ಬಜೆಟ್ ಅನುಮೋದನೆಗೆ ವಿರೋಧ ಪಕ್ಷದಚರ ಆಕ್ಷೇಪ. ಇದು ಆಡಳಿತ ಪಕ್ಷದವರ ಬಜೆಟ್ ಅಲ್ಲ. ಇದು ಸರ್ವಜನಾಂಗದ ಬಜೆಟ್ ಎಂದು ಹನುಮಂತ ಕೊಂಗಾಲಿ
ಬೆಳಗಾವಿ.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ೨೦೨೪-೨೫ ನೇ ಸಾಲಿಗೆ ಸುಮಾರು ೭ ಲಕ್ಷ ೭೨ ಸಾವಿರ ಉಳಿತಾಯ ಬಜೆಟ್ ನ್ನು ಕಂದಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾ ವಿಜಾಪುರೆ ಮಂಡಿಸಿದರು.
*2024-25 ನೇ ಸಾಲಿನ ಮಹಾನಗರ ಪಾಲಿಕೆಯ ಅಂದಾಜು
ಆಯವ್ಯಯದ ಮುಖ್ಯಾಂಶಗಳು.*
ಈ ಸನ್ 2024-25 ನೇ ಸಾಲಿನ ಆಯವ್ಯಯವನ್ನು ಮಹಾನಗರ ಪಾಲಿಕೆ ಬೆಳಗಾವಿಯ ಸರ್ವತೋಮುಖ ಅಭಿವೃದ್ಧಿಗಾಗಿ ಹಾಗೂ ನಗರದ ಎಲ್ಲ ವರ್ಗದ ನಾಗರೀಕರನ್ನು ಗಮನದಲ್ಲಿರಿಸಿ ರೂಪಿಸಲಾಗಿದೆ. ಬೆಳಗಾವಿಯು ಸುಂದರ ನಗರವನ್ನಾಗಿಡಲು ಹಾಗೂ ಉತ್ತಮ ಪರಿಸರವನ್ನು ಹೊಂದಲು ಜನಪರ ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಮುಖ್ಯವಾಗಿ ಹಿರಿಯ ನಾಗರೀಕರು, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳೆಯರು, ಶಾಲಾ ಮಕ್ಕಳ ಹಾಗೂ ದಿವ್ಯಾಂಗರ ಅನುಕೂಲಕ್ಕಾಗಿ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ಮಾರ್ಟ ಸಿಟಿ ಯೋಜನೆಯೊಂದಿಗೆ ನಗರದ ವೃತ್ತಗಳನ್ನು ಮತ್ತು ರಸ್ತೆಗಳನ್ನು ಮತ್ತು ಬಸ್ ತಂಗುದಾಣಗಳನ್ನು ಸುಂದರೀಕರಣಗೊಳಿಸುವದು ಪ್ರಮುಖ ಯೋಜನೆಗಳಾಗಿವೆ. ನಗರದಲ್ಲಿ ದಿನನಿತ್ಯದ ವಾಹನ ಸಂಚಾರ ದಟ್ಟಣೆಯನ್ನು ಸರಿದೂಗಿಸಲು ಖಾಲಿ ಸ್ಥಳಗಳನ್ನು ತಂಗುದಾಣಗಳಿಗಾಗಿ ಮತ್ತು ಮಾರುಕಟ್ಟೆಗಳಿಗಾಗಿ ಮಾರ್ಪಡಿಸಿ ಪಾಲಿಕೆಯ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಜನಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹಾಗೂ ನಗರದ ಗಣ್ಯವ್ಯಕ್ತಿಗಳಿಂದ ಸಲಹೆ ಸೂಚನೆಗಳನ್ನು ಪಡೆದು ಬೆಳಗಾವಿ ಸಮಗ್ರ ಅಭಿವೃದ್ಧಿಯಾಗುವ ಕನಸನ್ನು ನನಸಾಗಿಸುವ ಪಥದತ್ತ ಸಾಗುವದು ಈ ಅಂದಾಜು ಆಯವ್ಯಯದ ಪ್ರಮುಖ ವಿಷಯಗಳು.

1 ಮಹಾನಗರ ಪಾಲಿಕೆಯ 2024-25 ಸಾಲಿನಲ್ಲಿ ರೂ.43,661.35 ಲಕ್ಷಗಳಷ್ಟು ಅಂದಾಜು ಆದಾಯ ನಿರೀಕ್ಷಿಸಲಾಗಿದೆ.
