲ ಬೆನಕೆ ಸೇರಿದಂತೆ ನಗರಸೇವಕರು, ಹಿತೈಷಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

Read More

ಇಲ್ಲಿ ದುಡ್ಡೇ ದೊಡ್ಡಪ್ಪ.!

ಬೆಳಗಾವಿ. ನೀವು ಮನೆಯಲ್ಲಿ ಕುಳಿತುಕೊಂಡು ಸರ್ಕಾರಿ ಸಂಬಳ ಪಡೆಯಬೇಕೆ? ಮತ್ತು ಸರ್ಕಾರಿ ಸಂಬಳದ ಜೊತೆಗೆ ಗಿಂಬಳವೂ ಬೇಕೆ? ಹಾಗಿದ್ದರೆ ನೀವು ಉಳಿದ ಜಿಲ್ಲೆಗಿಂತ ಬೆಳಗಾವಿಗೆ ಬಂದರೆ ಈ ಸೌಲಭ್ಯ ನಿಮಗೂ ಸಿಗಬಹುದು. ಅದನ್ನು ಬಿಟ್ಟು ಸರ್ಕಾರಿ ಸಂಬಳದ ಜೊತೆಗೆ ಗಿಂಬಳವೂ ಬೇಕು ಎಂದರೆ ನೀವು ಕಚೇರಿ ತುಂಬ ಏಜೆಂಟರನ್ನು ಇಟ್ಟುಕೊಂಡಿರಬೇಕು. ಆದರೆ ಈಗ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಏಜೆಂಟರ ಹಾವಳಿ ತುಂಬಿಕೊಂಡಿದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಇಲ್ಲಿ ಸರ್ಕಾರ ಎಷ್ಟೇ ONLINE ವ್ಯವಸ್ಥೆ ಮಾಡಿದರೂ ಕೂಡ ಸರ್ಕಾರಿ…

Read More

ಸಚಿವ ಸುಧಾಕರ ವಜಾಕ್ಕೆ ಬ್ರಾಹ್ಮಣ ಮಹಾಸಭಾ ಆಗ್ರಹ

ಬೆಂಗಳೂರು.ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಡಿ ಸುಧಾಕರ್ ಅವರನ್ನು ಸಚಿವ ಪದವಿಯಿಂದ ವಜಾ ಮಾಡುವಂತೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಗ್ರಹಿಸಿದೆ.ಈ ಬಗ್ಗೆ ಮಹಾಸಬಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮತ್ತು ಸಚಿವ ದಿನೇಶ ಗುಂಡೂರಾವ್ ಅವರಿಗೆ ಮನವಿ ಪತ್ರವನ್ನು ಕಳಿಸಿಕೊಟ್ಟಿದ್ದಾರೆ, ಆದರೆ ಈಗ ಸಚಿವರು ನಡೆದುಕೊಳ್ಳುತ್ತಿರುವ ರೀತಿ ಸಂಪೂರ್ಣ ತದ್ವಿರುದ್ಧವಾಗಿದೆ. ಆದ್ದರಿಂದ ಮುಖ್ಯಮಂತ್ರಿಗಳು ತಕ್ಷಣ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಮನವಿ…

Read More

ಕಿತ್ತೂರು- ಧಾರವಾಡ ರೈಲು ಮಾರ್ಗ. ಸರ್ವೇ ಆರಂಭಿಸಿ

ಕಿತ್ತೂರು – ಧಾರವಾಡ ರೈಲು ಮಾರ್ಗಭೂ ಸಮೀಕ್ಷೆಗೆ ಸಂಸದೆ ಮನವಿಬೆಳಗಾವಿಕಿತ್ತೂರ-ಧಾರವಾಡ ನಡುವೆ ನೂತನ ರೈಲು ಮಾರ್ಗ ನಿಮರ್ಾಣಕ್ಕೆ ಅವಶ್ಯವೆನಿಸಿರುವ ಕಿತ್ತೂರ-ಬೆಳಗಾವಿ ನಡುವಿನ ಮಾರ್ಗದಲ್ಲಿ ಭೂಸ್ವಾಧೀನ ಸಮೀಕ್ಷೆ ಕಾರ್ಯವನ್ನು ಕೂಡಲೆ ರೇಲ್ವೆ ಇಲಾಖೆ ಅಧಿಕಾರಿಗಳು ಪ್ರಾರಂಭಿಸುವಂತೆ ಬೆಳಗಾವಿ ಸಂಸದೆ ಶ್ರೀಮತಿ ಮಂಗಲ ಸುರೇಶ ಅಂಗಡಿ ಹುಬ್ಬಳ್ಳಿಯ ನೈರುತ್ಯ ವಲಯ ರೇಲ್ವೆ ಮಹಾ-ಪ್ರಬಂಧಕ ಸಂಜೀವ ಕಿಶೋರಿ ಅವರಿಗೆ ಮನವಿ ಮಾಡಿಕೊಂಡರು, ಬೆಳಗಾವಿ-ಕಿತ್ತೂರ-ಧಾರವಾಡ ನಡುವಿನ ಸುಮಾರು 73 ಕಿ ಮೀ ಉದ್ದಕ್ಕೆರೈಲು ಮಾರ್ಗ ನಿರ್ಮಾಣ ಕ್ಕೆ ಕೇಂದ್ರ ಸರಕಾರವು ಸೆಪ್ಟೆಂಬರ್-2019 ರಲ್ಲಿ…

Read More
error: Content is protected !!