ಬೆಳಗಾವಿ ಪಾಲಿಕೆ ಕಟ್ಟಡಕ್ಕೆ ಕರಿಗೊಂಬೆ ಕಾಟ. ಕರಿಗೊಂಬೆಗೆ ಇವೆ ಅಂತೆ ಜೋಡಿ ಹಲ್ಲು ಒಂದು ಫುಟ ಉದ್ದದ ಕರಿಗೊಂಬೆ. ಮರಕ್ಕೆ ನೇತಾಕಿದ್ದ ಕರಿಗೊಂಬೆ.

ಬೆಳಗಾವಿ.
ಮಹಾನಗರ ಪಾಲಿಕೆಗೆ ಕಟ್ಟಡ ಹಳೆಯದ್ದಾದರೂ ಅಷ್ಟೇ ಹೊಸದಾದರೂ ಅಷ್ಟೇ, ಅಲ್ಲಿ ಕಾಟ ತಪ್ಪಿದ್ದಲ್ಲ ಎನ್ನುವುದು ವಾಸ್ತವ.
ಹೊಸ ಕಟ್ಟಡದಲ್ಲಿ ಒಂದು ರೀತಿಯ ಕಾಟ ಇದ್ದರೆ, ಹಳೆಯ ಕಟ್ಟಡದಲ್ಲಿ ಮತ್ತೊಂದು ರೀತಿಯ ಕಾಟ ಶುರುವಾಗಿದೆ, ಅದೂ ಅಮವಾಸ್ಯೆ ಹತ್ತಿರದ ದಿನಗಳಲ್ಲಿ ಅಂತಹ ಅಂದರೆ ಕರಿ ಗೊಂಬೆ ಕಾಟ ಶುರುವಾಗಿದ್ದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಈಗ ನಾವು ಹೇಳ ಹೊರಟಿರುವುದು ಪಾಲಿಕೆಯ ಹಳೆಯ ಕಟ್ಟಡದ ಕರಿಗೊಂಬೆ ಕಾಟದ ಕಥೆ.
ಬೆಳಗಾವಿ ಮಹಾನಗರ ಪಾಲಿಕೆಯ ಹಳೆಯ ಕಟ್ಟಡವನ್ನು ಈಗ ತಹಶೀಲ್ದಾರ ಕಚೇರಿಗೆ ಕೊಡಲಾಗಿದೆ.

ಈ ಕಚೇರಿ ಆವರಣದಲ್ಲಿ ದೊಡ್ಡ ಮರವೊಂದಿದೆ. ಇಷ್ಟು ದಿನ ಅಲ್ಲಿ ಯಾವುದೇ ರೀತಿಯ ಭೂತಷೇಷ್ಟೆಯಾಗಲಿ, ಮಾಟ ಮಂತ್ರವಾಗಲಿ ಇರಲಿಲ್ಲ. ಆದರೆ ಅಮವಾಸ್ಯೆಯ ಮುಂಚಿತವಾಗಿ ಮರದ ಮೇಲೆ ಸುಮಾರು ಒಂದು ಅಡಿ ಉದ್ದದ ಕಪ್ಪು ಗೊಂಬೆ ನೇತಾಡುತ್ತಿರುವುದು ಕಂಡುಬಂದಿದೆ.
ಮಕ್ಕಳಿಗೆ ಆಟವಾಡಲು ಕೊಟ್ಟ ರೀತಿಯ ಚಿಕ್ಕ ಟೆಡ್ಡಿ ಬೇರ್ ನಂತೆ ಕಾಣುತ್ತಿದ್ದ ಕರಿ ಗೊಂಬೆ ಬಾಯಲ್ಲಿ ಜೋಡಿ ಹಲ್ಲುಗಳಿವೆ. ಹೀಗಾಗಿ ಕರಿಗೊಂಬೆಯ ಜೊಡಿ ಹಲ್ಲು ನೋಡಿ ಜನ ಹೆದರುತ್ತಿದ್ದಾರೆ