ಎಪ್ರಿಲ್ 16 ಕ್ಕೆ ಲೋಕಸಭೆ ಚುನಾವಣೆ?
ನವದೆಹಲಿ. ಲೋಕಸಭೆ ಚುನಾವಣೆಗೆ ಬಹುತೇಕ ಮುಹೂರ್ತ ಫಿಕ್ಸ್ ಆದಂತೆ ಕಾಣುತ್ತಿದೆ. ಒಟ್ಟು 5 ಹಂತದಲ್ಲಿ ಚುನಾವಣೆ ನಡೆಯಬಹುದು ಎನ್ನಲಾಗುತ್ತಿದೆ. ಕರ್ನಾಟಕ ದಲ್ಲಿ ಬಹುತೇಕವಾಗಿ ಏಪ್ರಿಲ್ 16 ಕ್ಕೆ ಚುನಾವಣೆ ನಡೆಯಬಹುದು ಎನ್ನುಲಾಗುತ್ತಿದೆ. ಈಗಾಗಲೇ ಈ ಹಿನ್ನೆಲೆಯಲ್ಲಿ ಎಲ್ಲ ತಯಾರಿ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ಬಂದಿದೆ ಎಂದು ಗೊತ್ತಾಗಿದೆ. ಇನ್ನೊಂದೆರಡು ದಿನಗಳಲ್ಲಿ ಈ ಸಂಬಂಧ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ಸಿಗಬಹುದು ಎನ್ನಲಾಗುತ್ತಿದೆ.