ಬೆಳಗಾವಿಯಲ್ಲಿ ರಾಮನ ಟ್ಯಾಟೋ ಗುಂಗು..!

ದೀಪಾವಳಿ ಸಡಗರ ತಂದ ರಾಮಮಂದಿರ ಲೋಕಾರ್ಪಣೆ.

5 ಲಕ್ಷ ಲಾಡು ವಿತರಣೆ. ದಕ್ಷಿಣ ಕ್ಷೇತ್ರದಲ್ಲಿ ರಾಮನ ಟ್ಯಾಟೊ ಹವಾ. ದೇವಸ್ಥಾನ ಸ್ವಚ್ಚತಾ ಅಭಿಯಾನ. ವಾರ್ಡ 43 ರಲ್ಲಿ ರಾಮನ ಧ್ವಜ ವಿತರಿಸಿದ ನಗರಸೇವಕಿ.

ಬೆಳಗಾವಿ.

ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮುಂದಾಳತ್ವ ಅಂದರೆ ಅದರಲ್ಲೊಂದು ವಿಶೇಷತೆ ಇರಲೇಬೇಕು. ಅದು ಸುಳ್ಳಲ್ಲ.

ಅದನ್ನು ಶಾಸಕ ಅಭಯ ಪಾಟೀಲರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ

ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಮತ್ತು ರಾಮ ಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಅವರು ತಮ್ಮ ಕ್ಷೇತ್ರದ ಪ್ರತಿ ಮನೆಗೆ ಮೋತಿಚೂರು ಲಾಡು ವಿತರಿಸುವ ಕೆಲಸವನ್ನು ಅತ್ಯಂತ ಯಶಸ್ವಿಯಾಗಿ ಮಾಡಿದ್ದಾರೆ.

ಇದರ ಜೊತೆಗೆ ಶ್ರೀರಾಮ ಟ್ಯಾಟೊವನ್ನು ಉಚಿತವಾಗಿ ಹಾಕಿಸಿಕೊಳ್ಳುವ ಅವಕಾಶವನ್ನು ಕ್ಷೇತ್ರದ ಜನರಿಗೆ ಒದಗಿಸಿಕೊಟ್ಟಿದ್ದಾರೆ..

ಅದಕ್ಕೆ ಹೇಳೋದು ಅಭಯ ಅಂದ್ರೆನೇ ಸ್ಪೇಷಲ್…! ಅವರು ಕೈಗೆತ್ತಿಕೊಂಡಿರುವ ಇಂತಹ ಕೆಲಸಗಳಲ್ಲಿ ರಾಜಿ ಎನ್ನುವುದೇ ಇರಲ್ಲ.

ಜನೇವರಿ 22 .ರಾಮ ಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಬೆಳಗಾವಿ ದೀಪಾವಳಿಯಂತೆ ಸಿಂಗಾರಗೊಳ್ಳುತ್ತಿದೆ.
ಇಡೀ ಬೆಳಗಾವಿಯನ್ನು ರಾಮ ಮಯ ಮಾಡುವುದರ ಜೊತೆಗೆ ದೇವಸ್ಥಾನಗಳ ಸ್ವಚ್ಚತಾ ಅಭಿಯಾನ, ಶ್ರೀರಾಮನ ಭಾವಚಿತ್ರವಿರುವ ಧ್ವಜಗಳ ಮಾರಾಟ, ಪ್ರತಿ ಮನೆ ಮನೆಗೆ ಲಾಡು ವಿತರಣೆ ವ್ಯವಸ್ಥಿತವಾಗಿ ನಡೆದಿದೆ.


