ಬ್ರಾಹ್ಮಣ ಸಮಾಜದ ಸಭೆಯಲ್ಲಿ ಶೆಟ್ಟರ್ ಭವಿಷ್ಯ
`ಕಾಂಗ್ರೆಸ್ 50 ಸ್ಥಾನ ಕೂಡ ಗೆಲ್ಲಲ್ಲ’
ಬೆಳಗಾವಿ ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ್ ಸಭೆಯಲ್ಲಿ ಶೆಟ್ಟರ್ ಮಾತು.
ಬೆಳಗಾವಿ ನಂಟು ಬಿಚ್ಚಿಟ್ಟ ಶೆಟ್ಟರ್, ಹೊರಗಿನವ ಎನ್ನುವುದಕ್ಕೆ ಅರ್ಥವೇ ಇಲ್ಲ.
ಬಲಾಢ್ಯ ಮೋದಿ ನಾಯಕತ್ವ. ದುರ್ಬಲ ನಾಯಕತ್ವ ರಾಹುಲ್ ಗಾಂಧಿ.
ಪ್ರಲ್ಹಾದ ಜೋಶಿ ಬಗ್ಗೆ ಶೆಟ್ಟರ ಏನಂದ್ರು? ಹಾರನಹಳ್ಳಿ ಜೊತೆ ಅಭಯ ಮಾತುಕತೆ ಏನು?
ಹಾರನಹಳ್ಳಿ – ಅಭಯ ಮಾತುಕತೆ

ಧಾರವಾಡ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ವಿರುದ್ಧ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಬಾ ಅಧ್ಯಕ್ಷ ಅಶೋಕ ಹಾರನಹಳ್ಳಿಯವರು ಶಾಸಕ ಅಭಯ ಪಾಟೀಲರೊಂದಿಗೆ ಮಾತುಕತೆ ನಡೆಸಿದರು, ಈಗಾಗಲೇ ಈ ನಿಟ್ಟಿನಲ್ಲಿ ಎಲ್ಲರೂ ಕೂಡಿ ಸಮಸ್ಯೆ ಬಗೆಹರಿಸಲು ಪ್ರಯತ್ನ ನಡೆಸಿದ್ದಾರೆ ಎಂದು ಶಾಸಕ ಅಭಯ ಪಾಟೀಲರು ಹಾರಹನಹಳ್ಳಿಯವರಿಗೆ ಭರವಸೆ ನೀಡಿದರು,
ಬೆಳಗಾವಿ.
ಲೋಕಸಭೆ ಚುನಾವಣೆಯಲ್ಲಿ ನಾಲ್ಕನೂರಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಬಿಜೆಪಿ ಸಂಸದರು ಬೇಕೋ ಅಥವಾ 50 ಸ್ಥಾನ ಗೆಲ್ಲುವಷ್ಟೂ ಗತಿಯಿಲ್ಲದ ಕಾಂಗ್ರೆಸ್ ಬೇಕೋ ಎನ್ನುವುದನ್ನು ಪ್ರಜ್ಞಾವಂತ ಮತದಾರರು ಚಿಂತನೆ ಮಾಡಬೇಕಾದ ಅವಶ್ಯಕತೆಯಿದೆ ಎಂದು ಬಿಜೆಪಿ ಅಭ್ಯರ್ಥಿ ಹಾಗು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು,
ನಗರದಲ್ಲಿ ಸೋಮವಾರ ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ್ ಆಯೋಜಿಸಿದ ಸಭೆಯಲ್ಲಿ ಅವರು ಮಾತನಾಡಿದರು,
ಪ್ರಧಾನಿ ಮೋದಿಯವರಂತಹ ಬಲಾಢ್ಯ ನಾಯಕತ್ವ ಒಂದು ಕಡೆಯಾದರೆ, ಮತ್ತೊಂದು ಕಡೆಗೆ ಕಾಂಗ್ರೆಸ್ನ ದುರ್ಬಲ ನಾಯಕತ್ವವಿದೆ. ಈ ಚುನಾವಣೆಯಲ್ಲಿ ಬಿಜೆಪಿ ನಾಲ್ಕನೂರಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು,

ಮೋದಿಯವರೇ ಮತ್ತೊಮ್ಮೆ ಪ್ರಧಾನಿ ಆಗಬೇಕು ಎನ್ನುವುದು ಎಲ್ಲರ ಆಶಯವಾಗಿದೆ, ಈ ನಿಟ್ಟಿನಲ್ಲಿ ಎಲ್ಲರೂ ಈ ಬಾರಿ ನನಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ನಾನು ಹೊರಗಿನವ ಎನ್ನುವ ವಿರೋಧಿಗಳ ಆರೋಪವನ್ನು ಅಲ್ಲಗಳೆದ ಶೆಟ್ಟುರ್, ಬೆಳಗಾವಿಗೂ ನನಗೂ ಮೂವತ್ತು ವರ್ಷದ ನಂಟಿದೆ. .
ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕನಿದ್ದಾಗ ಹಲವು ಅಭಿವೃದ್ದಿ ಕಾರ್ಯದ ಜೊತೆಗೆ ಪಕ್ಷ ಸಂಘಟನೆ ಕೂಡ ಮಾಡಿದ್ದೇನೆ. ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೇ ಸುವರ್ಣಸೌಧ ಉದ್ಘಾಟನೆ ಆಗಿದ್ದು ನನ್ನ ಸೌಭಾಗ್ಯ ಎಂದರು,
ಹುಬ್ಬಳ್ಳಿ ಧಾರವಾಡ ನನ್ನ ಜನ್ಮ ಭೂಮಿಯಾದರೆ ಬೆಳಗಾವಿ ನನ್ನ ಕರ್ಮ ಭೂಮಿ. ದಿ, ಸುರೇಶ ಅಂಗಡಿಯವರು ಬೆಳಗಾವಿ ಅಭಿವೃದ್ಧಿ ಬಗ್ಗೆ ಎಲ್ಲರೊಂದಿಗೂ ಚರ್ಚೆ ಮಾಡುತ್ತಿದ್ದರು. ಆಗ ನಾನು ಕೂಡ ಹಲವು ಸಲಹೆ ಕೊಟ್ಟಿದ್ದೆ ಎನ್ನುವುದನ್ನು ಸ್ಮರಿಸಿಕೊಂಡರು,
ಹಿಂದೆ ಕೈಗಾರಿಕೆ ಅಭಿವೃದ್ಧಿ ಆಗಬೇಕು ಎನ್ನುವ ದೃಷ್ಟಿಯಿಂದ ಬೆಂಗಳೂರಿನಿಂದ ಆಚೆ ಎನ್ನುವ ಕೈಗಾರಿಕಾ ನೀತಿಯನ್ನು ಜಾರಿಗೆ ತರಲಾಗಿತ್ತು, ಈ ಹಿನ್ನೆಲೆಯಲ್ಲಿ ಇನ್ನು ಮುಂದೆಯೂ ಕೂಡ ಕೈಗಾರಿಕೆಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ನಾನು ನಿಮ್ಮೆಲ್ಲರ ಆಶೀರ್ವಾದದಿಂದ ಎಂಪಿಯಾದರೆ ಬೆಳಗಾವಿಗೆ ಪ್ರಥಮ ಆಧ್ಯತೆ. ಕೊಡುತ್ತೇನೆ. ಬೆಳಗಾವಿ ನಮ್ಮದು ಎನ್ನುವ ರೀತಿಯಲ್ಲಿ ಬೆಳವಣಿಗೆ ಮಾಡುತ್ತೇನೆ. ದಕ್ಷಿಣ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಶಾಸಕ ಅಭಯ ಪಾಟೀಲ ಎಂದಿಗೂ ಹಿಂದೆ ಬಿದ್ದಿಲ್ಲ. ಹೀಗಾಗಿ ಈ ಕ್ಷೇತ್ರ ಮಾದರಿಯಾಗಿದೆ ಎಂದು ಜಗದೀಶ ಶೆಟ್ಟರ್ ಹೇಳಿದರು.
