Headlines

ಶಾಂತಾರಾಮ ಹೆಗಡೆ ಇನ್ನಿಲ್ಲ..

ಶಿರಸಿ.ಸಹಕಾರಿ ಮತ್ತು‌ ಸಾರ್ವಜನಿಕ ಕ್ಷೇತ್ರದಲ್ಲಿ ತಮ್ಮದೇ ವರ್ಚಸ್ಸು ಹೊಂದಿದ್ದ ಶಾಂತಾರಾಮ ಹೆಗಡೆ ಶೀಗೆಹಳ್ಖಿ ಅವರು ನಿಧನರಾಗಿದ್ದಾರೆ. . ಸರಳ ಮತ್ತು ಸಜ್ಜನ ವ್ಯಕ್ತಿಯಾಗಿದ್ದ ಶಾಂತರಾಮ್ ಹೆಗಡೆಯವರು ಸಹಕಾರಿ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಬಹಳಷ್ಟು ಸೇವೆ ಮಾಡಿದ್ದಾರೆ. ಮೃತರ ನಿಧನಕ್ಕೆ ಅಖಿಲ ಕರ್ನಾಟಕ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಸಂತಾಪ ವ್ಯಕ್ತ ಪಡಿಸಿದ್ದಾರೆ.

Read More

ಫೆ.4ರಂದು ಬೃಹತ್ ಜನ ಜಾಗೃತಿ ಸಮಾವೇಶ:

ಅಂಬಿಗರ ಚೌಡಯ್ಯನವರ 904ನೇ ಜಯಂತಿ ಆಚರಣೆ. ಫೆ.4ರಂದು ಬೃಹತ್ ಜನಜಾಗೃತಿ ಸಮಾವೇಶ: ಸಾಯಬಣ್ಣಾ ತಳವಾರ ಬೆಳಗಾವಿ: ನಿಜಶರಣ ಅಂಬಿಗರ ಚೌಡಯ್ಯ ನವರ 904ನೇ ಜಯಂತಿ ನಿಮಿತ್ತ ಫೆ. 4ರಂದು ನಗರದ ಸರ್ದಾ‌ರ್ ಮೈದಾನದಲ್ಲಿ ಬೃಹತ್ ಜನಜಾಗೃತಿ ಸ್ವಾಭಿಮಾನ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕೋಳಿ-ಬೆಸ್ತ ಸಮಾಜದ ಸಂಘದ ಜಿಲ್ಲಾ ಗೌರವಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ಸಾಯಿಬಣ್ಣ ತಳವಾರ ತಿಳಿಸಿದರು.ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 4ರಂದು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ…

Read More

ಬರ ನಿರ್ವಹಣೆಗೆ ಸಿದ್ಧತೆ

ಜಿಲ್ಲೆಯ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಬರ ನಿರ್ವಹಣೆ: ಅಗತ್ಯ ಸಿದ್ಧತೆಗೆ ಸಚಿವ ಕೃಷ್ಣ ಭೈರೇಗೌಡ ಸೂಚನೆ ಬೆಳಗಾವಿ, ಜ.31(ಕರ್ನಾಟಕ ವಾರ್ತೆ): ಕುಡಿಯುವ ನೀರು ಕೊರತೆ ಕಂಡುಬಂದಾಗ ತಕ್ಷಣವೇ ನೀರು ಪೂರೈಸಲು ಅನುಕೂಲವಾಗುವಂತೆ ಖಾಸಗಿ ಕೊಳವೆಬಾವಿಗಳ ಮಾಲೀಕರೊಂದಿಗೆ ಮುಂಚಿತವಾಗಿಯೇ ಒಪ್ಪಂದ ಮಾಡಿಕೊಳ್ಳಬೇಕು. ಪ್ರತಿ ಪಂಚಾಯಿತಿ ಮಟ್ಟದಲ್ಲಿ ಒಂದು ಸಮಿತಿಯನ್ನು ರಚಿಸಿ ಕುಡಿಯುವ ನೀರು ಪೂರೈಕೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಸಚಿವ ಕೃಷ್ಣ ಭೈರೇಗೌಡ ಸೂಚನೆ ನೀಡಿದರು. ಸುವರ್ಣ ವಿಧಾನಸೌಧದ ಸೆಂಟ್ರಲ್ ಸಭಾಂಗಣದಲ್ಲಿ ಬುಧವಾರ(ಜ.31) ನಡೆದ ಕಂದಾಯ…

Read More

ಬೆಳಗಾವಿಯ ಬಡಿಗೇರಗೆ ಒಲಿದ ಪ್ರಶಸ್ತಿ..!