ಒಂದು ರೀತಿಯಲ್ಲಿ ದೀಪಾವಳಿ ಸಡಗರದಂತೆ ರಾಮನ ಪ್ರತಿಷ್ಠಾಪನೆ ದಿನವನ್ನು ಆಚರಿಸಲಾಗುತ್ತಿದೆ, ಅದಕ್ಕೆ ಎಲ್ಲ ಸಿದ್ಧತೆಗಳನ್ನು ರಾಮಭಕ್ತರು ಮಾಡಿ ಕೊಳ್ಳುತ್ತಿದ್ದಾರೆ,
ಸಂಘ ಪರಿವಾರದವರೂ ಕೂಡ ಈ ಐತಿಹಾಸಿಕ ಕ್ಷಣದ ಸಿದ್ಧತೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ,
ಬೆಳಗಾವಿಯ ಪಾಂಗುಳಗಲ್ಲಿಯಲ್ಲಿ ಸಧ್ಯ ಕಾಲಿಡಲು ಆಗದಷ್ಟು ಜನ ಸಂದಣಿ ಇದೆ, ಅಲ್ಲಿ ರಾಮನ ಭಾವಚಿತ್ರವಿರುವ ಧ್ವಜಗಳನ್ನು ಮಾರಾಟ ಮಾಡಲಾಗುತ್ತಿದೆ, ಈ ಧ್ವಜಗಳ ಬೇಡಿಕೆ ಸಿಕ್ಕಾಪಟ್ಟೆ ಹೆಚ್ಚಾಗಿದೆ,
ಬೆಳಗಾವಿಯಲ್ಲಿ ತಮಗೆ ಬೇಕಾದಷ್ಟು ಧ್ವಜಗಳು ಸಿಗುತ್ತಿಲ್ಲ ಎನ್ನುವ ಕಾರಣದಿಂದ ಪಕ್ಕದ ಹುಬ್ಬಳ್ಳಿ ಅಷ್ಟೇ ಅಲ್ಲ ಮಹಾರಾಷ್ಟ್ರದ ಈಚರಕರಂಜಿಯಿಂದಲೂ ಧ್ವಜಗಳನ್ನು ತಂದು ಬೆಳಗಾವಿಯನ್ನು ರಾಮಮಯ ಮಾಡುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ,

ರಾಮನ ಟ್ಯಾಟೋ’
ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಶ್ರೀರಾಮನ ಭಾವಚಿತ್ರವಿರುವ ಟ್ಯಾಟೋಗೆ ಭಾರೀ ಬೇಡಿಕೆ ಬರುತ್ತಿದೆ,
ಜನರ ನಾಡಿ ಮಿಡಿತವನ್ನು ಅರಿತ ಶಾಸಕ ಅಭಯ ಪಾಟೀಲರು ತಮ್ಮ ದಕ್ಷಿಣ ಕ್ಷೇತ್ರದಲ್ಲಿ ಉಚಿತವಾಗಿ ಟ್ಯಾಟೋ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ, ಅದಕ್ಕಾಗಿಯೇ ಬೇರೆ ಬೇರೆ ಕಡೆಗೆ ಆರೇಳು ಜನರು ಈ ಕೆಲಸದಲ್ಲಿ ನಿರತರಾಗಿದ್ದಾರೆ, ಇಲ್ಲಿ ಮಹಿಳೆಯರಿಗೆ ಪ್ರತ್ಯೇಕವಾಗಿ ಮಹಿಳೆಯರೇ ಟ್ಯಾಟೋ ಹಾಕುತ್ತಿದ್ದಾರೆ,


ಫೋರ್ಟ ರೋಡದಲ್ಲಿರುವ ಶಾಸಕರ ಕಚೇರಿಯಲ್ಲಿಯೇ ಕಳೆದ ಮೂರು ದಿನಗಳಿಂದ ಟ್ಯಾಟೋ ಹಾಕುವ ಕೆಲಸ ನಡೆಯುತ್ತಿದೆ,. ಟ್ಯಾಟೊ ಯಾರು ಹಾಕಿಸಿಕೊಳ್ಳಬಹುದು ಎನ್ನುವ ಸೂಚನೆಯನ್ನು ಸಹ ನೀಡಲಾಗಿದೆ. ಆಸಕ್ತರು ತಮ್ಮ ಆಧಾರ ಕಾರ್ಡನ್ನು ನಿಗದಿಪಡಿಸಿದ ವಾಟ್ಸಪ್ ನಂಬರಿಗೆ ಕಳಿಸಿದರೆ ಟ್ಯಾಟೊ ಹಾಕಿಸಿಕೊಳ್ಳಲು ದಿನಾಂಕ ಸಮಯ ಎಲ್ಲವೂ ಮೇಸೆಜ್ ರೂಪದಲ್ಲಿ ಬರುತ್ತದೆ, ಅ ಸಮಯಕ್ಕೆ ಹೋದರೆ ಟ್ಯಾಟೋವನ್ನು ಉಚಿತವಾಗಿ ಹಾಕಿಸಿಕೊಳ್ಳಬಹುದಾಗಿದೆ
,.

