ವಿಪ್ರ ಸಮ್ಮೇಳನ ಯಶಸ್ವಿ- ಅಭಿನಂದನೆ ಸಲ್ಲಿಸಿದ ಹಾರನಹಳ್ಳಿ

ಅಭಿಜಾತೆ 2024 ರಾಜ್ಯ ಮಟ್ಟದ ತೃತೀಯ ಮಹಿಳಾ ಸಮ್ಮೇಳನದಲ್ಲಿ ಪಾಲ್ಗೊಂಡ ಸಮಸ್ತ ವಿಪ್ರ ವೃಂದಕ್ಕೆ ಅನಂತಾನಂತ ಧನ್ಯವಾದಗಳು – ಶ್ರೀ ಅಶೋಕ ಹಾರನಹಳ್ಳಿ.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಆಯೋಜಿಸಿದ್ದ ರಾಜ್ಯಮಟ್ಟದ ಮಹಿಳಾ ಸಮಾವೇಶ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಈ ಸಮ್ಮೇಳನದ ದ ಹಿಂದೆ ಅನೇಕ ಪದಾಧಿಕಾರಿಗಳ ಹಾಗು ಕಾರ್ಯಕರ್ತರ ಶ್ರದ್ಧೆ ಶ್ರಮ ಇದೆ. ಅನೇಕ ತಿಂಗಳುಗಳಿಂದ ಹಗಲು ರಾತ್ರಿ ಈ ಸಮಾವೇಶದ ಯಶಸ್ಸಿಗೆ ನಮ್ಮ ಪದಾಧಿಕಾರಿಗಳು ಹಾಗು ಕಾರ್ಯಕರ್ತರು ಶ್ರಮ ವಹಿಸಿದ್ದಾರೆ. ಅಂತೆಯೇ ಕೆಲವು ಸಂಸ್ಥೆಗಳು ಹಾಗು ಸಂಸ್ಥೆಗಳ ಮೂಲಕ ಹಾಗು ವೈಯುಕ್ತಿಕವಾಗಿಯೂ ನಮ್ಮೊಡನೆ ಸಮ್ಮೇಳನದ ಯಶಸ್ಸಿಗೆ ಕೈ ಜೋಡಿಸಿದ್ದಾರೆ.

ಮುಖ್ಯವಾಗಿ ಅದ್ವೈತ ತತ್ವವಿಭೂಷಣ, ಗುರು ಸೇವಾಧುರೀಣ ಪದ್ಮಶ್ರೀ ಪುರಸ್ಕೃತ, ಶ್ರೀ ಶೃಂಗೇರಿ ಶಂಕರ ಮಠ ಆಡಳಿತಾಧಿಕಾರಿಗಳು ಡಾ|| ಗೌರಿಶಂಕರ್ , ಚಿಕ್ಕಪೇಟೆ ಶಾಸಕರು ಶ್ರೀ ಉದಯ್ ಗರುಡಾಚಾರ್, ಬಸವನಗುಡಿ ಶಾಸಕರು ಶ್ರೀ ರವಿ ಸುಬ್ರಮಣ್ಯ, ಜಯನಗರ ಶಾಸಕರು ಶ್ರೀ ಸಿ ಕೆ ರಾಮಮೂರ್ತಿ ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯರಾದ ಶ್ರೀ ತೇಜಸ್ವಿ ಸೂರ್ಯ, ಕರ್ನಾಟಕ ಬ್ಯಾಂಕ್ ಹಾಗು ಮೂರು ದಿನಗಳ ಕಾಲ ಊಟೋಪಚಾರದ ಪ್ರಾಯೋಜಕತ್ವ ವಹಿಸಿದ ಸಮಾಜಸೇವಕರು ಆದ ಶ್ರೀಮತಿ ಲಕ್ಶ್ಮೀ ಮಂಜುನಾಥ್ ಹಾಗು ರುಚಿಕರವಾಗಿ ಅಡುಗೆಯನ್ನು ಉಣ ಬಡಿಸಿದ ಶ್ರೀ ಶ್ರೀಧರ್ ಅವರು ಹಾಗು ಶಂಕರ ಮಠದ ಆವರಣದಲ್ಲಿ ಬ್ರಹತ್ ವೇದಿಕೆಯನ್ನು ಸೃಷ್ಟಿಸಿ ವೇದಿಕೆಗೊಂದು ಶೋಭೆ ತಂದುಕೊಟ್ಟ RRR ನ ಪ್ರಕಾಶ್ ಅವರ ಸಹಕಾರ ಅನನ್ಯವಾದುದು.