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ,(KUWJ) ಕೆಯುಡಬ್ಲ್ಯುಜೆ ವಾರ್ಷಿಕ ಪ್ರಶಸ್ತಿಗಳು ಬೆಂಗಳೂರು.ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ(ಕೆಯುಡಬ್ಲ್ಯೂಜೆ) 2022-23 ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ದಾವಣಗೆರೆಯಲ್ಲಿ ಇದೇ ಫೆ. 3 ಮತ್ತು 4 ರಂದು ನಡೆಯುವ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ತಿಳಿಸಿದ್ದಾರೆ. ಪ್ರಶಸ್ತಿಗಳ ವಿವರ: 12.ಬಿ.ಜಿ.ತಿಮ್ಮಪ್ಪಯ್ಯ ಪ್ರಶಸ್ತಿ (ಆರ್ಥಿಕ ದುರ್ಬಲ ವರ್ಗದವರ ಕುರಿತ ಅತ್ಯುತ್ತಮ ವರದಿಗೆ) ಶಶಿಕಾಂತ್ ಎಸ್.ಶಂಬಳ್ಳಿ, ಪ್ರಜಾವಾಣಿ, ಬೀದರ್ ಪ್ರಕಾಶ್ ಬಾಳಕ್ಕನವರ್,…

Read More

ಧರ್ಮಗಳನ್ನು ಗೌರವಿಸಿ

ಧರ್ಮಗಳನ್ನು ಗೌರವಿಸಿ, ಪ್ರೀತಿಸುವ ಭಾವನೆ ಬೆಳೆಸಿಕೊಳ್ಳಿ; ಕಾರಂಜಿಮಠದ ಗುರುಸಿದ್ದ ಶ್ರೀ ಸೌಹಾರ್ದ ಮಾನವ ಸರಪಳಿ ಅಭಿಯಾನಕ್ಕೆ ಕೈ ಜೋಡಿಸಿದ ನೂರಾರು ಜನರು ಬೆಳಗಾವಿ: ದೇಶದ ಏಳಿಗೆಗಾಗಿ ನಾವೆಲ್ಲರೂ ಶ್ರಮಿಸೋಣ. ಧರ್ಮಗಳನ್ನು ಗೌರವಿಸಿ, ಪ್ರೀತಿಸುವ ಭಾವನೆಯನ್ನು ಬೆಳಿಸಿಕೊಂಡು ಒಗ್ಗಟ್ಟಾಗಿ ನಿಲ್ಲೋಣ. ಧರ್ಮಗಳ ಹೂದೋಟವಾಗಿರುವ ದೇಶದಲ್ಲಿ ಸೌಹಾರ್ದತೆಯಿಂದ ಬದುಕಿನ ಮಾತ್ರ ಪರಂಪರೆ ಬೇರು ಉಳಿಯಲು ಸಾಧ್ಯ ಎಂದು ಎಂದು ಕಾರಂಜಿಮಠದ ಗುರುಸಿದ್ದ ಮಹಾಸ್ವಾಮಿಗಳು ಹೇಳಿದರು. ಇಲ್ಲಿನ ‌ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ಆಯೋಜಿಸಲಾದ ಸೌಹಾರ್ದ ಕರ್ನಾಟಕ ವೇದಿಕೆಯ ಮಹಾತ್ಮ ಗಾಂಧೀಜಿಯವರ…

