ಬಿಎಸ್ ವೈ ಸಂಧಾನ ಬಿಜೆಪಿಯಲ್ಲಿ ಚಿಗುರಿದ ಆತ್ಮ ವಿಶ್ವಾಸ
E belagavi ವಿಶೇಷ ದೊಡ್ಡ ಬೆಟ್ಟ ಆಗಬಹುದೆಂಬ ಆತಂಕ ಸೃಷ್ಟಿಸಿದ್ದ ಸಮಸ್ಯೆ ಕಡೆಗೂ ಪರಿಹಾರ ಕಂಡಿದೆ. ಭಿನ್ನಮತದ ಜಾಗದಲ್ಲಿ ಈಗ ಒಗ್ಗಟ್ಟಿನ ಮಂತ್ರ.ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಪಕ್ಷದಲ್ಲಿ ತಲೆದೋರಿದ್ದ ಅತೃಪ್ತಿ, ಅಸಮಧಾನ ಶಮನಗೊಂಡಿದ್ದು ವಾತಾವರಣ ಈಗ ತಿಳಿಯಾಗಿದೆ. ಒಂದು ವಾರದ ಹಿಂದಷ್ಟೇ ಬಿಗು ಗೊಂಡಿದ್ದ ಪರಿಸ್ಥಿತಿಯನ್ನು ಕಂಡಿದ್ದವರಿಗೆ ಇದು ಸದ್ಯಕ್ಕೆ ಇತ್ಯರ್ಥವಾಗುವ ಬಿಕ್ಕಟ್ಟಲ್ಲ ಎಂಬ ಭಾವನೆ ಮುಡಿದ್ದು ಹೌದಾದರೂ ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪನವರು ನಡೆಸಿದ ಸಂಧಾನ…