2 ಮಹಾನಗರ ಪಾಲಿಕೆಯ 2024-25 ಸಾಲಿನಲ್ಲಿ ರೂ.43,653.63 ಲಕ್ಷಗಳಷ್ಟು ಅಂದಾಜು ವೆಚ್ಚ ಭರಿಸಲು ನಿರೀಕ್ಷಿಸಲಾಗಿದೆ.
3 ಮಹಾನಗರ ಪಾಲಿಕೆಯ 2024-25 ಸಾಲಿನಲ್ಲಿ ರೂ.7.72 ಲಕ್ಷಗಳಷ್ಟು ಉಳಿತಾಯ ಆಯವ್ಯಯವನ್ನು ಮಂಡಿಸಲಾಗಿದೆ.
ಅಂದಾಜು ಸ್ವೀಕೃತಿಗಳು
1 ಪಾಲಿಕೆಯ ವ್ಯಾಪ್ತಿಯಲ್ಲಿ ಒಳಪಡುವ ಆಸ್ತಿಗಳಿಂದ ಸಂಗ್ರಹಿಸುವ ಆಸ್ತಿ ತೆರಿಗೆ ಅಂದಾಜು ರೂ.7350.20 ಲಕ್ಷಗಳು ನಿಗಧಿಪಡಿಸಿದೆ.
2 ಕಟ್ಟಡ ಪರವಾನಿಗೆಯಿಂದ ರೂ.200.00 ಲಕ್ಷಗಳಷ್ಟು ಆದಾಯ ನಿರೀಕ್ಷಿಸಲಾಗಿದೆ.
3 ಕಟ್ಟಡ ಪರವಾನಿಗೆಯಿಂದ ಅಭಿವೃದ್ಧಿ ಶುಲ್ಕ, ಸುಧಾರಣೆ ಶುಲ್ಕ ದಿಂದ ರೂ.1025.00 ಲಕ್ಷಗಳಷ್ಟು ನಿರೀಕ್ಷಿಸಲಾಗಿದೆ.
4 ಅವಶೇಷ ನಿರ್ಮೂಲನೆಗಳಿಂದ ರೂ. 230.00 ಲಕ್ಷಗಳಷ್ಟು ನಿರೀಕ್ಷಿಸಲಾಗಿದೆ.
5 ಹೆಸ್ಕಾಂ ಇಲಾಖೆಯಿಂದ ಕೇಬಲ್ ಹಾಕುವ ಶುಲ್ಕ ರೂ.1700.00 ಲಕ್ಷಗಳಷ್ಟು ಆದಾಯ ಮರು
ನಿಗಧಿಪಡಿಸಲಾಗಿದೆ.
6
ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಅಗತದಿಂದ ರೂ. 125.00 ಲಕ್ಷಗಳಷ್ಟು ಆದಾಯ
ನಿರೀಕ್ಷಿಸಲಾಗಿದೆ.
7 ಘನತ್ಯಾಜ್ಯ ವಸ್ತು ನಿರ್ವಹಣೆಯಿಂದ ಸಂಗ್ರಹಿಸುವ ಮೊತ್ತ ರೂ.800.00 ಲಕ್ಷಗಳಷ್ಟು ಆದಾಯ ನಿರೀಕ್ಷಿಸಲಾಗಿದೆ.
8 ಸ್ಥಿರಾಸ್ತಿಗಳ ನೋಂದಣಿಯಿಂದ ಅದಿಭಾರ ಶುಲ್ಕ ರೂ.110.00 ಲಕ್ಷಗಳಷ್ಟು ನೋಂದಣಿ ಇಲಾಖೆಯಿಂದ ನಿರೀಕ್ಷೆ ಮಾಡಲಾಗಿದೆ.
ಆಸ್ತಿಗಳ ವರ್ಗಾವಣೆ ಫೀ, ದಂಡಗಳಿಂದ ಅಂದಾಜು ಸ್ವೀಕೃತಿ ಮೊತ್ತ ರೂ.550.00 ಗಳಷ್ಟು
ಆದಾಯ ನಿರೀಕ್ಷೆ ಮಾಡಲಾಗಿದೆ.
