Headlines

ಬೆಳಗಾವಿಯಲ್ಲಿ ಕನ್ನಡ ನಾಟಕಕ್ಕೆ ಪೊಲೀಸರದ್ದೇ ಕಿರಿಕ್..!

ಸರ್ಕಾರದ ಆಶಯಕ್ಕೆ ಎಳ್ಳುನೀರು.. ಕನ್ನಡ ನಾಡು‌ ನುಡಿ ಬೆಳವಣಿಗೆಗೆ ಅಡ್ಡಿ
ಕನ್ನಡ ನಾಟಕಕ್ಕೆ ಪೊಲೀಸರದ್ದೇ ಕಿರಿಕ್…!

ಎರಡು ದಿನ ಪ್ರಷಾರಕ್ಕೆ ಗೋಗರೆದ ಕಲಾವಿದೆ

ಆಟೋ ದಲ್ಲಿ ಧ್ವನಿ ವರ್ಧಕ ಮೂಲಕ ಅನುಮತಿ ಕೊಡಲು ಸತಾಯಿಸಿದ ಡಿಸಿಪಿ

ಸರ್ಕಾರದ ಶುಲ್ಕ ತುಂಬಿದರೂ ಡೋಂಟ್ ಕೇರ್ ಎಂದ ಡಿಸಿಪಿ.

ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕಣ್ಣೀರು ಸುರಿಸಿದ ಕನ್ನಡ ವೃತ್ತಿ ರಂಗಭೂಮಿ ಕಲಾವಿದೆ


ಬೆಳಗಾವಿ.
ಗಡಿನಾಡ ಬೆಳಗಾವಿಯಲ್ಲಿ ಕನ್ನಡ ನಾಡು, ನುಡಿಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕು ಎನ್ನುವ ನಿಟ್ಟಿನಲ್ಲಿ ರಾಜ್ಯ ಸಕರ್ಾರದ ಪ್ರಯತ್ನಕ್ಕೆ ಪೊಲೀಸರು ಎಳ್ಳು ನೀರು ಬಿಡುವ ಕೆಲಸವನ್ನು ಮಾಡುತ್ತಿದ್ದಾರೆಯೇ?


ಕನ್ನಡ ನಾಟಕ ಪ್ರದರ್ಶನದ ಪ್ರಚಾರಕ್ಕೆ ಅನುಮತಿ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿ ಡಿಸಿಪಿ ಜಗದೀಶ ರೋಹನ್ ಅವರು ನಡೆದುಕೊಂಡ ರೀತಿ ಈಗ ಚಚರ್ೆಯ ವಸ್ತುವಾಗಿ ಬಿಟ್ಟಿದೆ, ಅಷ್ಟೇ ಅಲ್ಲ ಸಕರ್ಾರದ ಕನ್ನಡ ಪ್ರೇಮವನ್ನೇ ಪ್ರಶ್ನೆ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ,
ಕನ್ನಡ ನಾಡು ನುಡಿಯ ಬೆಳವಣಿಗೆ ಬಗ್ಗೆ ಉದಾರತೆ ಹೊಂದಬೇಕಾಗಿದ್ದ ಬೆಳಗಾವಿ ನಗರ ಪೊಲೀಸರ ಈ ಕ್ರಮದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮುಜುಗುರ ತರುವಂತಾಗಿದೆ,

ಬಡ ಕಲಾವಿದೆಯೊಬ್ಬಳು ತನ್ನ ಮಗಳ ಮದುವೆ ಸಲುವಾಗಿ ಕನ್ನಡ ನಾಟಕ ಪ್ರದರ್ಶನಕ್ಕೆ ಮುಂದಾದಾಗ ಅದರ ಪ್ರಚಾರಕ್ಕೆ ಅನುಮತಿ ನೀಡಲು ಡಿಸಿಪಿಯವರು ನಾಳೆ ಬಾ ಎನ್ನುವಂತೆ ವತರ್ಿಸಿದ್ದು ಈಗ ಚಚರ್ೆಯ ವಸ್ತುವಾಗಿದೆ, ಅಷ್ಟೇ ಅಲ್ಲ ಪೊಲೀಸ್ ಅಧಿಕಾರಿಗಳ ಈ ವಿಳಂಬ ನೀತಿಯಿಂದ ಬಡಕಲಾವಿದೆ ಕಣ್ಣೀರಿನಲ್ಲಿ ಕೈತೊಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿತು.

