2023
ಪಾಲಿಕೆ ಆಯುಕ್ತರ ದೌಡ..!
ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತ ಅಶೋಕ ದುಡಗುಂಟಿ ಅವರ ಬೆಳ್ಖಂ ಬೆಳಿಗ್ಗೆ ಸಿಟಿರೌಂಡ್ ಹಾಕಿದರು. ಸದಾಶಿವ ನಗರದಲ್ಲಿನ ವಾಹನ ಶಾಖೆಗೆ ತೆರಳಿ, ಚಾಲಕರ ಹಾಜರಾತಿ ಪರಿಶೀಲನೆ ಮಾಡಿದರು. ನಂತರ ಅಂಬೇಡ್ಕರ್ ಗಾರ್ಡನ್ ಗೆ ಭೇಟಿ ನೀಡಿ ಸ್ವಚ್ಛತೆ ಪರಿಶೀಲಿಸಿ ಅಲ್ಲಿರುವ ನೀರಿನ ಟ್ಯಾಂಕರ ಸ್ವಚ್ಛತೆಯನ್ನು ಕಾಪಾಡಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಿದರು.. ಕೊತವಾಲಗಲ್ಲಿಯ ಭಾಜಿ ಮಾರ್ಕೆಟ್ ಅಲ್ಲಿನ ಸ್ವಚ್ಛತೆಯನ್ನು ಪರಿಶೀಲಿಸಿದರು.ಅಷ್ಟೇ ಅಲ್ಲ ಪೌರಕಾರ್ಮಿಕರಿಗೆ ಸುರಕ್ಷಿತ ಪರಿಕರಣಗಳನ್ನು ನಿರಂತರ ಉಪಯೋಗಿಸಬೇಕೆಂದು ನಿರ್ದೇಶನ ನೀಡಿದರು. ಪ್ರತಿದಿನ ರಾತ್ರಿ ತರಕಾರಿ ತ್ಯಾಜ್ಯವನ್ನು ತೆರವುಗೊಳಿಸಬೇಕೆಂದು…
ಯತ್ನಾಳ, ಕಾಶಪ್ಪನವರ ಯಾಕೆ ಬರಲಿಲ್ಲ?
ಬೆಳಗಾವಿ. ರಾಜ್ಯದಲ್ಲಿ ಈಗಮತ್ತೇ 2 ಎ ಮೀಸಲಾತಿಗೆ ಪಂಚಮಸಾಲಿ ಹೋರಾಟ ಮುನ್ನಲೆಗೆ ಬರ್ತಿದೆ. ಆದರೆ ಈ ಹಿಂದೆ ಹೋರಾಟದ ಮುಂಚೂಣಿಯಲ್ಲಿದ್ದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಗೈರು ಹಾಜರಿ ವಿಭಿನ್ನ ಚರ್ಚೆಗೆ ಕಾಣವಾಗಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಂಗಳೂರಿನಲ್ಲಿ ಕೊನೆಗೊಂಡ ಈ ಮೀಸಲಾತಿ ಹೋರಾಟ ಕಳೆದ ದಿನ ನಿಪ್ಪಾಣಿಯಲ್ಲಿ ಇಷ್ಟಲಿಂಗ ಪೂಜೆ ಮೂಲಕ ಆರಂಭಗೊಂಡಿತು. ಈ ಸಂದರ್ಭದಲ್ಲಿ ಇವರಿಬ್ಬರ ಗೈರು ಎದ್ದು ಕಂಡಿತು. ಹಿಂದಿನ ಹೋರಾಟ ದಲ್ಲಿ ವೀರಾವೇಶದ…
ಪತ್ರಕರ್ತರ ಸಹಕಾರಿ ಸಂಘಕ್ಕೆ ಆಯ್ಕೆ