10 ಮೂಲಭೂತ ಸೌಕರ್ಯಗಳಿಂದ ರೂ.50.00 ಲಕ್ಷಗಳಷ್ಟು ಆದಾಯ ನಿರೀಕ್ಷೆ ಮಾಡಲಾಗಿದೆ.
11
ರಾಜ್ಯ ಸರ್ಕಾರದಿಂದ ಬಿಡುಗಡೆಯಾಗುವ ಪಾಲಿಕೆಯ ನೌಕರರ ವೇತನಕ್ಕಾಗಿ 8113.77
ಲಕ್ಷಗಳಷ್ಟು ವೇತನ ಅನುದಾನ ನಿರೀಕ್ಷೆ ಮಾಡಲಾಗಿದೆ. ಎಸ್.ಎಫ್.ಸಿ ಮುಕ್ತ ನಿಧಿ ಅನುದಾನದಡಿಯಲ್ಲಿ ರೂ.630.00 ಲಕ್ಷಗಳಷ್ಟು ನಿರೀಕ್ಷೆ ಮಾಡಲಾಗಿದೆ. ಸದರಿ ಮೊತ್ತವನ್ನು ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ವಯ ಶೇ.29% ರಷ್ಟು ಹಾಗೂ ಹೊರಗುತ್ತಿಗೆ ಪೌರಕಾರ್ಮಿಕರ ವೇತನಕ್ಕಾಗಿ ಬಳಸಲಾಗುವುದು. 12
13 ಎಸ್.ಎಫ್.ಸಿ ವಿದ್ಯುತಶಕ್ತಿ ಅನುದಾನ ರೂ.6690.00 ಲಕ್ಷಗಳಷ್ಟು ಅನುದಾನವನ್ನು ನಿರೀಕ್ಷೆ ಮಾಡಲಾಗಿದ್ದು, ಬಿಡುಗಡೆಯಾದ ಮೊತ್ತವನ್ನು ವಿದ್ಯುತಶಕ್ತಿ ಇಲಾಖೆಗೆ ನೇರವಾಗಿ ಭರಿಸಲಾಗುವುದು.
14 ಪಾಲಿಕೆಯ ಖುಲ್ಲಾ ಜಾಗೆಗಳ ಮಾರಾಟದಿಂದ ರೂ.1050.00 ಲಕ್ಷಗಳಷ್ಟು ಅಂದಾಜು ನಿರೀಕ್ಷೆ ಮಾಡಲಾಗಿದೆ.
ಹೀಗೆ ಒಟ್ಟಾರೆ ರೂ. 43,661.35 ಲಕ್ಷಗಳಷ್ಟು (ರೂ.ನಲವತ್ತೂರು ಸಾವಿರದಾ ಆರು ನೂರಾ ಅರವತ್ತೋಂದು ಲಕ್ಷ ಮೂವತ್ತೈದು ಸಾವಿರಗಳು ಮಾತ್ರ) ಆದಾಯ ನಿರೀಕ್ಷೆ ಮಾಡಲಾಗಿದೆ.
ಅಂದಾಜು ವೆಚ್ಚಗಳು
ರಾಜ್ಯ ಸರ್ಕಾರದಿಂದ ಬಿಡುಗಡೆಯಾಗುವ ಎಸ್.ಎಫ್.ಸಿ ವೇತನ ಅನುದಾನವನ್ನು
ಅಧಿಕಾರಿ/ಸಿಬ್ಬಂದಿಗಳ ವೇತನಕ್ಕಾಗಿ ಬಳಸಲಾಗುವುದು.
2 ಬೆಳಗಾವಿಯನ್ನು ಸ್ವಚ್ಛ ನಗರವನ್ನಾಗಿಡಲು ಹೊರಗುತ್ತಿಗೆ ಸ್ವಚ್ಚತಾ ವೆಚ್ಚಕ್ಕಾಗಿ ರೂ.2800.00 ಲಕ್ಷಗಳಷ್ಟು ವೆಚ್ಚ ಭರಿಸಲು ಕಾಯ್ದಿರಿಸಲಾಗಿದೆ.
3 ನೇರ ನೇಮಕಾತಿ ಹೊಂದಿದ ಪೌರಕಾರ್ಮಿಕರ ವೇತನಕ್ಕಾಗಿ ರೂ.1800.00 ಲಕ್ಷಗಳಷ್ಟು ಕಾಯ್ದಿರಿಸಲಾಗಿದೆ.
