Headlines

ಭದ್ರಕೋಟೆ ಗಟ್ಟಿಮಾಡಿಕೊಳ್ಳಲು ಜಾರಕಿಹೊಳಿ ರಣತಂತ್ರ

ಹೆಬ್ಬಾಳಕರ ತಂತ್ರಕ್ಕೆ ಜಾರಕಿಹೊಳಿ ಸಹೋದರರ ಪ್ರತಿ ತಂತ್ರ
ಗೋಕಾಕ, ಅರಭಾವಿಯಲ್ಲಿಂದು ಬಿಜೆಪಿ ಸಮಾವೇಶ
ಭದ್ರಕೋಟೆ ಗಟ್ಟಿಮಾಡಿಕೊಳ್ಳಲು ಜಾರಕಿಹೊಳಿ ರಣತಂತ್ರ

ಬೆಳಗಾವಿ.
ಲೋಕ ಸಮರಕ್ಕೆ ಇನ್ನೂ ಅಧಿಸೂಚನೆ ಹೊರಬಿದ್ದಿಲ್ಲ. ಆದರೆ ಎರಡೂ ಪಕ್ಷಗಳಲ್ಲಿ ಜಿದ್ದು ಮನೆ ಮಾಡಿದೆ.
ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭೆ ಕ್ಷೇತ್ರಗಳು ಈಗಲೇ ಹೈ ವೋಲ್ಟೇಜ್ ಕ್ಷೇತ್ರ ಎನಿಸಿಕೊಂಡಿವೆ. ಇನ್ನು ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಗಬಹುದು ಎನ್ನುವುದನ್ನು ಈಗಲೇ ಊಹಿಸಲಾಗದು,
ಮತದಾರರನ್ನು ಓಲೈಸಿಕೊಳ್ಳಲು ಎರಡೂ ಪಕ್ಷದವರು ಎಲ್ಲ ಅಸ್ತ್ರಗಳನ್ನು ಪ್ರಯೋಗಿಸಿದರೂ ಅಚ್ಚರಿ ಪಡಬೇಕಿಲ್ಲ.
ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಕೂಡ ಆ ಪಕ್ಷಕ್ಕೆ ಒಂದಿಷ್ಟು ಅನುಮಾನಗಳು ಕಾಡುತ್ತಿವೆ. ಮತ್ತೊಂದು ಕಡೆಗೆ ಬಿಜೆಪಿ ಹಿಡಿತದಲ್ಲಿರುವ ವಿಧಾನಭೆ ಕ್ಷೇತ್ರಗಳನ್ನೇ ಗುರಿಯಾಗಿಟ್ಟುಕೊಂಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅಲ್ಲಿ ತಂತ್ರಕ್ಕೆ ಪ್ರತಿ ತಂತ್ರ ಹೆಣೆಯುತ್ತಿದ್ದಾರೆ.

ಇಲ್ಲಿಯವರೆಗೆ ಕಾಂಗ್ರೆಸ್ನ ಕೆಲವೊಂದು ತಂತ್ರಗಳು ಫಲಿಸದ ಹಾಗೆ ನೋಡಿಕೊಳ್ಳುತ್ತಿರುವ ಬಿಜೆಪಿ ಈಗ ಮಾಡು ಇಲ್ಲವೇ ಮಡಿ ಎನ್ನುವಂತೆ ಅಖಾಡಾದಲ್ಲಿ ಧುಮುಕಿದೆ. ಯಾವುದೇ ಕಾರಣಕ್ಕೂ ತಮ್ಮ ಕ್ಷೇತ್ರದ ಜೊತೆಗೆ ಕಾಂಗ್ರೆಸ್ ಕ್ಷೇತ್ರದಲ್ಲೂ ಕೂಡ ಬಿಜೆಪಿಗೆ ಹೆಚ್ಚಿನ ಮತಗಳು ಬರಬೇಕು ಎನ್ನುವ ನಿಟ್ಟಿನಲ್ಲಿ ಕಸರತ್ತು ನಡೆಸಿದ್ದಾರೆ, ಇಲ್ಲಿ ಕಾಂಗ್ರೆಸ್ನ ಕೆಲವರು ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನುವ ಗುಸು ಗುಸು ಚಚರ್ೆ ಕೂಡ ನಡೆದಿದೆ,
ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಅರಭಾವಿ, ಗೋಕಾಕ, ಬೆಳಗಾವಿ ದಕ್ಷಿಣ ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಇದ್ದಾರೆ, ಇಲ್ಲಿ ಸಹಜವಾಗಿ ಕಾಂಗ್ರೆಸ್ಗೆ ನಿರೀಕ್ಷಿತ ಮಟ್ಟದಲ್ಲಿ ಮತಗಳು ಬರಲ್ಲ ಎನ್ನುವ ಮಾತುಗಳಿವೆ,