ಬೆಂಗಳೂರು. ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಚುನಾವಣೆಯಲ್ಲಿ ಸಂಯುಕ್ತ ಕರ್ನಾಟಕದ ಕೆ.ವಿ ಪರಮೇಶ ಸೇರಿದಂತೆ 13 ಜನ ಆಯ್ಕೆಯಾಗಿದ್ದಾರೆ. ಇದರಲ್ಲಿ 5 ಜನ ಅವಿರೋಧ ಆಯ್ಕೆಯಾಗಿದ್ದಾರೆ. ಆನಂದ ಪರಮೇಶ್ವರ ಬೈದನಮನೆ, ರಮೇಶ ಎಂ (ಪಾಳ್ಯ}. ಧ್ಯಾನ ಪೂನಚ್ಚ, ಮೋಹನಕುಮಾರ ಬಿಎನ್. ಕೃಷ್ಣಕುಮಾರ ಪಿಎಸ್, ವಿನೋದ್ ಕುಮಾರ್ ಬಿನಾಯಕ್, ಸೋಮಶೇಖರ್ ಎಸ್, ಎಂ ಎಸ್ ರಾಜೇಂದ್ರ ಕುಮಾರ್, ರಮೇಶ್ ಬಿ, ದೊಡ್ಡಬೊಮ್ಮಯ್ಯ, ಪರಮೇಶ್ ಕೆವಿ, ನೈನಾ ಎಸ್ ವನಿತಾ ಎನ್ ಆಯ್ಕೆಯಾದವರು
ಪಂಚಮಸಾಲಿ ಮೀಸಲಾತಿ- ಸಿಎಂಗೆ ಮನವರಿಕೆ
ಪಂಚಮಸಾಲಿ ಮೀಸಲಾತಿ ಕುರಿತು ಮಂಗಳವಾರ ಸಿಎಂ ಜೊತೆ ಚರ್ಚೆ – ಲಕ್ಷ್ಮೀ ಹೆಬ್ಬಾಳಕರ್ನಿಪ್ಪಾಣಿ: ಸಮಾಜದ ಯಾವುದೇ ಕೆಲಸದಲ್ಲಿ ನಾನು ಸಮಾಜದ ಮಗಳಾಗಿ ನಿರಂತರ ಇರುತ್ತೇನೆ. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡುವ ವಿಚಾರದಲ್ಲಿ ಸ್ವಾಮಿಗಳ ಅಪೇಕ್ಷೆಯಂತೆ ಸಮಾಜ ಮತ್ತು ಸರಕಾರದ ಕೊಂಡಿಯಾಗಿ ಕೆಲಸ ಮಾಡುತ್ತೇನೆ. ಮಂಗಳವಾರ ಈ ಕುರಿತು ಮುಖ್ಯಮಂತ್ರಿಗಳ ಜೊತೆ ಸಮಗ್ರವಾಗಿ ಚರ್ಚಿಸುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದ್ದಾರೆ. ನಿಪ್ಪಾಣಿಯಲ್ಲಿ ಭಾನುವಾರ 2 ಎ ಮೀಸಲಾತಿ ಸಂಬಂಧ…
ಬೆಳಗಾವಿ, ಹುಬ್ಬಳ್ಳಿಗೆ ರಕ್ಷಿತ್ ಶೆಟ್ಟಿ
ರವಿವಾರ ರಕ್ಷಿತ್ ಶೆಟ್ಟಿ ಹುಬ್ಬಳ್ಳಿ-ಧಾರವಾಡ, ಬೆಳಗಾವಿಗೆ ಭೇಟಿ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ವಿಜಯ ಯಾತ್ರೆ ಅಂಗವಾಗಿ ಇಂದು ಹುಬ್ಬಳ್ಳಿಯ ಅರ್ಬನ್ ಒಯಾಸಿಸ್ ಮಾಲ್‌ನ ಸಿನಿಪೊಲೀಸ್‌ಗೆ ಬೆಳಿಗ್ಗೆ 9:50ರ ಶೋ, ಧಾರವಾಡನ ಸಿಟಿ ಮಾಲ್ ಐನಾಕ್ಸ್ಗೆ 12:00 ಗಂಟೆ ಶೋ ಹಾಗೂ ಬೆಳಗಾವಿ ಕಪೀಲ್ ನ್ಯೂಕ್ಷಿಯಸ್ ಮಾಲ್‌ಗೆ 3:30 ಶೋನಲ್ಲಿ ನಾಯಕ ನಟ ರಕ್ಷಿತ್ ಶೆಟ್ಟಿ, ನಾಯಕಿ ರುಕ್ಮಿಣಿ ವಸಂತ್ ಹಾಗೂ ನಿರ್ದೇಶಕ ಹೇಮಂತ ರಾವ್ ಭೇಟಿ ನೀಡಿ ಪ್ರೇಕ್ಷಕರೊಂದಿಗೆ ಸಂತಸ ಹಂಚಿಕೊಳ್ಳಲಿದ್ದಾರೆ. ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ…
138 ಪಿಕೆ ನೇಮಕ ರದ್ದು?
ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ತೀವೃ ಚರ್ಚೆಯ ವಸ್ತುವಾಗಿರುವ 138 ಪೌರ ಕಾರ್ಮಿಕರ ನೇಮಕಾತಿ ಪ್ರಕ್ರಿಯೆಯನ್ನು ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ರದ್ದುಗೊಳಿಸಿದ್ದಾರೆ. ಈ 138 ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ಪ್ರಕ್ರಿಯೆ ಸಂಬಂಧಿಸಿದಂತೆ ವ್ಯಾಪಕ ಚರ್ಚೆ ನಡೆದಿತ್ತು. ಅಷ್ಟೇ ಅಲ್ಲ ಹಲವು ದೂರುಗಳೂ ಸಹ ಕೇಳಿ ಬಂದಿದ್ದವು. ಇಲ್ಲಿ ಪಾಲಿಕೆ ಸಭೆಯ ಅನುಮತಿ ಮುನ್ನವೇ ಅವರನ್ಬು ಯಾವುದೇ ಆದೇಶವಿಲ್ಲದೇ ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು ಎನ್ನುವ ದೂರು ಆಯುಕ್ತರ ಬಾಗಿಲು ತಟ್ಟಿತ್ತು. ಈ ಹಿನ್ನೆಲೆಯಲ್ಲಿ ಆಯುಕ್ತರು ಈ ಸಂಬಂಧ ಮಧ್ಯಂತರ ವರದಿ…
ತಮಿಳನಾಡು ಸಚಿವರ ವಿರುದ್ಧ ಕ್ರಮಕ್ಕೆ ಬ್ರಾಹ್ಮಣರ ಮನವಿ
ಬೆಳಗಾವಿಯಲ್ಲಿ ಇಂದು ಎಕೆಬಿಎಂಎಸ್ ಸೂಚನೆ ಹಿನ್ನೆಲೆಯಲ್ಲಿ ಟಿಳಕವಾಡಿ ಪೊಲೀಸ್ ಠಾಣೆಯ ಸಿಪಿಐ ದಯಾನಂದ ಶೇಗುಣಸಿ ಅವರಿಗೆ ತಮಿಳುನಾಡಿನ ಡಿಎಂಕೆ ಸಚಿವ ಉದಯನಿಧಿ ಸ್ಡಾಲಿನ್ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಪತ್ರ ಅರ್ಪಿಸಲಾಯಿತು. ಎಕೆಬಿಎಂಎಸ್ ಸಂಘಟನಾ ಕಾರ್ಯದರ್ಶಿಗಳಾದ ವಿಲಾಸ ಜೋಶಿ, ಪ್ರಿಯಾ ಪುರಾಣಿಕ ನಗರಸೇವಕಿ ವಾಣಿ ಜೋಶಿ. ಅರವಿಂದ ಹುನಗುಂದ, ಅನಿಲ ಕುಲಕರ್ಣಿ, ಅಕ್ಷಯ ಕುಲಕರ್ಣಿ, ವಿಕ್ರಮ ಪಾಟೀಲ , ಪ್ರಜ್ವಲ್ ಕುಲಕರ್ಣಿ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು In Belgaum today, following…