Read More

ಗಾಂಧಿಜಿ ಕೊಂದಿದ್ದು ಶ್ರೀರಾಮನ ಭಕ್ತನೇ.. ಸಿಎಂ

ಶ್ರೀರಾಮ ಬಗ್ಗೆ ಅಪಾರ ನಂಬಿಕೆ ಇದ್ದ ರಾಮಭಕ್ತ ಗಾಂಧಿಯನ್ನು ಕೊಂದಿದ್ದು ಗೋಡ್ಸೆ: ಮುಖ್ಯಮಂತ್ರಿ ಸಿದ್ದರಾಮಯ್ಯ ರಘುಪತಿ ರಾಘವ ರಾಜಾರಾಮ್ ಗಾಂಧಿ ಅವರಿಗೆ ಪ್ರಿಯವಾಗಿತ್ತು. ಇದು ಕಾಂಗ್ರೆಸ್ಸಿಗರಿಗೆಲ್ಲಾ ಇಷ್ಟವಾದ ಭಜನೆ: ಸಿ.ಎಂ.ಸಿದ್ದರಾಮಯ್ಯ ಬೆಂಗಳೂರು, ಎಲ್ಲ ಜಾತಿಧರ್ಮದವರು ಸೌಹಾರ್ದತೆಯಿಂದ ಬಾಳಬೇಕೆಂಬ ಕನಸನ್ನು ಕಂಡಿದ್ದ ಮಹಾತ್ಮಾ ಗಾಂಧೀಜಿಯವರು ಎಲ್ಲರನ್ನೂ ಸಮಾನವಾಗಿ ಕಾಣುವ, ಎಲ್ಲರಿಗೂ ನ್ಯಾಯವನ್ನು ಒದಗಿಸುವುದೇ ಅವರ ರಾಮರಾಜ್ಯದ ಪರಿಕಲ್ಪನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ವಿಧಾನಸೌಧದಲ್ಲಿ ಮಹಾತ್ಮಾಗಾಂಧೀಜಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಇಂದು…

Read More

ರಾಜ್ಯ ಸರ್ಕಾರ ಮನೆಗೆ ಕಳುಹಿಸುವುದೇ ಬಿಜೆಪಿ ಗ್ಯಾರೆಂಟಿ

ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ೨೮ ಸ್ಥಾನ ಗೆದ್ದರೆಒಂದು ತಿಂಗಳಲ್ಲಿ ರಾಜ್ಯ ಸರ್ಕಾರ ಮನೆಗೆ ಕಳುಹಿಸುವುದೇ ಬಿಜೆಪಿ ಗ್ಯಾರೆಂಟಿ : ಬಸವರಾಜ ಬೊಮ್ಮಾಯಿ ಕೋಲಾರ: ರಾಜ್ಯದಲ್ಲಿ ೨೮ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ ಈ ಸರ್ಕಾರವನ್ನು ಒಂದು ತಿಂಗಳಲ್ಲಿ ಮನೆಗೆ ಕಳುಹಿಸುವ ಗ್ಯಾರೆಂಟಿ ನಾವು ಕೊಡುತ್ತೇವೆ. ಕಾಂಗ್ರೆಸ್‌ನ ಐದು ಗ್ಯಾರೆಂಟಿಗೆ ನಮ್ಮದು ಒಂದೇ ಗ್ಯಾರೆಂಟಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಬಿಜೆಪಿ ವತಿಯಿಂದ ಕೋಲಾರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ…

Read More

ಕಾಂತರಾಜ ವರದಿ ಸ್ವೀಕಾರ ರಾಜಕೀಯ ಸ್ಟಂಟ್

ಕಾಂತರಾಜ ವರದಿ ಸ್ವೀಕಾರ ರಾಜಕೀಯ ಸ್ಟಂಟ್: ಬಸವರಾಜ ಬೊಮ್ಮಾಯಿಬಲಾಢ್ಯ ಹಿಂದುಳಿದವರು ಮಾತ್ರ ಮೀಸಲಾತಿ ಲಾಭ ಪಡೆದುಕೊಳ್ಳುತ್ತಿದ್ದಾರೆ: ಬಸವರಾಜ ಬೊಮ್ಮಾಯಿ ಕೋಲಾರ: ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜ ವರದಿ ಸ್ವೀಕಾರ ಮಾಡುವುದು ಕೇವಲ ಲೋಕಸಭೆ ಚುನಾವಣೆಯ ಸ್ಟಂಟ್ ಆಗಿದ್ದು, ಹಿಂದುಳಿದವರಲ್ಲಿ ಬಲಾಢ್ಯರು ಮಾತ್ರ ಮೀಸಲಾತಿ ಲಾಭ ಪಡೆಯುತ್ತಿದ್ದಾರೆ. ಅತಿ ಹಿಂದುಳಿದವರಿಗೆ ನ್ಯಾಯಕೊಡಿಸಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ಕೋಲಾರದಲ್ಲಿ ಇಂದು ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಬೃಹತ್ ಪ್ರತಿಭಟನೆಗೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ…

