ಕೋರೆ ಮನೆಯಲ್ಲಿ ಶೆಟ್ಟರ್ ಅಂಗಡಿ ಬೀಗ ..!

ಶೆಟ್ಟರ್ ಅಂಗಡಿ ಬಂದ್ ಮಾಡಲು ಡಾ. ಪ್ರಭಾಕರ ಕೋರೆ ನಿವಾಸದಲ್ಲಿ ಸಭೆ
ಬೆಳಗಾವಿ:

ಹುಬ್ಬಳ್ಳಿಯ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಅಂಗಡಿಯ ಬೀಗದ ಬಗ್ಗೆ ಡಾ. ಪ್ರಭಾಕರ ಕೋರೆ ನಿವಾಸದಲ್ಲಿ ಚರ್ಚೆಯಾಗಿದೆ.

ಬೆಳಗಾವಿ ಜಿಲ್ಲೆಯ ಬಿಜೆಪಿಯ ಪ್ರಮುಖರು ಶೆಟ್ಟರ ಸ್ಪರ್ಧೆಯ ಬಗ್ಗೆ ಚರ್ಚೆ ನಡೆಸಿ ಸ್ಥಳೀಕರಿಗೆ ಟಿಕೆಟ್ ಕೊಡಬೇಕು ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.

ಅಷ್ಟೇ ಅಲ್ಲ ಶೆಟ್ಟರ್ ಅವರನ್ನೇ ಕಣಕ್ಕಿಳಿಸಿದರೆ ಮಾಜಿ ಸಂಸದ ರಮೇಶ ಕತ್ತಿ ಬಿಜೆಪಿ ಬಂಡಾಯ ಅಭ್ಯರ್ಥಿ ಯಾಗಿ ಕಣಕ್ಕಿಳಿಯುವ ಮಾತುಗಳು ಕೇಳಿ ಬಂದವು.

ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಬೀಗರ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿಯುವ ನಿರೀಕ್ಷೆ ಹೊಂದಿರುವ ಹುಬ್ಬಳ್ಳಿಯ ಜಗದೀಶ ಶೆಟ್ಟರ ಅವರಿಗೆ ಕೋರೆ‌ ನಿವಾಸದಲ್ಲಿ ನಡೆದ ಸಭದ ಬಿಗ್ ಶಾಕ್ ನೀಡಿತು
ಬೆಳಗಾವಿಯ ಅಭ್ಯರ್ಥಿಗೆ ಟಿಕೇಟು ನೀಡಬೇಕು. ಯಾವುದೇ ಕಾರಣಕ್ಕೂ ಹುಬ್ಬಳ್ಳಿಯ ಜಗದೀಶ
ಶೆಟ್ಟರ್‌ಗೆ ಇಲ್ಲಿ ಟಿಕೇಟು ನೀಡಬಾರದು ಎಂದು ರಾಜ್ಯ ನಾಯಕರಲ್ಲಿ ಮನವಿ ಮಾಡಿರುವ ಇಲ್ಲಿನ ಮುಖಂಡರು ಹೈಕಮಾಂಡ್ ಜತೆಗೂ ಈ ಬಗ್ಗೆ ಚರ್ಚಿಸುವಂತೆ ಕೇಳಿಕೊಂಡಿದ್ದಾರೆ.
ಬೆಳಗಾವಿಯ ತಿನಿಸುಕಟ್ಟೆ ಹಾಗೂ ಡಾ. ಪ್ರಭಾಕರ ಕೋರೆ ಅವರ ನಿವಾಸದಲ್ಲಿ ಪ್ರತ್ಯೇಕ ಸಭೆ
ನಡೆಸಿದ ಅತೃಪ್ತರು ಮುಂದಿನ ನಿಲಿವುಗಳ ಬಗ್ಗೆ ಚರ್ಚಿಸಿದರು.


ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತಮಗೆ ಧಾರವಾಡ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಕ್ಕೆ ಟಿಕೇಟು ನೀಡಿಲ್ಲ ಎಂಬ ಒಂದೇ ಕಾರಣಕ್ಕೆ ಪಕ್ಷ ತೊರೆದು ಕಾಂಗ್ರೆಸ್ರ್ ಸೇರ್ಡೆಪಯಾಗಿದ್ದ ಶೆಟ್ಟರ್ ಸಾರ್ವಜನಿಕ ವೇದಿಕೆಯಲ್ಲಿ ಭಾರತೀಯ ಜನತಾ ಪಕ್ಷದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದವರು. ಅಂತಹವರ ಪರ ಮತ ಯಾಚಿಸುವುದು ನಮಗೂ ಮುಜುಗರದ ವಿಚಾರ ಎಂದು ಹೆಸರು ಹೇಳಲು ಇಷ್ಟಪಡದ ಕೆಲ ನಾಯಕರು ನೋವು ತೋಡಿಕೊಂಡಿದ್ದಾರೆ.


ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿ ಟಿಕೇಟು ಆಕಾಂಕ್ಷಿಗಳಿಗೇನೂ ಬರವಿಲ್ಲ. ನಮ್ಮಲ್ಲಿ
ಯಾರಿಗೆ ಟಿಕೇಟು ಕೊಟ್ಟರೂ ಗೆಲ್ಲಿಸಿ ತರುವುದಾಗಿ ಹೇಳಿಕೊಂಡಿರುವ ನಾಯಕರು, ಈ ಬಗ್ಗೆ
ಚರ್ಚಿಸಲು ಈಗಾಗಲೇ ಸಭೆ ನಡೆಸಲಾಗುತ್ತಿದೆ.


ಬಂಡಾಯದ ಬಿಸಿ:
ಭಾರತೀಯ ಜನತಾ ಪಕ್ಷದಿಂದ ಬೆಳಗಾವಿ ಅಭ್ಯರ್ಥಿಯಾಗಿ ಜಗದೀಶ ಶೆಟರ್ ಅವರನ್ನು ಕಣಕ್ಕೆ
ಇಳಿಸಲೇಬಾರದು ಎಂದು ಒತ್ತಾಯಿಸುತ್ತಿರುವ ಬೆಳಗಾವಿಯ ಬಿಜೆಪಿ ನಾಯಕರು, ಹೈಕಮಾಂಡ್
ತಮ್ಮ ಮನವಿಗೆ ಸ್ಪಂದಿಸದಿದ್ದರೆ, ಬಂಡಾಯ ಅಭ್ಯರ್ಥಿಂiiನ್ನು ಕಣಕ್ಕಿಳಿಯಬಹುದು ಎನ್ನುವ ಸೂಚನೆ ನೀಡಿದ್ದಾರೆಂದು ಗೊತ್ತಾಗಿದೆ .

Leave a Reply

Your email address will not be published. Required fields are marked *

error: Content is protected !!