4 ವೈಜ್ಞಾನಿಕ ಘನತ್ಯಾಜ್ಯ ವಿಲೇವಾರಿಗೆ ರೂ.400.00 ಲಕ್ಷಗಳಷ್ಟು ಮೀಸಲಿರಿಸಿದೆ.
5 ಬೀದಿ ದೀಪಗಳ ನಿರ್ವಹಣೆಗಾಗಿ ರೂ.250.00 ಲಕ್ಷಗಳಷ್ಟು ಮೀಸಲಿರಿಸಿದೆ.
6 ರಸ್ತೆ, ಚರಂಡಿ, ಪಾದಾಚಾರಿ, ಮಳೆ ನೀರು ನಿರ್ವಹಣೆ, ರಸ್ತೆಗಳ ಮಾರ್ಗಸೂಚಿ ಅಳವಡಿಸಲು ರೂ.1050.00 ಲಕ್ಷಗಳನ್ನು ನಿಗದಿಪಡಿಸಿದೆ
7 ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ನಿರ್ವಹಣೆಗಾಗಿ ರೂ.110.00 ಲಕ್ಷಗಳನ್ನು ಕಾಯ್ದಿರಿಸಲಾಗಿದೆ
8 ಪಾಲಿಕೆಯ ಆದಾಯದಲ್ಲಿ ಎಲ್ಲ ಜಮೆ ಮತ್ತು ಖರ್ಚುಗಳನ್ನು ಹೊರತುಪಡಿಸಿ ಲಭ್ಯವಾಗುವ ಶೇ 1% ರಷ್ಟು ಮೊತ್ತವನ್ನು ಅಂದಾಜು ಆಯವ್ಯಯದಲ್ಲಿ ರೂ.14.98 ಲಕ್ಷಗಳನ್ನು ಕ್ರೀಡೆಗಳಿಗಾಗಿ ಮೀಸಲಿರಿಸಲಾಗಿದೆ
9 ಚುನಾಯಿತ ಪ್ರತಿನಿಧಿಗಳ ಅಧ್ಯಯನ ಪ್ರವಾಸಕ್ಕಾಗಿ ರೂ.30.00 ಲಕ್ಷಗಳನ್ನು ನಿಗದಿಪಡಿಸಿದೆ
10 11 ಪತ್ರಕರ್ತರ ಕ್ಷೇಮನಿಧಿ ಸಲುವಾಗಿ ರೂ.35.00 ಲಕ್ಷಗಳನ್ನು ನಿಗಧಿಪಡಿಸಲಾಗಿದೆ ರೂ.80.00 ಲಕ್ಷಗಳಷ್ಟು ಪಾಲಿಕೆಯ ವ್ಯಾಪ್ತಿಯಲ್ಲಿ ಒಳಪಡುವ ಸ್ಮಶಾನಗಳಲ್ಲಿ ದಹನ ಕ್ರಿಯೆ ನಡೆಸಲು ಹಾಗೂ ಅಭಿವೃದ್ಧಿಗಾಗಿ ನಿಗಧಿಪಡಿಸಲಾಗಿದೆ.
12 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು/ ತೆರೆದ ಭಾವಿ ಅಭಿವೃದ್ಧಿ ಪಡಿಸಲು ರೂ.25.00 ಲಕ್ಷಗಳನ್ನು ಕಾಯ್ದಿರಿಸಲಾಗಿದೆ.