ಹೀಗಾಗಿ ಈಗ ಸಚಿವೆ ಹೆಬ್ಬಾಳಕರ ಅವರು ತಮ್ಮ ದಂಡು ಕಟ್ಟಿಕೊಂಡು ಇದೇ ಕ್ಷೇತ್ರಗಳನ್ನೇ ಗುರಿಯಾಗಿಟ್ಟುಕೊಂಡು ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ.
ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಮತ್ತು ರಮೇಶ ಜಾರಕಿಹೊಳಿ ಅವರು ಅರಭಾವಿ ಮತ್ತು ಗೋಕಾಕ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಸಚಿವೆ ಹೆಬ್ಬಾಳಕರ ಅವರು ಅದೇ ಕ್ಷೇತ್ರದಲ್ಲಿ ಇಂದು ಪ್ರಚಾರ ನಡೆಸಿದರು,
ಆದರೆ ನಾಳೆ ದಿ. 7 ರಂದು ನಡೆಯಲಿರುವ ಅರಭಾವಿ ಮತ್ತು ಗೋಕಾಕದಲ್ಲಿ ನಡೆಯುವ ಸಮಾವೇಶದ ಮೂಲಕ ಜಾರಕಿಹೊಳಿ ಸಹೋದರರು ಜಿದ್ದಿಗೆ ಬಿದ್ದಂತೆ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಸ್ಪಷ್ಟ.

laxmi hebbalkar


ಈಗಲೂ ಕೂಡ ಈ ಎರಡೂ ಕ್ಷೇತ್ರದಲ್ಲಿ ಬಹುತೇಕರನ್ನು ಚುನಾವಣೆ ಸಂಬಂಧ ಮಾತನಾಡಿಸಿದರೆ, ನಮಗೆ ಜಾರಕಿಹೊಳಿ ಸಹೋದರರು ಮುಖ್ಯ, ಅವರು ಏನು ಹೇಳುತ್ತಾರೆಯೋ ಅದನ್ನೇ ಮಾಡುತ್ತೇವೆ ಎನ್ನುವ ಮಾತನ್ನು ಹೇಳುತ್ತಾರೆ, ಆದರೆ ಜನರ ಈ ಮನಸ್ಥಿತಿಯನ್ನು ಸಚಿವೆ ಹೆಬ್ಬಾಳಕರ ಹೇಗೆ ಬದಲಿಸಬಲ್ಲರು ಎನ್ನುವುದನ್ನು ಕಾದು ನೋಡಬೇಕಿದೆ.
ಇನ್ನು ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಈ ಹಿಂದೆ ಸತೀಶ ಜಾರಕಿಹೊಳಿ ಅತೀ ಹೆಚ್ಚು ಸಂಚಾರ ಮಾಡಿದ್ದರು, ಅಷ್ಟೇ ಅಲ್ಲ ಕಳೆದ ಬಾರಿ ಎಂಇಎಸ್ ಅಭ್ಯಥರ್ಿಗೆ ಎಲ್ಲ ರೀತಿಯ ನೆರವನ್ನೂ ಕೂಡ ಮಾಡಿದ್ದರು, ಆದರೂ ಅಲ್ಲಿ ಬಿಜೆಪಿ ಅಭ್ಯಥರ್ಿ ಗೆಲುವು ಸಾಧಿಸಿತು ಎನ್ನುವುದು ಬೇರೆ ಮಾತು,


ಗಮನಿಸಬೇಕಾದ ಸಂಗತಿ ಎಂದರೆ, ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನೆ ಗಟ್ಟಿಯಾಗಿಲ್ಲ ಎನ್ನುವುದನ್ನು ಸಚಿವ ಸತೀಶ ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ. ಲೋಕಸಮರದಲ್ಲಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಚಿಕ್ಕೋಡಿಯಿಂದ ಸ್ಪಧರ್ೆ ಮಾಡಿದ್ದರಿಂದ ಸಹಜವಾಗಿ ಸಚಿವ ಜಾರಕಿಹೊಳಿ ಬೆಳಗಾವಿ ಬಗ್ಗೆ ಅಷ್ಟೊಂದು ಆಸಕ್ತಿ ತೋರುತ್ತಿಲ್ಲ ಎನ್ನುವ ಮಾತುಗಳಿವೆ.