ಅದೇ ರೀತಿ ರಾಜ್ಯದ ನಾನಾ ಭಾಗಗಳಿಂದ 34 ಸಾಧಕರನ್ನು ಗುರುತಿಸಿ ಸಾಧಕರಿಗೆ “ಧೀ ಶಕ್ತಿ” ಪ್ರಶಸ್ತಿಯನ್ನು ಕೂಡ ಕೊಡಮಾಡಲಾಗಿದೆ , ಆ ಮೂಲಕ ಆ ಸಾಧಕಿಯರ ಪರಿಚಯ ಇಡೀ ರಾಜ್ಯಕ್ಕಾಗಲಿ ಹಾಗು ಅವರುಗಳು ನಡೆದು ಬಂದ ಹಾದಿಯಲ್ಲಿ ವಿಪ್ರ ಸಮುದಾಯ ಹೆಜ್ಜೆ ಇಡಲಿ ಎಂಬುದು ಇದರ ಆಶಯ, ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ವಿಪ್ರ ಸಮುದಾಯ ರಾಜ್ಯಕ್ಕೆ ಹಾಗು ದೇಶಕ್ಕೆ ಇನ್ನಷ್ಟು ಸಾಧಕಿಯರನ್ನು ಪರಿಚಯಿಸಲಿ ಎಂಬುದು ಮಹಾಸಭೆಯ ಹೆಬ್ಬಯಕೆ.

