ಬೆಳಗಾವಿ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಗೋಕಾಕ್ ಪ್ರಿನ್ಸಿಪಲ್ ಮತ್ತು ಸಿವಿಲ್ ನ್ಯಾಯಾಧೀಶರು ಬೆಳಗಾವಿ ಪೊಲೀಸ್ ಆಯುಕ್ತರಿಗೆ ಶೋಕಾಜ್ ನೋಟೀಸ್ ಜಾರಿ ಮಾಡಿದ್ದಾರೆ.
ಗೋಕಾಕದ ಗಾಂಧಿನಗರ ನಿವಾಸಿ ಲಕ್ಷ್ಮೀ ಚನ್ನಪ್ಪ ಪಾಟೀಲ (30) ಅವರು ನೀಡಿದ ದೂರಿನ ಬಗ್ಗೆ ಹಮಗೋಕಾಕ ಕೋರ್ಟ್ ಆರೋಪ ಹೊತ್ತ ಬೆಳಗಾವಿ ತಾಲೂಕಿನ ಬಾಳೇಉಂದ್ರಿನಿಚಾಸಿ ಆಯಿಷಾ ಮಹಮ್ಮಗೌಸ್ ಸನದಿ (38) ಇವರಿಗೆ NBW ಜಾರಿ ಮಾಡಿತ್ತು.

ಸಿಸಿ ನಂಬರ 6598/22 ರಲ್ಲಿ ಈ ಕುರಿತಂತೆ ರಿಜುಸ್ಟರ್ ಮೂಲಕ ಬೆಳಗಾವಿ ಪೊಲೀಸ್ ಆಯುಕ್ತರಿಗೆ ಪತ್ರವನ್ಬು ಕೋರ್ಟ ಕಳಿಸಿತ್ತು.
ಆದರೆ ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರು ಅದಕ್ಕೆ ಉತ್ತರ ಕೊಟ್ಟಿಲ್ಲ.ಬದಲಾಗಿ ಅದನ್ಬು ಜಾರಿ ಸಹ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಆಯುಕ್ತರಿಗೆ ಶೋಕಾಜ್ ನೋಟೀಸನ್ಬು ಜಾರಿ ಮಾಡಲಾಗಿದೆ. ಪ್ರಕರಣದ ವಿಚಾರಣೆಯನ್ನು 17 Feb 2024 ಗೆ ಮುಂದೂಡಿದೆ. ಇದರಲ್ಲಿ ಆರೋಪ ಹೊತ್ತವರು ಕಾಂಗ್ರೆಸ್ ಬ ಪಕ್ಷದ ಪದಾಧಿಕಾರಿಯಾಗಿದ್ದಾರೆ.