ಜೋಶಿ. ಸಂತೋಷ ಎಲ್ಲರೂ ನಮ್ಮವರೇ..
ನನಗೆ ಎಲ್ಲರ ಸಹಕಾರವೂ ಇದೆ,..! ಬೆಳಗಾವಿ ನನ್ನ ಕರ್ಮ.ಭೂಮಿ. ನಾನು ಹೊರಗಿನವನಲ್ಲ.
ಬೆಳಗಾವಿ.
ನನಗೆ ಯಾರ ವಿರೋಧವೂ ಇಲ್ಲ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿ.ಎಲ್.ಸಂತೋಷ ಸೇರಿದಂತೆ ಎಲ್ಲರ ಸಹಕಾರ ಇದ್ದೇ ಇದೆ ಎಂದು ಬೆಳಗಾವಿ ಬಿಜೆಪಿ ಅಭ್ಯಥರ್ಿ ಜಗದೀಶ ಶೆಟ್ಟರ್ ಹೇಳಿದರು,
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆ ಎಲ್ಲ ನಾಯಕರೊಂದಿಗೆ ಕಳೆದ ದಿನ ಮಾತನಾಡಿದ್ದೇನೆ.ಸಣ್ಣಪುಟ್ಟ ವ್ಯತ್ಯಾಸವನ್ನು ಬಗೆಹರಿಸಿಕೊಂಡಿದ್ದೇವೆ, ಈಗ ಎಲ್ಲರೂ ಕೂಡಿ ಕೆಲಸ ಮಾಡುವ ಗಟ್ಟಿ ನಿಧರ್ಾರ ಮಾಡಲಾಗಿದೆ ಎಂದು ಅವರು ಹೇಳಿದರು,
ಇದು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎನ್ನುವ ಚುನಾವಣೆಯಾಗಿದೆ. ಹೀಗಾಗಿ ಈ ಲೋಕಸಭಾ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ.
ಜಗದೀಶ್ ಶೆಟ್ಟರ್ ಹೊರಗಿನವರು ಎನ್ನುವ ಮಾತನ್ನು ಅಲ್ಲಗಳೆದ ಅವರು, ಹುಬ್ಬಳ್ಳಿ ಜನ್ಮಭೂಮಿಯಾದರೆ ಬೆಳಗಾವಿ ನನ್ನ ಕರ್ಮ ಭೂಮಿ ಇಲ್ಲಿಯೇ ಮನೆ ಮಾಡಿ ವಾಸ ಇರುತ್ತೇನೆ ಎಂದರು,
ರಾಹುಲ್ ಗಾಂಧಿಯವರ ಕೆರಳದಿಂದ, ಸೋನಿಯಾ ಗಾಂಧಿ ಬಳ್ಳಾರಿಯಿಂದ ಮತ್ತು ಇಂದಿರಾ ಗಾಂಧಿ ಚಿಕ್ಕಮಗಳೂರಿನಿಂದ ಸ್ಪಧರ್ಿಸಿದ್ದಾಗ ಈ ಕಾಂಗ್ರೆಸಿಗರ ಸ್ವಾಭಿಮಾನ ಎಲ್ಲಿ ಹೋಗಿತ್ತು ಎಂದು ಪ್ರಶ್ನೆ ಮಾಡಿದರು,

ಕಾಂಗ್ರೆಸ್ ಪಕ್ಷದ ದುರಾಡಳಿತದ ಬಗ್ಗೆ ಶೆಟ್ಟರ್ ಹರಿಹಶಾಯ್ದರು, ಅಷ್ಟೇ ಅಲ್ಲ ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಸಕರ್ಾರ ಅಸ್ತಿತ್ವದಲ್ಲಿ ಇರಲ್ಲ ಎಂದು ಭವಿಷ್ಯ ನುಡಿದರು