ಕೋರೆ- ಶೆಟ್ಟರ್ ಭೆಟ್ಟಿ ಮಾತು ಕತೆ ‘ನಿಗೂಢ’

ಬೆಳಗಾವಿ. ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರಕ್ಕೆ ಇಳಿದಿದ್ದರೂ ಕೂಡ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.‌ಪ್ರಭಾಕರ ಕೋರೆ ಯಾಕೋ ಏನೋ ಅಂತರ ಕಾಯ್ದುಕೊಂಡಿದ್ದರು. ಶೆಟ್ಟರ್ ಅವರ ಜೊತೆ ಪ್ರಚಾರಕ್ಕೆ ಹೋಗುವುದಿರಲಿ ಎಲ್ಲಿಯೂ ಅವರ ಸುತ್ತಮುತ್ತ ಸಹ ಕಾಣಿಸಿಕೊಳ್ಳಲಿಲ್ಲ. ಇದು ಸಹಜವಾಗಿ ಒಂದು ರೀತಿಯ ಗೊಂದಲಕ್ಕೆ ಕಾರಣವಾಗಿತ್ತು. ಶೆಟ್ಟರ್ ಅವರು ಬೆಳಗಾವಿಯಲ್ಲಿ ಪ್ರಥಮ‌ಸುದ್ದಿಗೋಷ್ಠಿ ನಡೆಸುವುದಕ್ಕೂ ಮುನ್ನ ಬಿಹೆಪಿ ಟಿಕೆಟ್ ಆಕಾಂಕ್ಷಿಯಲ್ಲಿ ಒಬ್ಬರಾಗಿದ್ದ ಮಹಾಂತೇಶ ಕವಟಗಿಮಠರ‌ ಮನೆಗೆ ಹೋಗಿ ಮಾತುಕತೆ ನಡೆಸಿದ್ದರು. ಹೀಗಾಗಿ ಕವಟಗಿಮಠರು…

Read More

ಅನುಮತಿ ತಗೊಂಡಿದ್ದರು..ಡಿಸಿ

ಬೆಳಗಾವಿ.ಕಳೆದ ದಿನ ಮರಾಠಾ ಮಂಗಲ‌ ಕಾರ್ಯಾಲಯದಲ್ಲಿ ನಡೆದ ಎಂಇಎಸ್ ಸಭೆಗೆ ಅನುಮತಿ ನೀಡಲಾಗಿತ್ತು ಎಂದು ಜಿಲ್ಲಾಧಿಕಾರಿಗಳೂ ಆಗಿರುವ ಚುನಾವಣಾಧಿಕಾರಿ ನಿತೇಶ್ ಪಾಟೀಲ ಸ್ಪಷ್ಟಪಡಿಸಿದ್ದಾರೆ. ಸಭೆಯಲ್ಲಿ ರಮಾಕಾಂತ ಕೊಂಡುಸ್ಕರ ಮಾತು ಆಧರಿಸಿ E belagavi ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ದಿ. ದಿ.29 ರಂದು ನಡೆಯುವ ಎಂಇಎಸ್ ಸಭೆಗೆ ಅದೇ ದಿನ ಅನುಮತಿ ನೀಡಲಾಗಿದೆ.

Read More

ಸಚಿವರೇ ಮಾತು ಕಲಿತುಕೊಳ್ಳಿ..!

ಸಂಸದೆ ಮಂಗಲಾ ಅಂಗಡಿ ಖಡಕ್ ಮಾತುಹೆಬ್ಬಾಳಕರ ಅವರೇ ಕ್ಷುಲ್ಲಕ ರಾಜಕೀಯ ಬಿಡಿಬೆಳಗಾವಿ.ಕಾಂಗ್ರೆಸ್ ಪಕ್ಷದ ಸಂಸ್ಕೃತಿಯಂತೆ ಕೇವಲ ಕ್ಷುಲ್ಲಕ ವಿಷಯದ ರಾಜಕಾರಣ ಮಾಡುತ್ತಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸಂಸದೆ ಮಂಗಲಾ ಅಂಗಡಿ ಕಿಡಿಕಾರಿದ್ದಾರೆ. ಈ ಬಗ್ಗೆ ಲಿಖಿತ ಪ್ರಕಟನೆಯನ್ನು ಅವರು ನೀಡಿ ಸಚಿವರು ಬಳಸುವ ಮಾತುಗಳ ವಿರುದ್ಧ ವ್ಯಾಪಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಜನರ ಮನಸಿನಲ್ಲಿ ಸಂಶಯ ಹುಟ್ಟಿಸುವ ಕ್ಷುಲ್ಲಕ ಹೇಳಿಕೆ ಕೊಡುವ ಬದಲು ಸಚಿವ ಸ್ಥಾನಕ್ಕೆ ಗೌರವ ತರುವ ಮಾತು ಆಡಬೇಕು…

Read More

ಬೆಳಗಾವಿ ಲೋಕ ಸಮರದಲ್ಲಿ ತಮಿಳರ ಹಣ?

ತಮಿಳುನಾಡಿನಿಂದ ಬರ್ತಿದೆಯಾ ಬೆಳಗಾವಿ ಲೋಕ ಸಮರಕ್ಕೆ ಕೋಟಿ ಕೋಟಿ ಫಂಡ್? ಆ ಅನ್ನದ ಋಣ ತೀರಿಸಿದ ಪುಣ್ಯಾತ್ಮ ಯಾರು ಸ್ವಾಮಿ? ನಾಡದ್ರೋಹಿ ಎಂಇಎಸ್ ಅನುಮತಿ ಇಲ್ಲದೇ ಸಭೆ ಮಾಡಿದರೂ ಕೇಳೊರೇ ಇಲ್ಲ. ಬೆಳಗಾವಿ ಗಡಿನಾಡ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಮತ್ತು ಕೇಳಿ ಬರುತ್ತಿರುವ ಅಂತೆ ಕಂತೆ ಮಾತುಗಳನ್ನು ಕೇಳಿದರೆ ಚುನಾವಣಾಧಿಕಾರಿಗಳ ಕಾರ್ಯದ ಬಗ್ಗೆಯೇ ಅನುಮಾನ ಮೂಡುವುದು ಸಹಜ ಮತ್ತು ಸ್ವಾಭಾವಿಕ. ವಿಶೇಷವಾಗಿ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆ ಸಂಬಂಧಿಸಿದಂತೆ ಬಹುತೇಕರು ಪೂರ್ವಾನುಮತಿ ತೆಗೆದುಕೊಳ್ಳುತ್ತಿಲ್ಲ. ಕಳೆದ ದಿನ…

Read More

ಅಕ್ಕಿಮಠಕ್ಕೆ ಬೊಮ್ಮಾಯಿ ಭೆಟ್ಟಿ

ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಯವರು ಇಂದು ಹಾವೇರಿ ತಾಲೂಕಿನ ಅಗಡಿ ಗ್ರಾಮದಲ್ಲಿರುವ ಅಕ್ಕಿಮಠಕ್ಕೆ ಭೇಟಿ ನೀಡಿ ಪರಮಪೂಜ್ಯ ಗುರುಲಿಂಗ ಮಹಾಸ್ವಾಮಿಗಳ ದರ್ಶನ ಪಡೆದುಕೊಂಡರು.

Read More
error: Content is protected !!