Read More

ರಾಜ್ಯಸಭೆ ಚುನಾವಣೆ: ಡಿಕೆಶಿ ತಂತ್ರ ಕುತೂಹಲ

5 ನೇ ಅಭ್ಯರ್ಥಿ ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ, ಕಾಂಗ್ರೆಸ್ ನಲ್ಲಿ ಹೆಚ್ಚಿದ ಪೈಪೋಟಿ. ಚುನಾವಣೆ ನಡೆದರೆ ಅಡ್ಡ ಮತದಾನ ಭೀತಿ ಕಾಡುತ್ತಿದೆ.ಮೊದಲನೇ ಪ್ರಾಶಸ್ತ್ಯದ ಮತಗಳಿಂದಲೇ ಕಾಂಗ್ರೆಸ್ ನ ಮೂವರು ಅಭ್ಯರ್ಥಿಗಳು ಗೆಲ್ಲಬಹುದು. ವಿಶೇಷ ವರದಿ ಬೆಂಗಳೂರುಬರುವ ಫೆಬ್ರವರಿ 27 ರಂದು ರಾಜ್ಯ ಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆಗೆ ಐದನೇ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಕಾಂಗ್ರೆಸ್ ಪರಿಶೀಲನೆ ನಡೆಸಿದೆ.ವಿವಿಧ ರಾಜ್ಯಗಳಿಂದ ಒಟ್ಟು 56 ಸ್ಥಾನಗಳಿಗೆ ಚುನಾವನೆ ನಡೆಯಲಿದ್ದು ಆಯಾ ರಾಜ್ಯಗಳ ವಿಧಾನಸಭೆಯ ಸದಸ್ಯರು ಮತದಾರರಾಗಿದ್ದಾರೆ. ಆ ಪೈಕಿ ಕರ್ನಾಟಕದಿಂದ…

Read More

ಮತ್ತೊಮ್ಮೆ ಮೋದಿ

ಬೆಳಗಾವಿ. ಮತ್ತೊಮ್ಮೆ ಮೋದಿ ಗೋಡೆ ಬರಹ ಸ್ಟೆನ್ಸಿಲ್ ನ್ನು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಬಿಡುಗಡೆ ಮಾಡಿದರು. ಬಿಜೆಪಿ ಮುಖಂಡ ಮುಕ್ತಾರ ಅಹ್ಮದ ಪಠಾಣ ಅವರು ಸಿದ್ಧಪಡಿಸಿದ್ದ ಈ ವಾಲ್ ಪೇಪರ್ ಸ್ಟೇನ್ಸಿಲನ್ನು ಸಂಸದರು ತಮ್ನ ಕಚೇರಿಯಲ್ಲಿ ಬಿಡುಗಡೆ ಮಾಡಿದರು. ಲೋಕಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುಚ ಬಿಜೆಪಿ, ಕೇಂದ್ರದ ಸಾಧನೆಗಳನ್ನು ಮನೆ ಮನೆ ತಲುಪಿಸುವ ಕೆಲಸವನ್ನು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಆಭಿಯಾನ ರೂಪದಲ್ಲಿ ವಿಶೇಷ ಯೋಜನೆಗಳನ್ನು ಬಿಜೆಪಿ ಹಮ್ನಿಕೊಂಡಿದೆ. ರಾಜ್ಯಸಭಾ ಸದಸ್ಯರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ…

Read More
error: Content is protected !!