ಬೆಳಗಾವಿ: ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲರ ಗತ್ತು, ಗೈರತ್ತೇ ಅಂತಹದ್ದು. ಪಕ್ಷ ನಿಷ್ಠೆ ಎಂದರೆ ಯಾವುದೇ ಹಮ್ಮು ಬಿಮ್ಮು ಇಲ್ಲದೇ ಮುಂದಡಿಯಿಡುವ ಅವರ ಕಾರ್ಯಶೈಲಿ ಎಲ್ಲರಿಗೂ ಮೆಚ್ಚುಗೆ ಆಗುವಂತಹದ್ದು.
, ಬುಧವಾರ ನಗರದಲ್ಲಿ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಚುನಾವಣಾ ಪ್ರಚಾರದ ಬೃಹತ್ ಬೈಕ್ ರ್ಯಾಲಿಗೆ ಮೆರಗು ತಂದದ್ದೂ ಕೂಡ ಗಮನ ಸೆಳೆಯಿತು.
ಶಾಸಕರೆಂಬುದನ್ನು ಬದಿಗಿಟ್ಟು, ಸಾಮಾನ್ಯ ಕಾರ್ಯಕರ್ತನಂತೆ ಬೈಕ್ ಏರಿ ಪಕ್ಷ ಧ್ವಜದೊಂದಿಗೆ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡು ವಿಶೇಷವಾಗಿತ್ತು.

ಅಲ್ಲದೆ, ತಾವು ಪ್ರತಿನಿಧಿಸುವ ದಕ್ಷಿಣ ಮತಕ್ಷೇತ್ರ ಹಾಗೂ ಉತ್ತರ ಮತಕ್ಷೇತ್ರದ ವ್ಯಾಪ್ತಿಯ ಪಾಲಿಕೆ ಸದಸ್ಯರ ವಾರ್ಡ್ ಗಳಿಂದ ಕಾರ್ಯಕರ್ತರನ್ನು ಬೈಕ್ ರ್ಯಾಲಿಗೆ ಕರೆತಂದು ಹುಬ್ಬೇರಿಸುವಂತೆ ಮಾಡಿತು.

ದೇಶಾಭಿಮಾನದ, ಪಕ್ಷಾಭಿಮಾನ ಹಾಗೂ ಪ್ರಧಾನಿ ಮೋದಿಯವರ ಘೋಷಣೆಗಳು ಮೊಳಗಿದ್ದೂ ಸಹ ಗಮನ ಸೆಳೆಯಿತು. ಕೇಸರಿ ಪೇಟದೊಂದಿಗೆ ಕಾರ್ಯಕರ್ತರೊಬ್ಬರನ್ನು ಹಿಂಬದಿ ಸೀಟಿನಲ್ಲಿ ಕುಳಿಸಿಕೊಂಡು ಇಡೀ ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಸೈ ಎನಿಸಿಕೊಂಡರು ಶಾಸಕ ಅಭಯ ಪಾಟೀಲ.