ಏನಿದು ಕಿರಿಕಿರಿ?
ಬೆಳಗಾವಿಯ ಲೋಕಮಾನ್ಯ ರಂಗಮಂದಿರದಲ್ಲಿ ಇದೇ ದಿ. 18 ರಂದು ವಸಂತ ಕಲಾ ನಾಟ್ಯ ಸಂಘದ ಶ್ರೀಮತಿ ಭಾರತಿ ಎಂಬುವರು ತಮ್ಮ ಮಗಳ ಮದುವೆ ಸಹಾಯಾರ್ಥ ಸತಿ ಸಂಸಾರದ ಜ್ಯೋತಿ ಎನ್ನುವ ಕನ್ನಡ ನಾಟಕ ಪ್ರದರ್ಶನಕ್ಕೆ ಮುಂದಾಗಿದ್ದರು,


ಈ ಹಿನ್ನೆಲೆಯಲ್ಲಿ ನಾಟಕದ ಕುರಿತು ಆಟೋದಲ್ಲಿ ಧ್ವನಿ ವರ್ಧಕರ ಮೂಲಕ ಕೇವಲ 16 ಮತ್ತು 17 ರಂದು ಎರಡು ದಿನ ಪ್ರಚಾರ ಮಾಡಲು ಅನುಮತಿ ಕೋರಿ ಪೊಲೀಸ್ ಆಯುಕ್ತರಿಗೆ ಕಳೆದ ದಿ. 12 ರಂದು ಪತ್ರವನ್ನು ನೀಡಿದ್ದರು, ಅಷ್ಟೇ ಅಲ್ಲ ಅದಕ್ಕೆ ಸಂಬಂಧಿಸಿದಂತೆ ಬೆಳಗಾವಿ ಒನ್ ದಲ್ಲಿ ಚಲನ್ ಮೂಲಕ ಶುಲ್ಕವನ್ನು ಕೂಡ ಭರ್ತಿ ಮಾಡಿ ಅದರ ರಶೀದಿ ಸಹ ಕೊಟ್ಟಿದ್ದರು.

ಆಟೋದಲ್ಲಿ ಪ್ರಚಾರಕ್ಕೆಂದು ರ್ಕಾರಿ ಶುಲ್ಕ ಕಟ್ಟಿದ ದಾಖಲೆ.


ಆದರೆ ಪೊಲೀಸ್ ಆಯುಕ್ತರ ಕಚೇರಿಯಿಂದ ಮಾತ್ರ ಯಾವುದೇ ಅನುಮತಿ ಬರಲೇ ಇಲ್ಲ. ಇದರಿಂದ ಬೇಸತ್ತ ಕಲಾವಿದೆ ನೇರವಾಗಿ ಇಂದು ಬೆಳಿಗ್ಗೆ ಪೊಲೀಸ್ ಆಯುಕ್ತರ ಕಚೇರಿಯ ಡಿಸಿಪಿ ಅವರನ್ನು ಭೆಟ್ಟಿ ಮಾಡಿದ್ದಾರೆ, ನಾಟಕ ಯಾವ ಉದ್ದೇಶದಿಂದ ಮಾಡುತ್ತಿದ್ದೇವೆ ಎನ್ನುವುದನ್ನೂ ವಿವರಿಸಿದ್ದಾರೆ, ಆದರೆ ಡಿಸಿಪಿ ಸಾಹೇಬರ ಮನಸ್ಸು ಮಾತ್ರ ಕರಗಲೇ ಇಲ್ಲ.
ಕೊನೆಗೆ ಅನುಮತಿ ಕೋರಿ ಕಡತ ತೆಗೆದುಕೊಂಡು ಹೋಗಿದ್ದ ಸಿಬ್ಬಂದಿ ಮೇಲೆಯೇ ಕಲಾವಿದೆ ಮುಂದೆ ಗರಂ ಕೂಡ ಆಗಿದ್ದಾರೆ, ಈ ಸಂದರ್ಭದಲ್ಲಿ ಕಣ್ಣಿರು ಹಾಕಿದ ಕಲಾವಿದೆ ಪರಿಪರಿಯಾಗಿ ಬೇಡಿಕೊಂಡರೂ ಡಿಸಿಪಿಯವರು ನನಗೆ ಬೇರೆ ಕೆಲಸವಿದೆ ಎಂದು ಹೇಳಿ ಸಾಗ ಹಾಕಿದ್ದಾರೆ, ಆದರೂ ಆ ಕಲಾವಿದೆ ಡಿಸಿಪಿ ಸಾಹೇಬರ ಮನಸ್ಸು ಕರಗಿ ಅನುಮತಿ ಕೊಡಬಹುದು ಎಂದು ಕಾದು ಕುಳಿತರು, ಕೊನೆಗೆ ಹೊರಗೆ ಹೋಗುವಾಗ ಈ ಕಲಾವಿದೆಯನ್ನು ಕಂಡು ನಾನು ಪರಿಶೀಲನೆ ಮಾಡುತ್ತೇನೆ ಎಂದು ಹೇಳಿ ಕಳಿಸಿದರು ಎಂದು ಗೊತ್ತಾಗಿದೆ.
ಅಂದರೆ ಗಡಿ ಭಾಗದಲ್ಲಿ ಕನ್ನಡ ನಾಟಕ ಪ್ರದರ್ಶನಕ್ಕೆ ಇಷ್ಟೊಂದು ಅನಗತ್ಯ ಕಿರಿಕಿರಿಯನ್ನು ಗಮನಿಸಿದರೆ ಬೆಳಗಾವಿ ಯಾವ ರಾಜ್ಯದಲ್ಲಿದೆ ಎನ್ನುವುದು ಗೊತ್ತಾಗದ ಪರಿಸ್ಥಿತಿ ಬಂದೊದಗಿದೆ,

Leave a Reply

Your email address will not be published. Required fields are marked *

error: Content is protected !!