Headlines

ಬೆಳಗಾವಿ ಲೋಕ ಸಮರದಲ್ಲಿ ತಮಿಳರ ಹಣ?

ತಮಿಳುನಾಡಿನಿಂದ ಬರ್ತಿದೆಯಾ ಬೆಳಗಾವಿ ಲೋಕ ಸಮರಕ್ಕೆ ಕೋಟಿ ಕೋಟಿ ಫಂಡ್?

ಆ ಅನ್ನದ ಋಣ ತೀರಿಸಿದ ಪುಣ್ಯಾತ್ಮ ಯಾರು ಸ್ವಾಮಿ?

ನಾಡದ್ರೋಹಿ ಎಂಇಎಸ್ ಅನುಮತಿ ಇಲ್ಲದೇ ಸಭೆ ಮಾಡಿದರೂ ಕೇಳೊರೇ ಇಲ್ಲ.

ಬೆಳಗಾವಿ

ಗಡಿನಾಡ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಮತ್ತು ಕೇಳಿ ಬರುತ್ತಿರುವ ಅಂತೆ ಕಂತೆ ಮಾತುಗಳನ್ನು ಕೇಳಿದರೆ ಚುನಾವಣಾಧಿಕಾರಿಗಳ ಕಾರ್ಯದ ಬಗ್ಗೆಯೇ ಅನುಮಾನ ಮೂಡುವುದು ಸಹಜ ಮತ್ತು ಸ್ವಾಭಾವಿಕ.

ವಿಶೇಷವಾಗಿ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆ ಸಂಬಂಧಿಸಿದಂತೆ ಬಹುತೇಕರು ಪೂರ್ವಾನುಮತಿ ತೆಗೆದುಕೊಳ್ಳುತ್ತಿಲ್ಲ. ಕಳೆದ ದಿನ ಬೆಳಗಾವಿಯಲ್ಲಿ ನಡೆದ ನಾಡದ್ರೋಹಿ ಎಂಇಎಸ್ ಸಂಘಟನೆ ಯಾವುದೇ ರೀತಿಯ ಅನುಮತಿಯನ್ನು ಪಡೆಯದೇ ಸಭೆ ನಡೆಸಿತು ಎಂದು ಗೊತ್ತಾಗಿದೆ.

ಎಂಇಎಸ್ ಸಭೆಯಲ್ಲಿ ರಮಾಕಾಂತ ಕೊಂಡುಸ್ಕರ ಏನಂದ್ರು ಕೇಳಿ!

ಸಭೆಯಲ್ಲಿ ರಮಾಕಾಂತ ಕೊಂಡುಸ್ಕರ ಅವರೇ ಈ‌ ಮಾತನ್ನು ಸ್ಪಷ್ಟವಾಗಿ ಹೇಳಿದ್ರ್ದಾರೆ. ಮೈಕ್ ಅನುನತಿ ಸಹ ಇರಲಿಲ್ಲ. ಆಸರೆ ಈ ವಿಷಯ ಗುಪ್ತಚರ ಇಲಾಖೆಗಾಗಲೀ ಅಥವಾ ಎಲ್ಲದರ ಮೇಲೆ ಹದ್ದಿನ ಕಣ್ಣು ಇಡಲಾಗಿದೆ ಎಂದು ಹೇಳುವ ಚುನಾವಣಾಧಿಕಾರಿಗಳಿಗೆ ಈ ಸಭೆ ಗಮನಕ್ಕೆ ಬಂದಿಲ್ಲವೇ ಎನ್ನುವ ಬಹುದೊಡ್ಡ ಪ್ರಶ್ನೆ ಬಹುತೇಕರನ್ನು ಕಾಡುತ್ತಿದೆ.

ಸಚಿವೆಯೊಬ್ಬರು ತಮ್ಮ‌ ಮನೆಯ ಪಕ್ಕದಲ್ಲಿ ಅಂಗನವಾಡಿ ಕಾರ್ಯಕರ್ತರ ಸಭೆ ಮಾಡುವಾಗಲೇ ದಾಳಿ ಮಾಡಿ ಅಧಿಕಾರಿಗಳು ಕೇಸ್ ಜಡಿದಿದ್ದರು. ಆದರೆ ನಾಡದ್ರೋಹಿ ಎಂಇಎಸ್ ಇಷ್ಟೆಲ್ಲ ಅನುಮತಿ ಇಲ್ಲದೇ ಸಭೆ ನಡೆಸಿದ್ದರೂ ಅಧಿಕಾರಿಗಳು ಮೌನವಹಿಸಿದ್ದು ಏಕೆ ಎನ್ನುವುದು ಸಂಶಯಕ್ಕೆ ಕಾರಣವಾಗಿದೆ.

ಇದನ್ನು ಹೊರತುಪಡಿಸಿದರೆ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಈಗಿನಿಂದಲೇ ಕಾಂಚಾಣ ಸದ್ದು ಮಾಡುತ್ತಿದೆ ಎನ್ನುವ ದೊಡ್ಡ ಸುದ್ದಿ ಹೊರಬಿದ್ದಿದೆ.

ತಮಿಳುನಾಡು ಮೂಲದ ಗುತ್ತಿಗೆದಾರರೊಬ್ಬರು ಅನ್ನದ ಋಣ ತೀರಿಸುವ ಕೆಲಸ ಮಾಡಿದ್ದಾರೆಂದು ಹೇಳಲಾಗುತ್ತಿದೆ.

ಇದರ ಜೊತೆಗೆ ಬೇರೆ ಬೇರೆ ಜಿಲ್ಲೆಯ ಇಂಜನೀಯರುಗಳು, ಅಧಿಕಾರಿಗಳು, ಸಣ್ಣಪುಟ್ಟ ಗುತ್ತಿಗೆದಾರರು ತಮ್ಮ ಉಪಕಾರ ತೀರಿಸುವ ಕೆಲಸ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕ್ಷೇತ್ರದ ತುಂಬ ಹರಿದಾಡುತ್ತಿದೆ.

ಆದರೆ ಇದರ ಬಗ್ಗೆ ಚುನಾವಣಾಧಿಕಾದಿಕಾರಿಗಳು ಎಚ್ಚರ ವಹಿಸಬೇಕಾಗಿದೆ. ಇಲ್ಲಿ ಚೆಕ್ ಪೋಸ್ಟ ದಿಕ್ಕುತಪ್ಪಿಸಿ ಕೋಟಿ ಕೋಟಿ ಹಣ ಕಳ್ಳ ಮಾರ್ಗದ ಮೂಲಕ ಬೆಳಗಾವಿ ಸೇರುತ್ತಿದೆ ಎನ್ನುವ ಮಾತಿದೆ.

Leave a Reply

Your email address will not be published. Required fields are marked *

error: Content is protected !!