ಕರ್ನಾಟಕದ ಅನೇಕ ಜಿಲ್ಲೆಗಳಿಂದ ನಮ್ಮ ಮಹಿಳಾ ಸಂಚಾಲಕರುಗಳು ಅತ್ಯಂತ ಉತ್ಸಾಹದಿಂದ ಈ ಸಮಾವೇಶದಲ್ಲಿ ಭಾಗವಹಿಸಿದ್ದಾರೆ.ಉತ್ತರ ಕರ್ನಾಟಕದ ದೂರದ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದು ವಿಶೇಷ. ಸರಿ ಸುಮಾರು ಆರು ಸಾವಿರಕ್ಕೂ ಹೆಚ್ಚು ಅಧಿಕ ವಿಪ್ರಭಾಂಧವರು ಈ ಸಮಾವೇಶದಲ್ಲಿ ಎರಡು ದಿನಗಳ ಕಾಲ ಭಾಗವಹಿಸಿದ್ದು ಮಹಿಳಾ ಸಂಘಟನೆಗಷ್ಟೇ ಅಲ್ಲದೆ ಸಮಸ್ತ ವಿಪ್ರ ಸಮುದಾಯದ ಸಂಘಟನೆಗೆ ಹೊಸ ಭಾಷ್ಯ ಬರೆದಿದೆ ಎಂದರೆ ತಪ್ಪಾಗಲಾರದು. ಅದರಲ್ಲೂ ಎರಡನೇ ದಿನ ನಡೆದ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡ ವಿಪ್ರ ಮಹಿಳೆಯರ ವಿರಾಟ ಶಕ್ತಿ ಯನ್ನು ಇಡೀ ರಾಜ್ಯಕ್ಕೆ ತೋರಿಸಿಕೊಟ್ಟಿದೆ ಶೋಭಾ ಯಾತ್ರೆಯಲ್ಲಿ ನೆರೆದ ಮಹಿಳೆಯರ ಉತ್ಸಾಹ,ನೃತ್ಯ ಹಾಗು ಜೈ ಶ್ರೀರಾಮ್ ಎಂಬ ಜೈ ಜೈಕಾರ ಬಸವನಗುಡಿಯ, ಶಂಕರ ಮಠದ ಹಾಗು ಚಿಕ್ಕಪೇಟೆಯ ಇಕ್ಕೆಲೆಗಳಲ್ಲಿ ಒಂದು ರೀತಿಯ ಸಂಚಲನವನ್ನೇ ಸೃಷ್ಟಿಸಿತ್ತು ಎಂದರೆ ತಪ್ಪಾಗಲಾರದು . ಒಂದೆಡೆ ವಿಚಾರಗೋಷ್ಠಿ ಮತ್ತೊಂದೆಡೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಇನ್ನೊಂದು ಭಾಗದಲ್ಲಿ ಭಜನಾ ಸ್ಪರ್ಧೆ ಹೀಗೆ ಏರ್ಪಡಿಸಿದ್ದ ಮೂರು ವೇದಿಕೆಗಳಲ್ಲೂ ಅಭಿಜಾತೆಯರ ಸಕ್ರಿಯ ಪಾಲ್ಗೊಳ್ಳುವಿಕೆ ಎಲ್ಲರಲ್ಲೂ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು ಮತ್ತು ಮೂರು ವೇದಿಕೆಗಳಲ್ಲೂ ಕಿಕ್ಕಿರಿದ ಜನೋತ್ಸಮ್ ನಿಜಕ್ಕೂ ಎಲ್ಲರನ್ನು ಬೆರಗು ಗೊಳಿಸಿತ್ತು . ಇದರ ಮಧ್ಯೆ ನೂರಾರು ಸ್ಟಾಲ್ಗಳಲ್ಲಿ ಮಹಿಳೆಯರ ಅವಿರತ ವ್ಯಾಪಾರ, ಹೀಗೆ ಮಹಿಳಾ ಸಮ್ಮೇಳನದ ಈ ಯಶಸ್ಸು ಬಣ್ಣಿಸಲಸದಳ ಎಂದೇ ಹೇಳಬಹುದು ಮುಂದಿನ ದಿನಗಳಲ್ಲಿ ತಾವೆಲ್ಲರೂ ವಿಪ್ರ ಸಮಾಜದ ಏಳಿಗೆಗೆ ಇನ್ನಷ್ಟು ಸಕ್ರಿಯವಾಗಿ ಪಾಲ್ಗೊಳ್ಳಲಿದ್ದೀರಿ ಎಂಬ ನಂಬಿಕೆ ಈ ಸಮ್ಮೇಳನದಿಂದ ಮತ್ತಷ್ಟು ಗಟ್ಟಿಯಾಗಿದೆ ಈ ಮಹಿಳಾ ಸಮ್ಮೇಳನ ಮುಂದಿನ ದಿನಗಳಲ್ಲಿ ವಿಪ್ರ ಸಂಘಟನೆಗೊಂಡು ದಿಕ್ಸೂಚಿಯಾಗಲಿದೆ ಎಂದು ಭಾವಿಸುತ್ತ ಮಹಿಳಾ ಸಮ್ಮೇಳನದಲ್ಲಿ ಪಾಲ್ಗೊಂಡ ತಮಗೆಲ್ಲರಿಗೂ ಅನಂತಾನಂತ ಧನ್ಯವಾದಗಳು.

ವಿಶೇಷವಾಗಿ ಅವಿರತವಾಗಿ ಅಹರ್ನಿಶಿಯಾಗಿ ತಮ್ಮ ಮನೆಯ ಕಾರ್ಯಕ್ರಮವೆಂದೇ ಭಾವಿಸಿ ಹಲವು ದಿನಗಳ ಕಾಲ ಮನೆ ವಾರ್ತೆಗಳನ್ನು ಬದಿಗೊತ್ತಿ ಸೇವೆ ಸಲ್ಲಿಸಿದ್ದ ಸಮಸ್ತ ಕಾರ್ಯಕರ್ತ ವೃಂದಕ್ಕೆ ವಿಶೇಷ ಅಭಿನಂದನೆಗಳು ಹಾಗು ಅನಂತಾನಂತ ಧನ್ಯವಾದಗಳು .

ಅಶೋಕ ಹಾರನಹಳ್ಳಿ ,
ಅಧ್ಯಕ್ಷರು – ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ)

Leave a Reply

Your email address will not be published. Required fields are marked *

error: Content is protected !!