ವಿಶೇಷವಾಗಿ ಈ ಕ್ಷೇತ್ರದಲ್ಲಿ ಮರಾಠಾ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಎಂಇಎಸ್ ಅಸ್ತಿತ್ವ ಈಗ ಇದ್ದೂ ಇಲ್ಲದಂತಾಗಿದೆ, ಇದರ ಜೊತೆಗೆ 30 ಸಾವಿರದಷ್ಟಿರುವ ಬ್ರಾಹ್ಮಣ ಸಮುದಾಯದ ಮತಗಳು ಲೀಡ್ ಗೆ ನಿಣರ್ಾಯಕವಾಗಲಿವೆ,
ಇದರ ಜೊತೆಗೆ ದಕ್ಷಿಣ ಕ್ಷೇತ್ರದಿಂದಲೇ ಕನಿಷ್ಟ 35 ಸಾವಿರ ಮತಗಳ ಲೀಡ್ ಬಿಜೆಪಿಗೆ ಕೊಡಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ, ಅದಕ್ಕೆ ಸಂಬಂಧಿಸಿದಂತೆ ನಗರಸೇವಕರ ಮತ್ತು ಬೂತ್ ಮಟ್ಟದ ಪದಾಧಿಕಾರಿಗಳ ಸಭೆಯನ್ನೂ ಕೂಡ ಮಾಡಲಾಗುತ್ತಿದೆ,
ಗಮನಿಸಬೇಕಾದ ಸಂಗತಿ ಎಂದರೆ, ಲೋಕಸಭೆಯ ಪ್ರತಿಯೊಂದು ಚುನಾವಣೆಯಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರ ಬಿಜೆಪಿಗೆ ಲೀಡ್ ಕೊಡುತ್ತಲೇ ಬಂದಿದೆ, ಈಗ ಅದರ ದಾಖಲೆ ಮುರಿಯಬೇಕು ಎನ್ನುವ ಪ್ರಯತ್ನದಲ್ಲಿ ಶಾಸಕ ಅಭಯ ಪಾಟೀಲ ಇದ್ದಾರೆ,

ಒಟ್ಟಾರೆ ಅರಭಾವಿ, ಗೋಕಾಕ ಮತ್ತು ಬೆಳಗಾವಿ ದಕ್ಷಿಣದಿಂದ ಯಾರು ಯಾರಿಗೆ ಲೀಡ್ ಕೊಡುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

ಬಿಜೆಪಿ ನಗರ ಸೇವಕನ ಮನೆಗೆ ಕಾಂಗ್ರೆಸ್ ದಂಡು…!
ಬೆಳಗಾವಿ ದಕ್ಷಿಣ ಮತ್ತು ಉತ್ತರ ಕ್ಷೇತ್ರದ ಬಿಜೆಪಿ ನಗರಸೇವಕರನ್ನು ಸೆಳೆದುಕೊಳ್ಳಲು ಕಾಂಗ್ರೆಸ್ ತಂತ್ರ ನಡೆಸಿದೆ.

ಇದನ್ನೊಮ್ಮೆ ಕೇಳಿ… ಮತ್ತೆ ಕೇಳಬೇಕು ಅನಿಸ್ತದೆ


ಇತ್ತೀಚೆಗೆ ದಕ್ಷಿಣ ಕ್ಷೇತ್ರದಲ್ಲಿರುವ ಬಿಜೆಪಿ ನಗರ ಸೇವಕರೊಬ್ಬರ ಮನೆಗೆ ಕಾಂಗ್ರೆಸ್ ದಂಡು ಭೆಟ್ಟಿ ನೀಡಿದ್ದು ಆ ಪಕ್ಷದಲ್ಲಿಯೇ ವಲಯದಲ್ಲಿಯೇ ವಿಭಿನ್ನ ಚಚರ್ೆಗೆ ಎಡೆ ಮಾಡಿಕೊಟ್ಟಿದೆ.
ಕಾಂಗ್ರೆಸ್ ದಂಡು ಬಂದ ಸಂದರ್ಭದಲ್ಲಿ ಅವರನ್ನು ಸ್ವಾಗತಿಸಿದ ರೀತಿಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ, ಈ ಸುದ್ದಿ ಗೊತ್ತಾಗುತ್ತಿದ್ದಂತೆಯೇ ಬಿಜೆಪಿ ಶಾಸಕರು ಆ ನಗರಸೇವಕರನ್ನು ಕರೆದು ತಮ್ಮದೇ ಶೈಲಿಯಲ್ಲಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ ಎಂದು ಗೊತ್ತಾಗಿದೆ.


Leave a Reply

Your email address will not be published. Required fields are marked *

error: Content is protected !!