ಗಟ್ಟಿ ಧ್ವನಿ ಕಣ್ಮರೆಯಾಗಿ ಇಂದಿಗೆ ಒಂದು ವರ್ಷ..
ಬೆಳಗಾವಿ.ಉತ್ತರ ಕರ್ನಾಟಕದ ನೇರ ನುಡಿಯ ಗಟ್ಟಿ ರಾಜಕಾರಣಿ ಎಂದರೆ ಥಟ್ಟನೆ ನೆನಪಿಗೆ ಬರುವ ಹೆಸರು ಉಮೇಶ್ ಕತ್ತಿ,ಅಂತಹ ರಾಜಕಾರಣಿ ಕಣ್ಮರೆಯಾಗಿ ನಾಳೆ ದಿ. 6 ರಂದು ಬರೊಬ್ಬರಿ ಒಂದು ವರ್ಷ, ಈಗಲೂ ಉತ್ತರ ಕರ್ನಾಟಕ ಅಭಿವೃದ್ಧಿ ವಿಷಯ ಬಂದಾಗ ಎಲ್ಲರೂ ಉಮೇಶ್ ಕತ್ತಿ ಅವರ ಹೆಸರನ್ನು ನೆನಪಿಸಿಕೊಳ್ಳುತ್ತಾರೆ. ಪ್ರತ್ಯೇಕ ರಾಜ್ಯದ ಅಭಿವೃದ್ಧಿ ವಿಷಯ ಬಂದಾಗ ಯಾವುದೇ ಸರ್ಕಾರವಿದ್ದರೂ ತಮ್ಮ ಕೂಗನ್ನು ಎಂದಿಗೂ ತಗ್ಗಿಸುವ ಕೆಲಸ ಮಾಡಲೇ ಇಲ್ಲ. ಕೆಲವರು ಪ್ರತ್ಯೇಕತೆಯ ಕೂಗಿನ ಬಗ್ಗೆ ಅಪಸ್ವರ ಎತ್ತಿದರೂ ಅದಕ್ಕೆ…