ಸಧ್ಯ ಇದಕ್ಕೆ ಬೇಡಿಕೆ ಹೆಚ್ಚುತ್ತಿದ್ದು ಅದರ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತಾರ ಮಾಡುವ ಚಿಂತನೆ ಇದೆ ಎಂದು ಶಾಸಕರು ಹೇಳಿದ್ದಾರೆ.

ಗ್ರಾಮೀಣ ಕೇಸರಿಮಯ..!
ಪಟ್ಟಣ ಪ್ರದೇಶಕ್ಕಿಂತಲೂ ಗ್ರಾಮೀಣ ಪ್ರದೇಶದಲ್ಲಿ ರಾಮ ಲಲ್ಲಾ ಪ್ರತಿಷ್ಠಾಪನೆ ದಿನವನ್ನು ಸಡಗರ ಸಂಭ್ರಮದಿಂದ ಆಚರಿಸಲು ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ,


ಅಚ್ಚರಿ ಸಂಗತಿ ಎಂದರೆಮ, ಗ್ರಾಮೀಣದಲ್ಲಿ ಯಾವುದೇ ಪಕ್ಷ, ಜಾತಿ, ಭಾಷೆಯನ್ನು ಮೀರಿ ಎಲ್ಲರೂ ಈ ಸಂಭ್ರಮದಲ್ಲಿ ಭಾಗಿಯಾಗುತ್ತಿದ್ದಾರೆ,

ಬೆಳಗಾವಿ ಗ್ರಾಮೀಣ ಪ್ರದೇಶದ ಹಿರೇಬಾಗೇವಾಡಿಯನ್ನೇ ಗಮನಿಸಿದರೆ ರಾಮಭಕ್ತರ ಉತ್ಸಾಹ ಎಷ್ಟಿದೆ ಎನ್ನುವುದು ಗೊತ್ತಾಗುತ್ತದೆ,

ಅಲ್ಲಿನ ಜನರೇ ಸ್ವಯಂ ಸ್ಪೂರ್ತಿಯಿಂದ ಇಡೀ ಊರನ್ನು ಕೇಸರಿಮಯ ಮಾಡಿದ್ದಾರೆ, ಇತ್ತೀಚೆಗೆ ಗ್ರಾಮದ ಹನುಮಾನ ಮಂದಿರದಲ್ಲಿ ಅತ್ಯಂತ ಭಕ್ತಿಪೂರ್ವಕವಾಗಿ ಮಂತ್ರಾಕ್ಷತೆಯನ್ನು ಗ್ರಾಮದ ಮನೆ ಮನೆಗೆ ತಲುಪಿಸುವ ಕೆಲಸವನ್ನು ಅಲ್ಲಿನ ಜನರು ಮಾಡಿದರು.

5 ಲಕ್ಷ ಲಾಡು ವಿತರಣೆ
ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಮತ್ತು ರಾಮಲಲ್ಲಾ ಮೂತರ್ಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಶಾಸಕ ಅಭಯ ಪಾಟೀಲರ ನೇತೃತ್ವದಲ್ಲಿ ದಕ್ಷಿಣ ಕ್ಷೇತ್ರದ 85 ಸಾವಿರ ಕುಟುಂಬಗಳಿಗೆ ಮೋತಿಚೂರು ಲಾಡು ವಿತರಿಸುವ ಕೆಲಸ ಭರ್ಜರಿಯಾಗಿ ನಡೆದಿದೆ
ಆಯಾ ವಾರ್ಡನ ನಗರಸೇವಕರೇ ಖುದ್ದು ಮನೆ ಮನೆಗೆ ತೆರಳಿ ಲಾಡು ವಿತರಿಸುವ ಕೆಲಸವನ್ನು ಶಿಸ್ತುಬ್ದಧವಾಗಿ ಮಾಡುತ್ತಿದ್ದಾರೆ,