ಮಧ್ಯಪ್ರದೇಶ ಸಿಎಂರಿಂದ ಹಾರನಹಳ್ಳಿಯವರಿಗೆ ಆಹ್ವಾನ
ಏಕಾತ್ಮಧಾಮ್ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ ಸಿಎಂ. ಸೆ. 18 ರಂದು ನಡೆಯುವ ಕಾರ್ಯಕ್ರಮ. ಮಧ್ಯಪ್ರದೇಶ ಸಿಎಂ ರಿಂದ ಹಾರನಹಳ್ಳಿಯವರಿಗೆ ಪತ್ರ.. ಮಧ್ಯಪ್ರದೇಶ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆದ್ಯಕ್ಷರೂ ಆಗಿರುವ ಹಿರಿಯ ನ್ಯಾಯವಾದಿ ಅಶೋಕ ಹಾರನಹಳ್ಳಿಯವರಿಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜಸಿಂಗ್ ಚವ್ಹಾಣ ಆಮಂತ್ರಣ ನೀಡಿದ್ದಾರೆ.ಆದಿ ಶಂಕರಾಚಾರ್ಯರ ಜೀವನ ಮತ್ತು ದರ್ಶನವು ಅಸಂಖ್ಯಾತ ತಲೆಮಾರುಗಳ ಮೂಲಕ ಜಗತ್ತಿಗೆ ದಾರಿದೀಪವಾಗಿ ಉಳಿಯಬೇಕು ಎನ್ನುವ ನಿಟ್ಟಿನಲ್ಲಿ ಮಧ್ಯಪ್ರದೇಶ ಸರ್ಕಾರವು ‘ಏಕಾತ್ಮ ಧಾಮ್’ ಎಂಬ ಹೆಸರಿನ ಏಕತೆಯ ಭವ್ಯವಾದ ಸಾರ್ವತ್ರಿಕ ಕೇಂದ್ರವನ್ನು ಸ್ಥಾಪಿಸಲು…
ಬೌಬೌ ಲೆಕ್ಕ ತಪ್ಪಿಸಿದ್ಯಾರು?
ಬೆಳಗಾವಿ. . ಕೇವಲ ಒಂದು ವರ್ಷದಲ್ಲಿ 2202 ಬೀದಿ ನಾಯಿಗಳನ್ನು ಹಿಡಿದು ಶಸ್ತ್ರ ಚಿಕಿತ್ಸೆ ಮಾಡಲು ಪಾಲಿಕೆ ಖರ್ಚು ಮಾಡಿದ್ದು ಬರೋಬ್ವರಿ 25 ಲಕ್ಷ 4 ಸಾವಿರದಾ 370 ರೂ.! ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದರಲ್ಲೂ ಕೃಷ್ಣನ ಲೆಕ್ಕ ಸೇರಿದೆ ಎನ್ನುವ ಅನುಮಾನ ಬಾರದೇ ಇರದು.ಈ ಲೆಕ್ಕವನ್ನು ಗಮನಿಸಿದರೆ ಪಾಲಿಕೆಯಲ್ಲಿ ಬೌಬೌ ಲೆಕ್ಕ ದಾರಿತಪ್ಪಿದೆ ಎನ್ನುವ ಸಂಶಯ ಮೂಡುವುದು ಸಹಜ.ಪಾಲಿಕೆ ವ್ಯಾಪ್ತಿಯಲ್ಲಿ ದಿನವೊಂದಕ್ಕೆ ಕನಿಷ್ಟ 10 ರಿಂದ 15 ಬೀದಿ ನಾಯಿಗಳನ್ನು ಹಿಡಿಯಲಾಗುತ್ತದೆ ಅಂತೆ. . ಆದರೆ…