ಬಿಜೆಪಿ ಅಂದರೆ ಬ್ರಾಹ್ಮಣ ಸಮಾಜ.!.

ಜನಸಂಘವನ್ನು ಕಟ್ಟಿ ಬೆಳೆಸಿದ ಬ್ರಾಹ್ಮಣ ಸಮಾಜ ಯಾವಾಗಲೂ ಹಿಂದುತ್ವಕ್ಕಾಗಿ ಬಿಜೆಪಿಯನ್ನು ಬೆಂಬಲಿಸುತ್ತ ಬಂದಿದೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು,
ಚುನಾವಣೆ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ಸಭೆ ಮಾಡುವ ಅವಶ್ಯಕತೆಯೇ ಇಲ್ಲ. ಏಕೆಂದರೆ ಬಿಜೆಪಿ ಅಂದರೆ ಬ್ರಾಹ್ಮಣ ಸಮಾಜ ಎಂದರು.
ಇಲ್ಲಿ ತಾವಷ್ಟೇ ಅಲ್ಲ ಇನ್ನುಳಿದವರನ್ನೂ ಬಿಜೆಪಿಗೆ ಮತ ಹಾಕಿಸುವಂತೆ ಮಾಡುವ ಜವಾಬ್ದಾರಿ ಬ್ರಾಹ್ಮಣ ಸಮಾಜದ ಮೇಲಿದೆ ಎಂದರು,
ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರು ಸೇರಿದಂತೆ ಇನ್ನುಳಿದ ಮಂತ್ರಿ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿದ ಜಗದೀಶ ಶೆಟ್ಟರ್ ಅವರಂತಹ ಅನುಭವಿ ಅಭ್ಯರ್ಥಿ ಒಂದು ಕಡೆಯಾದರೆ, ಮತ್ತೊಂದು ಕಡೆಗೆ `ಖಾಲಿ ಡಬ್ಬಾ’ ಎಂದು ಯಾರ ಹೆಸರನ್ನೂ ಉಲ್ಲೇಖಿಸದೇ ವ್ಯಂಗ್ಯವಾಡಿದರು,

ಇಲ್ಲಿ ಕಾಂಗ್ರೆಸ್ಗೆ ಮತ ಹಾಕಿದರೆ ರಾಹುಲ್ ಗಾಂಧಿಗೆ ಮತ್ತು ಬಿಜೆಪಿಗೆ ಮತ ಹಾಕಿದರೆ ಮೋದಿಗೆ ಹೋಗುತ್ತದೆ.
ಬಟಾಟಿಯನ್ನು ಯಂತ್ರದಲ್ಲಿ ಹಾಕಿದರೆ ಬಂಗಾರ ಬರುತ್ತದೆ ಎಂದು ಹೇಳುವ ಕಾಂಗ್ರೆಸ್ನ ರಾಹುಲ್ ಗಾಂಧಿಬೇಕೋ ಅಥವಾ ದೇಶವನ್ನು ಸಮಥರ್ಧವಾಗಿ ಮುನ್ನಡೆಸುವ ನರೇಂದ್ರ ಮೋದಿಯಂತಹ ಪ್ರಧಾನಿ ಬೇಕೋ ಎನ್ನುವುದರ ಬಗ್ಗೆ ಆಲೋಚನೆ ಮಾಡಬೇಕು ಎಂದರು,
ಎಲ್ಲರೂ ಬಿಜೆಪಿಯವರು…!