ಅಂದಾಜು ಬಂಡವಾಳ ವೆಚ್ಚಗಳು
ರೂ.160.00 ಲಕ್ಷಗಳನ್ನು ಹೊಸದಾಗಿ ಗಣಕೀಕರಣ ಸಲುವಾಗಿ ಯಂತ್ರೋಪಕರಣಗಳನ್ನು ಖರೀದಿಸಲು ನಿಗಧಿಪಡಿಸಿದೆ
14 ನಗರದ 58 ವಾರ್ಡುಗಳಲ್ಲಿ ಹೊಸ ರಸ್ತೆ ನಿರ್ಮಾಣಕ್ಕಾಗಿ ರೂ.500.00 ಲಕ್ಷಗಳು, ಸಿಸಿ.ರಸ್ತೆ ನಿರ್ಮಾಣಕ್ಕಾಗಿ ರೂ.300.00 ಲಕ್ಷಗಳು ಚರಂಡಿ ನಿರ್ಮಾಣಕ್ಕಾಗಿ ರೂ.50.00 ಲಕ್ಷಗಳು ಪಾಲಿಕೆಯ ಖುಲ್ಲಾ ಜಾಗೆಗಳನ್ನು ಸಂರಕ್ಷಿಸಲು ರೂ.80.00 ಮತ್ತು ನಗರದ ವರ್ತುಲಗಳ ಸೌಂದರ್ಯೀಣಕ್ಕಾಗಿ ರೂ. 75.00 ಹೀಗೆ ಒಟ್ಟಾರೆ ಮೂಲಭೂತ ಸೌಕರ್ಯಕ್ಕಾಗಿ ರೂ.1005.00 ಲಕ್ಷಗಳಷ್ಟು ಹಾಗೂ ನಗರದ 58 ವಾರ್ಡುಗಳಲ್ಲಿ ವಿವಿಧ ಅವಶ್ಯಕ ಮೂಲಭೂತ ಸೌಕರ್ಯಕ್ಕಾಗಿ ರೂ.1000.00 ಲಕ್ಷಗಳಷ್ಟು ಒಟ್ಟಾರೆಯಾಗಿ ರೂ. 2005.00 ಲಕ್ಷಗಳಷ್ಟು ನಿಗಧಿಪಡಿಸಿದೆ.
15 ಒಳಚರಂಡಿ ದುರಸ್ತಿ ಮತ್ತು ಹೊಸ ಒಳಚರಂಡಿ ನಿರ್ಮಾಣಕ್ಕಾಗಿ ಹಾಗೂ ಸಮುದಾಯ, ಸಾರ್ವಜನಿಕ ನಿಗಧಿಪಡಿಸಲಾಗಿದೆ ಶೌಚಾಲಯಗಳ ನಿರ್ಮಾಣಕ್ಕಾಗಿ 2.650.00 ಲಕ್ಷಗಳಷ್ಟು
16 ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಉದ್ಯಾನವನಗಳ ಅಭಿವೃದ್ಧಿಗೆ ರೂ.100.00 ಲಕ್ಷಗಳನ್ನು ನಿಗಧಿಪಡಿಸಿದೆ.
17 ಇದಲ್ಲದೆ ಬೆಳಗಾವಿ ಮಹಾನಗರ ಪಾಲಿಕೆಯಿಂದ ಅಮೃತ್ ಯೋಜನೆಗೆ ವಂತಿಕೆಯಾಗಿ ರೂ.1500.00 ಲಕ್ಷಗಳಷ್ಟು ಪಾವತಿಸಲು ಕ್ರಮ ಜರುಗಿಸಲಾಗುವುದು.
18 ಸ್ವಚ್ಚ ಭಾರತ ಮಿಶನ್-01 ರ ಯೋಜನೆಯಡಿ ಪಾಲಿಕೆಯಿಂದ ಶೇ.41.27 ರಷ್ಟು ಡಿ.ಪಿ.ಆರ್. ಪ್ರಕಾರ ವಂತಿಕೆಯನ್ನು ನೀಡುವುದು
19 24.10% ಪಾಲಿಕೆಯಿಂದ ನಿವ್ವಳವಾಗಿ ಸ್ವೀಕೃತವಾಗುವ ಕಂದಾಯ ವಸೂಲಾತಿಯ ಮೇಲೆ ಸರ್ಕಾರದ ಸುತ್ತೋಲೆಯ ಮಾರ್ಗಸೂಚಿಗಳ ಪ್ರಕಾರ ಉಳಿತಾಯವಾಗುವ ಅಂದಾಜು ಮೊತ್ತದ ಮೇಲೆ ಶೇ. 24.10% ರಷ್ಟು ಮೊತ್ತವನ್ನು ಪಾಲಿಕೆ ಅನುದಾನದಿಂದ ಅಂದಾಜು ಮೊತ್ತ ರೂ.361.00 ಲಕ್ಷಗಳನ್ನು ಕಾಯ್ದಿರಿಸಲು ಕ್ರಮ ಜರುಗಿಸಲಾಗುವುದು.
20 7.25% ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಹಿಂದುಳಿದ ವರ್ಗದವರ ಅಭಿವೃದ್ಧಿಗಾಗಿ ಮಹಾನಗರ ಪಾಲಿಕೆ ನಿಧಿಯಡಿಯಲ್ಲಿ ಅಂದಾಜು ರೂ.108.63 ಲಕ್ಷಗಳಷ್ಟು ವೆಚ್ಚ ಭರಿಸಲು ನಿರೀಕ್ಷಿಸಲಾಗಿದೆ.