ದೇವಸ್ಥಾನ ಸ್ವಚ್ಚತಾ ಅಭಿಯಾನ
ಗಮನಿಸಬೇಕಾದ ಸಂಗತಿ ಎಂದರೆ, ಪ್ರಧಾನಿ ನರೇಂದ್ರ ಮೋದಿ ಅವರು ದೇವಸ್ಥಾನ ಸ್ವಚ್ಚತಾ ಅಭಿಯಾನ ಆರಂಭಿಸಿದ ಬೆನ್ನ ಹಿಂದೆಯೇ ರಾಜ್ಯದ ಎಲ್ಲೆಡೆ ಕೂಡ ಅದೇ ಮಾದರಿ ಕೆಲಸ ನಡೆಯುತ್ತಿದೆ,
ನಿಪ್ಪಾಣಿಯಲ್ಲಿ ಶಶಿಕಲಾ ಜೊಲ್ಲೆ ಸೇರಿದಂತೆ ಬಹುತೇಕ ಬಿಜೆಪಿ ಶಾಸಕರು ಈ ಸ್ವಚ್ಚತಾ ಅಭಿಯಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ,
ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ನಗರಸೇವಕರು ತಮ್ಮ ತಮ್ಮ ವಾರ್ಡಗಳಲ್ಲಿ ಬರುವ ದೇವಸ್ಥಾನವನ್ನುಸ್ವಚ್ಚಗೊಳಿಸುವ ಕೆಲಸ ನಡೆಸಿದ್ದಾರೆ,
ಬೆಳಗಾವಿ ವಾರ್ಡ ನಂಬರ 43 ರಲ್ಲಿ ಬರುವ ದೇವಸ್ಥಾನವನ್ನು ಅಲ್ಲಿರುವ ರಾಮಭಕ್ತರೊಂದಿಗೆ ಕೂಡಿಕೊಂಡು ನಗರ ಯೋಜನೆ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿ ಜೋಶಿ ಮತ್ತು ವಾರ್ಡ ನಂಬರ 24 ರ ನಗರಸೇವಕ ಗಿರಿಶ ಧೋಂಗಡಿ ಈ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದು ಕಂಡು ಬಂದಿತು,


ಜೊತೆಗೆ, ಶ್ರೀರಾಮನ ಭಾವಚಿತ್ರ ಇರುವ ಧ್ವಜಗಳನ್ನೂ ಕೂಡ ರಾಮಸೇವಕರಿಗೆ ಉಚಿತವಾಗಿ ವಿತರಿಸುವ ಕೈಂಕರ್ಯವನ್ನು ಕೆಲ ನಗರಸೇವಕರು ಆರಂಭಿಸಿದ್ದಾರೆ.
ರಾಘವೇಂದ್ರ ಕಟ್ಟಿಯವರ ನೇತೃತ್ವದ ಸಪ್ತಗಿರಿ ಸೇವಾ ಪ್ರತಿಷ್ಠಾನದ ವತಿಯಿಂದ ಜ.22ರಂದು ಲಕ್ಷ ದೀಪಗಳ ಪ್ರಜ್ವಲನೆಗೆ ತಯಾರಿ ಮಾಡಿಕೊಳ್ಳಲಾಗಿದೆ. ಪ್ರತಿ ಮನೆಯಲ್ಲಿ ಮನೆಯ ಮುಂದೆ ದೀಪಗಳ ಪ್ರಜ್ವಲನೆ ನಡೆಯಲಿದೆ. ಅಲ್ಲದೇ, ಎಲ್ಲ ದೇಗುಲಗಳಲ್ಲಿಯೂ ಕೂಡ ಅಂದಿನ ಭವ್ಯ ಮಂದಿರದ ಲೋಕಾರ್ಪಣೆ ಕಾರ್ಯಕ್ರಮವನ್ನು ಎಲ್ ಇಡಿ ಪರದೆ ಮೂಲಕ ಭಿತ್ತರಿಸಲೂ ಕೂಡ ವ್ಯವಸ್ಥೆ ಮಾಡಲಾಗಿದೆ.
ಇದರ ಜೊತೆಗೆ ದಿ, 22 ರಂದು ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ರಾಮನಾಮ ಜಪವನ್ನು ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ

Leave a Reply

Your email address will not be published. Required fields are marked *

error: Content is protected !!