ನಮ್ಮ ದಕ್ಷಿಣ ಕ್ಷೇತ್ರದಲ್ಲಿ ನಗರ ಸೇವಕರು, ಮೇಯರ್, ಉಪಮೇಯರ್ ಮತ್ತು ಶಾಸಕರೂ ಬಿಜೆಪಿಯವರು, ಹೀಗಾಗಿ ಸಂಸದರೂ ಕೂಡ ಬಿಜೆಪಿಯವರೇ ಅಗಬೇಕು ಎಂದು ಶಾಸಕ ಅಭಯ ಪಾಟೀಲ ಹೇಳಿದರು,
ಈ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳ ಬಗ್ಗೆ ಯಾರಿಗೂ ಹೇಳುವ ಅವಶ್ಯಕತೆಯೇ ಇಲ್ಲ. ಎಲ್ಲರಿಗೂ ಗೊತ್ತಿದೆ. ಉದ್ಯಮಬಾಗದಲ್ಲಿ ರಸ್ತೆ ನಿರ್ಮಾಣ ಕುರಿತಂತೆ ಉದ್ಯಮಿಯೂ ಆಗಿರುವ ಬ್ರಾಹ್ಮಣ ಸಮಾಜದ ಅಧ್ಯಕ್ಷರೂ ಆಗಿರುವ ರಾಮ ಭಂಡಾರಿ ಅವರ ಒತ್ತಡದ ಪರಿಣಾಮ ಗುಣಮಟ್ಟದ ರಸ್ತೆ ನಿರ್ಮಾಣವಾಗಿದೆ ಎಂದರು,

ಬ್ರಾಹ್ಮಣ ಸಮಾಜ ಟ್ರಸ್ಟನ ಅಧ್ಯಕ್ಷ ರಾಮ ಭಂಡಾರಿ, ಭರತ ದೇಶಪಾಂಡೆ, ವಿಲಾಸ ಬಾದಾಮಿ, ವಿಲಾಸ ಜೋಶಿ, ದಿವಾಕರ ದೇಶಪಾಂಡೆ ಮತ್ತಿತರರು ಮಾತನಾಡಿ ಸಮಾಜದ ಪರ ನಿಲ್ಲುವಂತೆ ಮನವಿ ಮಾಡಿದರು.
ಮಹಾನಗರ ಪಾಲಿಕೆಯ ಪಿಡಬ್ಲುಡಿ ಕಮಿಟಿ ಅಧ್ಯಕ್ಷೆ ವಾಣಿ ಜೋಶಿ, ಜಯತೀರ್ಥ ಸವದತ್ತಿ, ಉಪಮೇಯರ್ ಆನಂದ ಚವ್ಹಾಣ, ಮಂಗೇಶ ಪವಾರ್, ನಿತಿನ್ ಜಾಧವ ಮತ್ತಿತರರು ಉಪಸ್ಥಿತರಿದ್ದರು.
ಜೋಶಿ ಜೊತೆ ಮಾತಾಡಿದ್ದೇನೆ..!

ಧಾರವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ವಿರುದ್ಧ ನಡೆದ ಅಸಮಾಧಾನವನ್ನು ದೂರ ಮಾಡುವ ನಿಟ್ಟಿನಲ್ಲಿ ಬ್ರಾಹ್ಮಣ ಸಮಾಜ ಈ ಸಂದರ್ಭದಲ್ಲಿ ಮನವಿ ಪತ್ರವನ್ನು ಅರ್ಪಿಸಿತು,
ಜಗದೀಶ ಶೆಟ್ಟರ್ ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಸಾರಥ್ಯವಹಿಸಬೇಕು, ಆದರೆ ಶೆಟ್ಟರ್ ಅವರ ಮನವೊಲಿಸುವ ಕೆಲಸವನ್ನು ಶಾಸಕ ಅಭಯ ಪಾಟೀಲರು ಮಾಡಬೇಕು ಎಂದು ಈ ಸಂದರ್ಭದಲ್ಲಿ ಕೇಳಿಕೊಳ್ಳಲಾಯಿತು,