21 5% ವಿಕಲಚೇತನರ ಕಲ್ಯಾಣ ಅಭಿವೃದ್ಧಿಯಡಿಯಲ್ಲಿ ವೀಲ್ ಚೇರ್ ಪೂರೈಸಲು ಪಾಲಿಕೆ ಅನುದಾನದಡಿಯಲ್ಲಿ ರೂ.74.92 ಲಕ್ಷಗಳನ್ನು ಮೀಸಲಿರಿಸಲಾಗುವದು
22 ಇದಲ್ಲದೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಸ್ವೀಕೃತ ಆಗುವ 15ನೇ ಹಣಕಾಸು ಯೋಜನೆ. ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ, ಸ್ವಚ್ಚ ಭಾರತ ಮಿಶನ್, ಅಮೃತ್ ಯೋಜನೆ. ಮಳೆ ನೀರು ಕೋಯ್ದು, ಪ್ರಕೃತಿ ವಿಕೋಪ, ಕುಡಿಯುವ ನೀರು ಸರಬರಾಜು, ಸ್ವಚ್ಚ ಭಾರತ ಅಭಿಯಾನ ಯೋಜನೆ, ಎಸ್.ಎಫ್.ಸಿ ವಿಶೇಷ ಅನುದಾನ, ಗೃಹ ಭಾಗ್ಯ ಯೋಜನೆ
13
ಇತ್ಯಾದಿಗಳ ಮೂಲದಿಂದ ಬಿಡುಗಡೆಯಾಗುವ ಅನುದಾನಕ್ಕೆ ತಕ್ಕಂತೆ ಹಾಗೂ ಮಾರ್ಗಸೂಚಿಗಳನ್ನು ಗಣನೆಗೆ ತೆಗೆದುಕೊಂಡು ಕ್ರಿಯಾ ಯೋಜನೆಯನ್ನು ತಯಾರಿಸಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದು ಆದ್ಯತೆ ಮೇರೆಗೆ ಹಣ ಬಳಕೆ ಮಾಡಲಾಗುವುದು. ಒಟ್ಟಾರೆಯಾಗಿ ರೂ. 43,653.63 ಲಕ್ಷಗಳಷ್ಟು (ರೂ. ನಲವತ್ತೂರು ಸಾವಿರದಾ ಆರುನೂರಾ ಐವತ್ತೂರು ಲಕ್ಷ ಅರವತ್ತೂರು ಸಾವಿರಗಳು ಮಾತ್ರ) ಅಂದಾಜು ವೆಚ್ಚ ಭರಿಸಲು ನಿರೀಕ್ಷಿಸಲಾಗಿದೆ
ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ 58 ವಾರ್ಡುಗಳ ಸರ್ವತೋಮುಖ ಅಭಿವೃದ್ಧಿ ಸೃಜಿಸಿ ಕಾಪಾಡುವದು ಹಾಗೂ ಸಮಸ್ತ ನಾಗರೀಕರಿಗೆ ಉತ್ಕೃಷ್ಟವಾದ ಸೇವೆ ಒದಗಿಸಲು ಮಹಾನಗರ ಪಾಲಿಕೆ ಸದಾ ಶ್ರಮಿಸುತ್ತಿದೆ. ಆಯವ್ಯಯದಲ್ಲಿ ಅಳವಡಿಸಿದ ಎಲ್ಲ ಕಾರ್ಯಕ್ರಮಗಳು ನಿಗಧಿತ ವೇಳೆಯಲ್ಲಿ ಅನುಷ್ಠಾನಗೊಳಿಸಲಾಗುವುದೆಂಬ ಆಶಾಭಾವನೆ ಹೊಂದಿದ್ದು, 2024-25 ನೇ ಸಾಲಿನಲ್ಲಿ ಬೆಳಗಾವಿ ನಗರದ ಸಮಗ್ರ ಮೂಲಭೂತ ಸೌಕರ್ಯಗಳನ್ನು ಹಾಗೂ ನಾಗರೀಕರ ನಿರೀಕ್ಷೆಯನ್ನು ತಲುಪಲು ಮತ್ತು ಅನುಷ್ಠಾನಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು.
.