ಕೊಠಡಿಗೆ ಅನುದಾನ: ಯು ಬಿ ವೆಂಕಟೇಶ್ ಗೆ ಸನ್ಮಾನ
ಉಡುಪಿ: ಗುಂಡಿಬೈಲು ಯುವ ಬ್ರಾಹ್ಮಣ ಪರಿಷತ್ (ವೈಬಿಪಿ)ನ ಬ್ರಾಹ್ಮೀ ಸಭಾಭವನದ ಕೊಠಡಿ ನಿರ್ಮಾಣಕ್ಕಾಗಿ ಶಾಸಕರ ನಿಧಿಯಿಂದ 5 ಲಕ್ಷ ರೂ. ಅನುದಾನ ನೀಡಿದ ವಿಧಾನ ಪರಿಷತ್ ಸದಸ್ಯ ಯು. ಬಿ. ವೆಂಕಟೇಶ್ ಅವರನ್ನು ಗುರುವಾರ ಯುವ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಕೆ. ಎನ್. ಚಂದ್ರಕಾಂತ ಸನ್ಮಾನಿಸಿದರು.

ಯು. ಬಿ. ವೆಂಕಟೇಶ್ ಅಂದು ಬೆಳಿಗ್ಗೆ ಪರಿಷತ್ ಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.
ಪರಿಷತ್ತಿನ ಕಾರ್ಯಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲೂ ಅಗತ್ಯ ನೆರವು ನೀಡುವ ಭರವಸೆ ನೀಡಿದರು.

ಪರಿಷತ್ ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ, ಮಾಜಿ ಅಧ್ಯಕ್ಷರಾದ ಎಂ.ಎಸ್. ವಿಷ್ಣು ಮತ್ತು ವಿಷ್ಣುಪ್ರಸಾದ್ ಪಾಡಿಗಾರು, ಹಿರಿಯ ಸದಸ್ಯ ರಘುಪತಿ ರಾವ್ ಇದ್ದರು.