ಶೆಟ್ರು ಬರ್ತಾರೆ ದಾರಿ ಬಿಡಿ…!
ಬೆಳಗಾವಿ. GO BACK SHETTER ಅಭಿಯಾನವನ್ನು ಕಡೆಗಣಿಸಿ ಬಿಜೆಪಿ ಹೈಕಮಾಂಡ್ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೆಸರನ್ನು ಅಂತಿಮಗೊಳಿಸಿದೆ. ಹೀಗಾಗಿ ಈಗ ಎದ್ದಿರುವ ಅಸಮಾಧಾನವನ್ನು ಬಿಜೆಪಿ ನಾಯಕರು ಹೇಗೆ ತಣ್ಣಗಾಗಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಬಹುಶಃ ಶೆಟ್ಟರ್ ಅವರು ನಾಳೆ ತಪ್ಪಿದರೆ ನಾಡದ್ದು ಬೆಳಗಾವಿ ಪ್ರವೇಶ ಮಾಡುವ ಸಾಧ್ಯತೆಗಳಿವೆ. ಮೊದಲು ಅವರು ಹಿಂದೆ ಆಡಿದ ಮಾತುಗಳ ಬಗ್ಗೆ ಸ್ಪಷ್ಟನೆ ಕೊಡುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಮೃನಾಲ್ ಹೆಬ್ಬಾಳಕರ ಅವರು ಈಗಾಗಲೇ ಪ್ರಚಾರ…